ಮಾಲಿಂಗ ಹ್ಯಾಟ್ರಿಕ್ ಬೆನ್ನಲ್ಲೇ ಐಸಿಸಿ ನೂತನ ಟಿ20 ಶ್ರೇಯಾಂಕ ಪ್ರಕಟ

By Web DeskFirst Published Sep 7, 2019, 5:44 PM IST
Highlights

ಶ್ರೀಲಂಕಾ-ನ್ಯೂಜಿಲೆಂಡ್ ನಡುವಿನ ಟಿ20 ಸರಣಿ ಮುಕ್ತಾಯವಾದ ಬೆನ್ನಲ್ಲೇ ಐಸಿಸಿ ನೂತನ ಟಿ20 ಶ್ರೇಯಾಂಕ ಪ್ರಕಟಗೊಂಡಿದ್ದು, ಹ್ಯಾಟ್ರಿಕ್ ವೀರ ಲಸಿತ್ ಮಾಲಿಂಗ 20 ಸ್ಥಾನ ಏರಿಕೆ ಕಂಡಿದ್ದಾರೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...

ದುಬೈ[ಸೆ.07]: ಶ್ರೀಲಂಕಾ ಟಿ20 ನಾಯಕ ಲಸಿತ್ ಮಾಲಿಂಗ ನ್ಯೂಜಿಲೆಂಡ್ ವಿರುದ್ಧದ ಟಿ20 ಪಂದ್ಯದಲ್ಲಿ ಹ್ಯಾಟ್ರಿಕ್ ವಿಕೆಟ್ ಕಬಳಿಸುವ ಮೂಲಕ ಐಸಿಸಿ ಬಿಡುಗಡೆ ಮಾಡಿದ ಟಿ20 ಶ್ರೇಯಾಂಕದಲ್ಲಿ 20 ಸ್ಥಾನ ಜಿಗಿತ ಕಂಡು 21ನೇ ಸ್ಥಾನಕ್ಕೆ ಲಗ್ಗೆಯಿಟ್ಟಿದ್ದಾರೆ. 

ಕೇವಲ 12 ಮ್ಯಾಚ್: 85ರಿಂದ 3ನೇ ರ‍್ಯಾಂಕ್, ಇದು ಬುಮ್ರಾ ಝಲಕ್..!

ನ್ಯೂಜಿಲೆಂಡ್ ವಿರುದ್ಧ ತವರಿನಲ್ಲಿ ಮುಕ್ತಾಯಗೊಂಡ ಟಿ20 ಸರಣಿಯಲ್ಲಿ ಲಂಕಾ ತಂಡವು 1-2 ಅಂತರದಲ್ಲಿ ಸರಣಿ ಕೈಚೆಲ್ಲಿತ್ತು. ಇದರ ಬೆನ್ನಲ್ಲೇ ಐಸಿಸಿ ನೂತನ ಟಿ20 ಶ್ರೇಯಾಂಕ ಬಿಡುಗಡೆಗೊಳಿಸಿದೆ. ಬೌಲಿಂಗ್ ವಿಭಾಗದಲ್ಲಿ ರಶೀದ್ ಖಾನ್ ಮೊದಲ ಸ್ಥಾನದಲ್ಲಿದ್ದರೆ, ಪಾಕ್ ಬೌಲರ್’ಗಳಾದ ಇಮಾದ್ ವಾಸೀಂ ಹಾಗೂ ಶಾದಾಬ್ ಖಾನ್ ಆನಂತರದ ಸ್ಥಾನದಲ್ಲಿದ್ದಾರೆ. ನಾಲ್ಕನೇ ಸ್ಥಾನವನ್ನು ಆದಿಲ್ ರಶೀದ್ ಉಳಿಸಿಕೊಂಡಿದ್ದರೆ, ಆ್ಯಡಂ ಜಂಪಾ ಹಿಂದಿಕ್ಕಿ ಕಿವೀಸ್ ಸ್ಪಿನ್ನರ್ ಮಿಚೆಲ್ ಸ್ಯಾಂಟ್ನರ್ 5ನೇ ಸ್ಥಾನಕ್ಕೇರಿದ್ದಾರೆ. ಇನ್ನು ಕುಲ್ದೀಪ್ ಯಾದವ್ 7ನೇ ಸ್ಥಾನಕ್ಕೆ ಕುಸಿದಿದ್ದು, ಟಾಪ್ 10 ಪಟ್ಟಿಯಲ್ಲಿ ಸ್ಥಾನ ಪಡೆದ ಏಕೈಕ ಸ್ಪಿನ್ನರ್ ಎನಿಸಿದ್ದಾರೆ.

ಟೆಸ್ಟ್ ಸರಣಿ ಗೆಲುವಿನ ಬೆನ್ನಲ್ಲೇ ವಿರಾಟ್ ಕೊಹ್ಲಿಗೆ ಶಾಕ್ ಕೊಟ್ಟ ICC..!

ಏಕದಿನ ಹಾಗೂ ಟಿ20 ಕ್ರಿಕೆಟ್’ನಲ್ಲಿ ಸತತ 4 ಎಸೆತಗಳಲ್ಲಿ 4 ವಿಕೆಟ್ ಪಡೆದ ಏಕೈಕ ಬೌಲರ್ ಎನ್ನುವ ದಾಖಲೆ ಬರೆದ ಮಾಲಿಂಗ ಅಂತಿಮ ಪಂದ್ಯದಲ್ಲಿ ಲಂಕಾ ತಂಡದ ಗೆಲುವಿನ ರೂವಾರಿ ಎನಿಸಿದರು. ನ್ಯೂಜಿಲೆಂಡ್ ವಿರುದ್ಧ ಮಾಲಿಂಗ 4 ಓವರ್’ನಲ್ಲಿ ಒಂದು ಮೇಡನ್ ಸಹಿತ 6 ರನ್ ನೀಡಿ 5 ವಿಕೆಟ್ ಕಬಳಿಸಿದ್ದರು. ಅಲ್ಲದೇ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್’ನಲ್ಲಿ 100 ವಿಕೆಟ್ ಕಬಳಿಸಿದ ಮೊದಲ ಬೌಲರ್ ಎನ್ನುವ ಹಿರಿಮೆಗೂ ಭಾಜನರಾಗಿದ್ದಾರೆ.

ಮಾಲಿಂಗ ಮ್ಯಾಜಿಕ್, ದಾಖಲೆ ಮೇಲೆ ದಾಖಲೆ.. 4ಕ್ಕೇ ನಾಲ್ಕು! ವಿಡಿಯೋ

ಇನ್ನು ಬ್ಯಾಟಿಂಗ್ ವಿಭಾಗದಲ್ಲಿ ಪಾಕ್ ಬ್ಯಾಟ್ಸ್’ಮನ್ ಬಾಬರ್ ಅಜಂ ಮೊದಲ ಸ್ಥಾನದಲ್ಲೇ ಮುಂದುವರೆದಿದ್ದಾರೆ. ಆ ಬಳಿಕ ಗ್ಲೇನ್ ಮ್ಯಾಕ್ಸ್’ವೆಲ್, ಕಾಲಿನ್ ಮನ್ರೋ, ಆ್ಯರೋನ್ ಫಿಂಚ್, ಹಜ್ರತುಲ್ ಕ್ರಮವಾಗಿ ಟಾಪ್ 5 ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಇನ್ನುಳಿದಂತೆ ಕೆ.ಎಲ್ ರಾಹುಲ್[7] ಹಾಗೂ ರೋಹಿತ್ ಶರ್ಮಾ[9] ಟಾಪ್ 10 ಪಟ್ಟಿಯಲ್ಲಿ ಸ್ಥಾನ ಪಡೆದ ಭಾರತೀಯ ಬ್ಯಾಟ್ಸ್’ಮನ್ ಗಳೆಸಿದ್ದಾರೆ. 

click me!