ದಕ್ಷಿಣ ಆಫ್ರಿಕಾ ಹಾಗೂ ನ್ಯೂಜಿಲೆಂಡ್ ವಿರುದ್ಧ ಪಾಕಿಸ್ತಾನ ಮತ್ತು ಭಾರತ ಕ್ರಮವಾಗಿ ಟಿ20 ಸರಣಿ ಸೋತರೂ ಅಗ್ರಸ್ಥಾನ ಉಳಿಸಿಕೊಳ್ಳಲು ಏಷ್ಯಾದ ಈ ಎರಡು ತಂಡಗಳು ಯಶಸ್ವಿಯಾಗಿವೆ. ಆದರೆ ರೇಟಿಂಗ್ ಅಂಕಗಳಲ್ಲಿ ಇಳಿಕೆ ಕಂಡಿವೆ.
ದುಬೈ[ಫೆ.11]: ಭಾರತ-ನ್ಯೂಜಿಲೆಂಡ್ ನಡುವಿನ ಟಿ20 ಸರಣಿ ಮುಕ್ತಾಯದವಾದ ಬೆನ್ನಲ್ಲೇ ಐಸಿಸಿ ನೂತನ ಟಿ20 ರ‍್ಯಾಂಕಿಂಗ್ ಪ್ರಕಟಗೊಂಡಿದ್ದು, ಏಷ್ಯಾದ ಬಲಿಷ್ಠ ತಂಡಗಳಾದ ಪಾಕಿಸ್ತಾನ ಹಾಗೂ ಭಾರತ ಕ್ರಮವಾಗಿ ಮೊದಲೆರಡು ಸ್ಥಾನಗಳನ್ನು ಹಂಚಿಕೊಂಡಿವೆ. ಇನ್ನು ದಕ್ಷಿಣ ಆಫ್ರಿಕಾ ತಂಡ ಎರಡು ಸ್ಥಾನ ಏರಿಕೆ ಕಂಡು ಮೂರನೇ ಸ್ಥಾನಕ್ಕೆ ಲಗ್ಗೆಯಿಟ್ಟಿದೆ.
ಟೀಂ ಇಂಡಿಯಾ ರೋಚಕ ಸೋಲಿನ ಬಗ್ಗೆ ಟ್ವಿಟರಿಗರು ಹೇಳಿದ್ದಿಷ್ಟು...
ದಕ್ಷಿಣ ಆಫ್ರಿಕಾ ಹಾಗೂ ನ್ಯೂಜಿಲೆಂಡ್ ವಿರುದ್ಧ ಪಾಕಿಸ್ತಾನ ಮತ್ತು ಭಾರತ ಕ್ರಮವಾಗಿ ಟಿ20 ಸರಣಿ ಸೋತರೂ ಅಗ್ರಸ್ಥಾನ ಉಳಿಸಿಕೊಳ್ಳಲು ಏಷ್ಯಾದ ಈ ಎರಡು ತಂಡಗಳು ಯಶಸ್ವಿಯಾಗಿವೆ. ಆದರೆ ರೇಟಿಂಗ್ ಅಂಕಗಳಲ್ಲಿ ಇಳಿಕೆ ಕಂಡಿವೆ. ದಕ್ಷಿಣ ಆಫ್ರಿಕಾ ಎದುರು 2-1 ಅಂತರದಲ್ಲಿ ಸರಣಿ ಸೋತ ಪಾಕಿಸ್ತಾನ ಮೂರು ರೇಟಿಂಗ್ ಅಂಕ ಕಳೆದುಕೊಂಡಿದೆ. ಭಾರತ ಕೂಡ ನ್ಯೂಜಿಲೆಂಡ್ ಎದುರು 1-2 ಅಂತರದಲ್ಲಿ ಸರಣಿ ಸೋತಿದ್ದರೂ ಎರಡನೇ ಸ್ಥಾನ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಇನ್ನು ಬಲಿಷ್ಠ ಪಾಕಿಸ್ತಾನ ತಂಡವನ್ನು ಮಣಿಸಿದ ದಕ್ಷಿಣ ಆಫ್ರಿಕಾ ತಂಡವು ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ತಂಡವನ್ನು ಹಿಂದಿಕ್ಕಿ ಮೂರನೇ ಸ್ಥಾನಕ್ಕೇರಿದೆ.
ವಿಶ್ವಕಪ್ ತಂಡದಲ್ಲಿ ಧೋನಿಗೆ ಸ್ಥಾನ: ಯುವಿ ಹೇಳೋದೇನು...?
ಭಾರತ ವಿರುದ್ಧ ಟಿ20 ಸರಣಿ ಗೆದ್ದ ನ್ಯೂಜಿಲೆಂಡ್ ನಾಲ್ಕು ರೇಟಿಂಗ್ ಅಂಕ ಪಡೆದು ಆರನೇ ಸ್ಥಾನದಲ್ಲಿದ್ದು, ಆಸ್ಟ್ರೇಲಿಯಾಗಿಂತ ಕೇವಲ ಒಂದು ಅಂಕ ಹಿಂದಿದೆ. ಇನ್ನು ಕ್ರಿಕೆಟ್ ಶಿಶು ನೇಪಾಳ ತಂಡವು ಯುಎಇ ತಂಡವನ್ನು ಹಿಂದಿಕ್ಕಿ 14ನೇ ಸ್ಥಾನಕ್ಕೇರಿದೆ. 7 ರೇಟಿಂಗ್ ಅಂಕ ಕಳೆದುಕೊಂಡಿರುವ ಯುಎಇ 15ನೇ ಸ್ಥಾನಕ್ಕೆ ತಳ್ಳಲ್ಪಟ್ಟಿದೆ.
ತಂಡಗಳ ನೂತನ T20 ರ‍್ಯಾಂಕಿಂಗ್ ಇಲ್ಲಿದೆ ನೋಡಿ...
ಸ್ಥಾನ | ತಂಡ | ರೇಟಿಂಗ್ ಅಂಕ |
1 | ಪಾಕಿಸ್ತಾನ | 135[-3] |
2 | ಭಾರತ | 124[-2] |
3 | ದಕ್ಷಿಣ ಆಫ್ರಿಕಾ | 118[+4] |
4 | ಇಂಗ್ಲೆಂಡ್ | 118 |
5 | ಆಸ್ಟ್ರೇಲಿಯಾ | 117 |
6 | ನ್ಯೂಜಿಲೆಂಡ್ | 116[+4] |
7 | ವೆಸ್ಟ್ ಇಂಡೀಸ್ | 101 |
8 | ಆಫ್ಘಾನಿಸ್ತಾನ | 92 |
9 | ಶ್ರೀಲಂಕಾ | 87 |
10 | ಬಾಂಗ್ಲಾದೇಶ | 77 |