ಚೆಂಡು ವಿರೂಪ ಪ್ರಕರಣ: ಚಾಂಡಿಮಾಲ್ ಅರ್ಜಿ ವಜಾ-ಲಕ್ಮಲ್‌ಗೆ ನಾಯಕತ್ವ

First Published Jun 23, 2018, 2:47 PM IST
Highlights

ಶ್ರೀಲಂಕಾ ನಾಯಕ ದಿನೇಶ್ ಚಾಂಡಿಮಾಲ್ ಮೇಲಿನ ಚೆಂಡು ವಿರೂಪ ಪ್ರಕರಣ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದೆ. ಚಾಂಡಿಮಾಲ್ ಮೇಲ್ಮನವಿ ತಿರಸ್ಕೃತಗೊಂಡ ಬೆನ್ನಲ್ಲೇ, ಲಂಕಾ ಮಂಡಳಿ ಅಂತಿಮ ಪಂದ್ಯಕ್ಕೆ ನೂತನ ನಾಯಕನನ್ನ ಆಯ್ಕೆ ಮಾಡಿದೆ.
 

ಬಾರ್ಬಡೋಸ್(ಜೂ.23): ಚೆಂಡು ವಿರೂಪ ಪ್ರಕರಣದಲ್ಲಿ ಸಿಲುಕಿರುವ ದಿನೇಶ್ ಚಾಂಡಿಮಾಲ್‌ ಸಲ್ಲಿಸಿದ ಮೇಲ್ಮನವಿಯನ್ನ ಐಸಿಸಿ ತಿರಸ್ಕರಿಸಿದೆ. ಹೀಗಾಗಿ ವೆಸ್ಟ್ಇಂಡೀಸ್ ವಿರುದ್ಧದ ತೃತೀಯ ಟೆಸ್ಟ್ ಪಂದ್ಯದಲ್ಲಿ ವೇಗಿ ಸುರಂಗ ಲಕ್ಮಲ್ ನಾಯಕತ್ವ ವಹಿಸಿಕೊಳ್ಳಲಿದ್ದಾರೆ.

ಹಿರಿಯ ಸ್ಪಿನ್ನರ್ ರಂಗನಾ ಹೆರಾಥ್‌ ಇಂಜುರಿಗೆ ತುತ್ತಾಗಿದ್ದಾರೆ.  ಹೀಗಾಗಿ ಲಂಕಾ ಕ್ರಿಕೆಟ್ ಮಂಡಳಿ ಯುವ ವೇಗಿ ಲಕ್ಮಲ್‌ಗೆ ನಾಯಕ ಸ್ಥಾನ ನೀಡಲಾಗಿದೆ. ಆದರೆ ಲಂಕಾ ಕ್ರಿಕೆಟ್ ಮಂಡಳಿ, ಚಾಂಡಿಮಾಲ್ ಚೆಂಡು ವಿರೂಪ ಪ್ರಕರಣದ ಕುರಿತು ಯಾವುದೇ ಹೇಳಿಕೆ ನೀಡಿಲ್ಲ. ಚಾಂಡಿಮಾಲ್ ಹಾಗೂ ರಂಗನಾ ಹೆರಾಥ್ ಇಬ್ಬರೂ ಕೂಡ ಅಂತಿಮ ಪಂದ್ಯಕ್ಕೆ ಅಲಭ್ಯರಾಗಿರೋದು ಲಂಕಾ ತಂಡದ ಆತಂಕ ಹೆಚ್ಚಿಸಿದೆ.

ಇದನ್ನು ಓದಿ: ಚೆಂಡು ವಿರೂಪ: ಲಂಕಾ ನಾಯಕನಿಗೆ 1 ಟೆಸ್ಟ್ ನಿಷೇಧ

ದ್ವಿತೀಯ ಟೆಸ್ಟ್ ಪಂದ್ಯದ ವೇಳೆ ಶ್ರೀಲಂಕಾ ನಾಯಕ ದಿನೇಶ್ ಚಾಂಡಿಮಾಲ್ ಬಾಲ್ ಟ್ಯಾಂಪರಿಂಗ್ ನಡೆಸಿದ್ದಾರೆ ಎಂದು ಅಂಪೈರ್‌ಗಳು ಶಂಕೆ ವ್ಯಕ್ತಪಡಿಸಿದ್ದರು. ಐಸಿಸಿ ಕೂಡ ಚಾಂಡಿಮಾಲ್ ವಿರುದ್ಧ ಚಾಟಿ ಬೀಸಿತ್ತು. ಇಷ್ಟೇ ಅಲ್ಲ ಅಂತಿಮ ಟೆಸ್ಟ್ ಪಂದ್ಯಕ್ಕ ಚಾಂಡಿಮಾಲ್‌ಗೆ ನಿಷೇಧ ಹೇರಲಾಗಿದೆ. 

ಇದನ್ನು ಓದಿ: ಐಸಿಸಿ ನಿಷೇಧದ ವಿರುದ್ಧ ಚಾಂಡಿಮಲ್ ಮೇಲ್ಮನವಿ

ಐಸಿಸಿ ನಿರ್ಧಾರ ಹಾಗೂ ತಮ್ಮ ಮೇಲಿನ ಆರೋಪದ ಕುರಿತು ಮೇಲ್ಮನವಿ ಸಲ್ಲಿಸಿದ ದಿನೇಶ್ ಚಾಂಡಿಮಾಲ್‌ ಅರ್ಜಿ ಕೂಡ ತಿರಸ್ಕೃತಗೊಂಡಿದೆ. ಹೀಗಾಗಿ ಪ್ರಕರಣ ಗಂಭೀರ ಸ್ವರೂಪ ಪಡೆದುಕೊಳ್ಳೋ ಸಾಧ್ಯತೆ ಹೆಚ್ಚಿದೆ. 

ಇದನ್ನು ಓದಿ: ಬಾಲ್ ಟ್ಯಾಂಪರಿಂಗ್ ಆರೋಪ ತಳ್ಳಿ ಹಾಕಿದ ಚಾಂಡಿಮಾಲ್

ಶ್ರೀಲಂಕಾ ಹಾಗೂ ವೆಸ್ಟ್ಇಂಡೀಸ್ ನಡುವಿನ 3ನೇ ಹಾಗೂ ಅಂತಿಮ ಟೆಸ್ಟ್ ಪಂದ್ಯ ಇಂದು(ಜೂ.23)  ನಡೆಯಲಿದೆ. ಮೊದಲ ಡೇ ಅಂಡ್ ನೈಟ್ ಟೆಸ್ಟ್ ಪಂದ್ಯದ ಸರಣಿಯಲ್ಲಿ ವಿಂಡೀಸ್ ಈಗಾಗಲೇ 1-0 ಅಂತರದ ಮುನ್ನಡೆ ಸಾಧಿಸಿದೆ. ಹೀಗಾಗಿ ಲಂಕಾಗೆ ಸರಣಿ ಸಮಭಲಗೊಳಿಸಲು ಈ ಪಂದ್ಯ ಗೆಲ್ಲಲೇಬೇಕು.

click me!