ಯುಎಸ್‌ ಓಪನ್‌: ಸೆಮೀಸ್‌ಗೆ ಕಾಲಿಟ್ಟ ನಡಾಲ್‌!

By Web Desk  |  First Published Sep 6, 2019, 10:08 AM IST

ಯುಎಸ್‌ ಓಪನ್‌ ಟೆನಿಸ್‌ ಗ್ರ್ಯಾಂಡ್‌ಸ್ಲಾಂ ಟೂರ್ನಿಯಲ್ಲಿ ಸ್ಪೇನ್ ದಿಗ್ಗಜ ರಾಫೆಲ್ ನಡಾಲ್  ಪ್ರಶಸ್ತಿ ಕೈವಶ ಮಾಡೋ ಎಲ್ಲಾ ಸಾಧ್ಯತೆ ದಟ್ಟವಾಗಿದೆ. ಅರ್ಜೆಂಟೀ​ನಾದ ಡೀಗೋ ವಿರುದ್ಧ ಗೆದ್ದ ರಾಫಾ ಇದೀಗ ಸೆಮೀಸ್ ಹಂತಕ್ಕೆ ಲಗ್ಗೆ ಇಟ್ಟಿದ್ದಾರೆ. 
 


ನ್ಯೂಯಾರ್ಕ್(ಸೆ.06): ಯುಎಸ್‌ ಓಪನ್‌ ಟೆನಿಸ್‌ ಗ್ರ್ಯಾಂಡ್‌ಸ್ಲಾಂ ಟೂರ್ನಿಯ ಪುರುಷರ ಸಿಂಗಲ್ಸ್‌ ಸೆಮಿಫೈನಲ್‌ಗೆ ಸ್ಪೇನ್‌ ತಾರೆ ರಾಫೆಲ್‌ ನಡಾಲ್‌ ಪ್ರವೇಶಿಸಿದ್ದಾರೆ. ವಿಶ್ವ ನಂ.1 ಜೊಕೊವಿಚ್‌, ನಂ.3 ರೋಜರ್‌ ಫೆಡರರ್‌ ಈಗಾ​ಗಲೇ ಹೊರ​ಬಿ​ದ್ದಿ​ರುವ ಕಾರಣ, ನಡಾಲ್‌ ಪ್ರಶಸ್ತಿ ಹಾದಿ ಸುಗ​ಮ​ಗೊಂಡಿದೆ.

ಇದನ್ನೂ  ಓದಿ: US ಓಪನ್‌ 2019: ಹೊರ​ಬಿದ್ದ ರೋಜರ್ ಫೆಡ​ರರ್‌!

Tap to resize

Latest Videos

ಕ್ವಾರ್ಟರ್‌ ಫೈನಲ್‌ನಲ್ಲಿ ನಡಾಲ್‌, 20ನೇ ಶ್ರೇಯಾಂಕಿತ ಆಟ​ಗಾರ ಅರ್ಜೆಂಟೀನಾದ ಡೀಗೋ ಶ್ವಾಟ್ಸ್‌ಮ್ಯಾನ್‌ ವಿರುದ್ಧ 6-4, 7-5, 6-2ರಲ್ಲಿ ಜಯಿಸಿದರು. ಸೆಮೀಸ್‌ನಲ್ಲಿ ನಡಾಲ್‌, ಇಟ​ಲಿಯ ಮಾಟ್ಟೆಯೋ ಬೆರೆ​ಟ್ಟೆನಿ ವಿರುದ್ಧ ಸೆಣ​ಸ​ಲಿ​ದ್ದಾರೆ. ಮತ್ತೊಂದು ಕ್ವಾರ್ಟರ್‌ ಫೈನಲ್‌ನಲ್ಲಿ ಬೆರೆ​ಟ್ಟೆನಿ, ಫ್ರಾನ್ಸ್‌ನ ಗೇಲ್‌ ಮೊನ್ಫಿಲ್ಸ್‌ ವಿರುದ್ಧ 3-6, 6-3, 6-2, 3-6, 7-6ರಲ್ಲಿ ಗೆದ್ದರು. ಇದೇ ವೇಳೆ ಮಹಿ​ಳಾ ಸಿಂಗಲ್ಸ್‌ ಸೆಮೀಸ್‌ಗೆ ಕೆನ​ಡಾ​ದ 19 ವರ್ಷದ ಬಿಯಾಂಕಾ ಆಂಡ್ರೀಸ್ಕು ಪ್ರವೇ​ಶಿ​ಸಿ​ದ್ದಾರೆ. ಬೆಲ್ಜಿ​ಯಂನ ಎಲೈಸಿ ಮೆರ್ಟೆನ್ಸ್‌ ವಿರುದ್ಧ 3-6, 6-2, 6-3 ಸೆಟ್‌ಗಳಲ್ಲಿ ಬಿಯಾಂಕ ಜಯ​ಗ​ಳಿ​ಸಿ​ದರು.

ಮೊದಲ ಬಾರಿ ಸೆಮೀಸ್‌ ಪ್ರವೇ​ಶಿ​ಸಿದ 6 ಮಂದಿ!
ಪುರುಷರ ಸಿಂಗಲ್ಸ್‌ನಲ್ಲಿ ಇಟ​ಲಿಯ ಮಾಟೆಯೋ ಬೆರೆಟ್ಟಿನಿ (ಇಟಲಿ), ರಷ್ಯಾದ ಡಾನಿಲ್‌ ಮೆಡ್ವೆಡೆವ್‌, ಬಲ್ಗೇ​ರಿ​ಯಾದ ಗ್ರಿಗರ್‌ ಡಿಮಿಟ್ರೊವ್‌ ಇದೇ ಮೊದಲ ಬಾರಿಗೆ ಯುಎಸ್‌ ಓಪನ್‌ ಸೆಮಿಫೈನಲ್‌ ಪ್ರವೇಶಿಸಿದ್ದಾರೆ. ಇನ್ನು ಮಹಿಳಾ ಸಿಂಗಲ್ಸ್‌ನಲ್ಲಿ ಉಕ್ರೇನ್‌ನ ಎಲಿನಾ ಸ್ವಿಟೊಲಿನಾ, ಸ್ವಿಜರ್‌ಲೆಂಡ್‌ನ ಬೆಲಿಂಡಾ ಬೆನ್ಚಿಚ್‌ ಹಾಗೂ ಕೆನಡಾದ ಬಿಯಾಂಕಾ ಆಂಡ್ರೀಸ್ಕು ಸಹ ಮೊದಲ ಬಾರಿಗೆ ಸೆಮಿ​ಫೈ​ನಲ್‌ನಲ್ಲಿ ಆಡ​ಲಿ​ದ್ದಾರೆ. ನಡಾಲ್‌, ಸೆರೆನಾ ಹೊರತುಪಡಿಸಿದರೆ 6 ಮಂದಿ ಮೊದಲ ಗ್ರ್ಯಾಂಡ್‌ಸ್ಲಾಂ ಪ್ರಶಸ್ತಿ ಗೆಲ್ಲುವ ಕನಸು ಕಾಣು​ತ್ತಿ​ದ್ದಾರೆ.

click me!