
ಢಾಕಾ[ಸೆ.16]: ಸ್ಪಿನ್ನರ್ ಮುಜೀಬ್ ರಹಮಾನ್ (4-15) ಹಾಗೂ ಮೊಹಮದ್ ನಬಿ ಆಕರ್ಷಕ ಅರ್ಧಶತಕದ ನೆರವಿನಿಂದ ಆಫ್ಘಾನಿಸ್ತಾನ, ಬಾಂಗ್ಲಾದೇಶ ವಿರುದ್ಧದ ತ್ರಿಕೋನ ಟಿ20 ಸರಣಿಯ 3ನೇ ಪಂದ್ಯದಲ್ಲಿ 25 ರನ್ ಗೆಲುವು ಸಾಧಿಸಿದೆ. ಇದರೊಂದಿಗೆ ಆಫ್ಘಾನಿಸ್ತಾನ ಟಿ20ಯಲ್ಲಿ ಸತತ 12ನೇ ಜಯ ಪಡೆದಿದ್ದು, ತನ್ನದೇ ದಾಖಲೆಯನ್ನು ಉತ್ತಮಗೊಳಿಸಿಕೊಂಡಿದೆ.
ಬಾಂಗ್ಲಾ ಮಣಿಸಿದ ಆಸ್ಟ್ರೇಲಿಯಾ ದಾಖಲೆ ಸರಿಗಟ್ಟಿದ ಅಫ್ಘಾನಿಸ್ತಾನ!
ಭಾನುವಾರ ನಡೆದ ಪಂದ್ಯದಲ್ಲಿ ಆಫ್ಘನ್ ನೀಡಿದ 165 ರನ್‌ಗಳ ಸವಾಲಿನ ಗುರಿಯನ್ನು ಬೆನ್ನತ್ತಿದ ಬಾಂಗ್ಲಾದೇಶ 139 ರನ್‌ಗಳಿಗೆ ಆಲೌಟ್ ಆಯಿತು. ಮೊಹಮದ್ ನಬಿ 54 ಎಸೆತಗಳಲ್ಲಿ 84 ರನ್ ಸಿಡಿಸಿ, ಆಫ್ಘಾನಿಸ್ತಾನ ಸವಾಲಿನ ಮೊತ್ತ ಕಲೆಹಾಕಲು ನೆರವಾಗಿದ್ದರು.
7 ಬಾಲ್‌ಗೆ 7 ಸಿಕ್ಸರ್: ಇತಿಹಾಸ ಬರೆದ ಆಫ್ಘನ್ ಕ್ರಿಕೆಟರ್ಸ್...!
ಆಫ್ಘನ್ ನೀಡಿದ್ದ ಸ್ಫರ್ಧಾತ್ಮಕ ಗುರಿ ಬೆನ್ನತ್ತಿದ ಬಾಂಗ್ಲಾದೇಶ ಆರಂಭದಲ್ಲೇ ವಿಕೆಟ್ ಕಳೆದುಕೊಂಡು ಆಘಾತಕ್ಕೆ ಗುರಿಯಾಯಿತು. ಆರಂಭಿಕರಾದ ಮುಷ್ಫೀಕರ್ ರಹೀಮ್[5], ಲಿಟನ್ ದಾಸ್[0] ಎರಡಂಕಿ ಮೊತ್ತ ದಾಖಲಿಸಲು ವಿಫಲರಾದರು. ನಾಯಕ ಶಕೀಬ್ ಆಟ 15 ರನ್’ಗಳಿಗೆ ಸೀಮಿತವಾಯಿತು. ಮೊಹಮ್ಮದುಲ್ಲಾ[44], ಶಬ್ಬೀರ್ ರೆಹಮಾನ್[24] ಹೊರತುಪಡಿಸಿ ಉಳಿದ್ಯಾವ ಬ್ಯಾಟ್ಸ್’ಮನ್’ಗಳು ನೆಲಕಚ್ಚಿ ಆಡುವ ಪ್ರಯತ್ನ ಮಾಡಲಿಲ್ಲ.
ಟಿ20 ಕ್ರಿಕೆಟ್‌ನಲ್ಲಿ ಆಫ್ಘನ್ ದಾಖಲೆ: ಕ್ರಿಕೆಟ್ ಶಿಶು ಎಂದೇ ಕರೆಸಿಕೊಳ್ಳುವ ಆಫ್ಘಾನಿಸ್ತಾನ ಟಿ20 ಕ್ರಿಕೆಟ್’ನಲ್ಲಿ ಸತತ 12 ಗೆಲುವು ದಾಖಲಿಸಿದ ಅಪರೂಪದ ದಾಖಲೆ ಬರೆದಿದೆ. 2018-19ರ ಅವಧಿಯಲ್ಲಿ ಆಫ್ಘನ್ ಇದುವರೆಗೂ ಸತತ ಒಂದು ಡಜನ್ ಗೆಲುವು ಕಂಡಿದೆ. ಈ ಮೂಲಕ ತಮ್ಮದೇ ದಾಖಲೆಯನ್ನು ಆಫ್ಘನ್ ಅಳಿಸಿ ಹಾಕಿದೆ. 2016-17ರ ಅವಧಿಯಲ್ಲಿ ಆಫ್ಘನ್ 11 ಟಿ20 ಗೆಲುವು ದಾಖಲಿಸಿತ್ತು. ಇದಕ್ಕೂ ಮೊದಲು ಪಾಕಿಸ್ತಾನ 2018ರಲ್ಲಿ ಸತತ 9 ಗೆಲುವು ದಾಖಲಿಸಿತ್ತು.
ಸ್ಕೋರ್:
ಆಫ್ಘಾನಿಸ್ತಾನ 164/6
ಬಾಂಗ್ಲಾದೇಶ 139/10.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.