ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ಗಪ್ ಚುಪ್ ಪ್ರೀತಿ ಶುರುವಾಗಿದ್ದು ಶಾಂಪು ಜಾಹೀರಾತಿನಿಂದ. 2013ರಲ್ಲಿ ಕೊಹ್ಲಿ ಹಾಗೂ ಅನುಷ್ಕಾ ಮೊದಲ ಬಾರಿಗೆ ಭೇಟಿಯಾಗಿದ್ದರು. ಇವರ ಮೊದಲ ಭೇಟಿಯ ಸವಿನೆನಪನ್ನು ಸ್ವತಃ ವಿರಾಟ್ ಕೊಹ್ಲಿ ಬಹಿರಂಗ ಪಡಿಸಿದ್ದಾರೆ.
ಮಂಬೈ(ಸೆ.06): ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಗೂ ಬಾಲಿವುಡ್ ನಟಿ ಅನುಷ್ಕಾ ಶರ್ಮಾ 2017ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಆದರೆ ಇವರಿಬ್ಬರ ಪ್ರೀತಿ ಹೆಜ್ಜೆಗಳು ಆರಂಭವಾಗಿದ್ದು 2013ರಲ್ಲಿ. ಕ್ರಿಕೆಟ್‌ನಲ್ಲಿ ದಾಖಲೆ ಬರೆಯುತ್ತಿದ್ದ ವಿರಾಟ್ ಕೊಹ್ಲಿ ಜಾಹೀರಾತು ಕಂಪನಿಗಳಿಂದ ಬಹುಬೇಡಿಕೆ ಶುರುವಾಗಿತ್ತು. ಇತ್ತ ಬಾಲಿವುಡ್‍ನ ಖಾನ್ಸ್ ಜೊತೆ ಸೂಪರ್ ಹಿಟ್ ಚಿತ್ರ ನೀಡಿದ ಅನುಷ್ಕಾ ಕೂಡ ಜನಪ್ರಿಯರಾಗಿದ್ದರು. ಇವರಿಬ್ಬರನ್ನು ಜೊತೆಯಾಗಿಸಿದ್ದು ಶಾಂಪು ಜಾಹೀರಾತು.
ಇದನ್ನೂ ಓದಿ: ವಿರಾಟ್ ಕೊಹ್ಲಿ ಯಾವತ್ತೂ ಕೂಲ್ ಕೂಲ್; ಪತ್ನಿ ಅನುಷ್ಕಾ ಸರ್ಟಿಫಿಕೇಟ್!
2013ರಲ್ಲಿ ಶಾಂಪು ಜಾಹೀರಾತಿಗಾಗಿ ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ಮೊದಲ ಬಾರಿಗೆ ಭೇಟಿಯಾಗಿದ್ದರು. ಮೊದಲ ಭೇಟಿ ಕುರಿತು ಅಮೇರಿಕಾದ ಖಾಸಗಿ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಬಹಿರಂಗ ಪಡಿಸಿದ್ದಾರೆ. ಶಾಂಪು ಜಾಹೀರಾತಿಗಾಗಿ ಶೂಟಿಂಗ್ ಸೆಟ್‌ಗೆ ಆಗಮಿಸಿದ ನಾನು ನರ್ವಸ್ ಆಗಿದ್ದೆ. ಶೂಟಿಂಗ್‌ನಲ್ಲಿ ನಾನು ಪಳಗಿದವನಲ್ಲ. ಜೊತೆಗೆ ನಟನೆ ಕೂಡ ಕಷ್ಟವೆನಿಸಿತ್ತು. ಹೀಗಾಗಿ ಸೆಟ್‌ನಲ್ಲಿ ಸುಮ್ಮನೆ ಕುಳಿತಿದ್ದೆ. ಏನು ಮಾತನಾಡಬೇಕು ಅನ್ನೋದು ಕೂಡ ತೋಚಲಿಲ್ಲ. ಹೀಗಾಗಿ ಸಣ್ಣ ಜೋಕ್ ಹೇಳಲು ನಿರ್ಧರಿಸಿದೆ.
ಇದನ್ನೂ ಓದಿ: ಕೊಹ್ಲಿ -ರೋಹಿತ್ ನಡುವೆ ವಾರ್; ಸೀಕ್ರೆಟ್ ಬಿಚ್ಚಿಟ್ಟ ಅನುಷ್ಕಾ ಶರ್ಮಾ!
ಅನುಷ್ಕಾ ಎತ್ತರದ ಹೀಲ್ಸ್ ಧರಿಸಿದ್ದರು. ಹೀಗಾಗಿ ನನಗಿಂತ ಎತ್ತರ ಕಾಣಿಸುತ್ತಿದ್ದರು. ಇದನ್ನೇ ಆಧಾರವಾಗಿಟ್ಟುಕೊಂಡು ಆಕೆಯ ಹೀಲ್ಸ್ ಕುರಿತು ಜೋಕ್ ಮಾಡಿದೆ. ಆದರೆ ಆ ಸಂದರ್ಭಕ್ಕೆ ಆ ಜೋಕ್ ಕೆಟ್ಟದಾಗಿತ್ತು. ಇದಕ್ಕಿಂತ ಎತ್ತರವಾದ ಹೀಲ್ಸ್ ಸಿಗಲಿಲ್ಲವೇ ಎಂದು ಜೋಕ್ ಮಾಡಿದೆ. ತಕ್ಷಣ ತಿರುಗೇಟು ನೀಡಿದ ಅನುಷ್ಕಾ ನಾನು 6 ಫೀಟ್‌ಗಿಂತ ಹೆಚ್ಚಿಲ್ಲ. ನಾನು ಎತ್ತರವಾಗಿಯೂ ಇಲ್ಲ ಎಂದರು.
ಇದನ್ನೂ ಓದಿ: ಜಿಮ್ ವರ್ಕೌಟ್‌ನಲ್ಲಿ ಕೊಹ್ಲಿಯನ್ನು ಮೀರಿಸಿದ ಅನುಷ್ಕಾ!
ಅನುಷ್ಕಾ ಸೆಟ್‌ನಲ್ಲಿ ಆತ್ಮವಿಶ್ವಾಸದಿಂದ ಇದ್ದಳು. ಆದರೆ ನನಗೆ ಅದು ಸಾಧ್ಯವಾಗಿರಲಿಲ್ಲ. ಜೊತೆಗೆ ಕೆಟ್ಟ ಜೋಕ್ ಕೂಡ ನನ್ನ ಆತ್ಮವಿಶ್ವಾಸಕ್ಕೆ ಪೆಟ್ಟು ನೀಡಿತ್ತು ಎಂದು ಕೊಹ್ಲಿ 2013ರ ಸವಿ ನೆನಪನ್ನು ಬಿಚ್ಚಿಟ್ಟರು. ನಾವಿಬ್ಬರು ಮಧ್ಯಮ ವರ್ಗದಿಂದ ಬಂದಿದ್ದೇವೆ. ನಮಗೆ ಯಾರೂ ಕೂಡ ಗಾಡ್‌ಫಾದರ್ ಇರಲಿಲ್ಲ. ಕಷ್ಟಪಟ್ಟು ಈ ಸ್ಥಾನಕ್ಕೆ ತಲುಪಿದ್ದೇವೆ ಹೀಗಾಗಿ ನಮ್ಮ ಕೆಮೆಸ್ಟ್ರಿ ಉತ್ತಮವಾಗಿದೆ ಎಂದು ಕೊಹ್ಲಿ ಹೇಳಿದರು.