ಅಜಯ್ ಠಾಕೂರ್ ನೇತೃತ್ವದ ಭಾರತ ತಂಡ, ಈಗಾಗಲೇ ಆಡಿರುವ 2 ಪಂದ್ಯಗಳಲ್ಲಿ ಭರ್ಜರಿ ಗೆಲುವು ಸಾಧಿಸಿದ್ದು, ತನ್ನ 3ನೇ ಪಂದ್ಯದಲ್ಲೂ ಅದೇ ಪ್ರದರ್ಶನವನ್ನು ಕಾಯ್ದುಕೊಳ್ಳುವ ವಿಶ್ವಾಸದಲ್ಲಿದೆ.
ದುಬೈ(ಜೂ.25]: ಏಷ್ಯನ್ ಗೇಮ್ಸ್‌ಗೆ ಭರ್ಜರಿ ತಯಾರಿ ನಡೆಸಿರುವ ಭಾರತ ಕಬಡ್ಡಿ ತಂಡ, ಸೋಮವಾರ ದುಬೈ ಮಾಸ್ಟರ್ಸ್ ಕಬಡ್ಡಿ ಟೂರ್ನಿಯಲ್ಲಿ ಸಾಂಪ್ರದಾಯಿಕ ವೈರಿ ಪಾಕಿಸ್ತಾನವನ್ನು ಮತ್ತೊಮ್ಮೆ ಎದುರಿಸಲಿದೆ.
ಅಜಯ್ ಠಾಕೂರ್ ನೇತೃತ್ವದ ಭಾರತ ತಂಡ, ಈಗಾಗಲೇ ಆಡಿರುವ 2 ಪಂದ್ಯಗಳಲ್ಲಿ ಭರ್ಜರಿ ಗೆಲುವು ಸಾಧಿಸಿದ್ದು, ತನ್ನ 3ನೇ ಪಂದ್ಯದಲ್ಲೂ ಅದೇ ಪ್ರದರ್ಶನವನ್ನು ಕಾಯ್ದುಕೊಳ್ಳುವ ವಿಶ್ವಾಸದಲ್ಲಿದೆ.
ದುಬೈ ಮಾಸ್ಟರ್ಸ್ ಕಬಡ್ಡಿ ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಅಜಯ್ ಠಾಕೂರ್ ನೇತೃತ್ವದ ಭಾರತ ತಂಡ ಪಾಕಿಸ್ತಾನವನ್ನು 36-20 ಅಂಕಗಳಿಂದ ಮಣಿಸಿ ಶುಭಾರಂಭ ಮಾಡಿತ್ತು. ಆ ಬಳಿಕ ಕೀನ್ಯಾ ತಂಡವನ್ನು ಅನಾಯಾಸವಾಗಿ ಮಣಿಸಿ ಜಯದ ನಾಗಾಲೋಟ ಮುಂದುವರೆಸಿದೆ. ಇಂದು ಮತ್ತೆ ಪಾಕಿಸ್ತಾನದೆದುರು ಕಾದಾಡಲಿದೆ.
ಇದನ್ನು ಓದಿ: ಇಂಡೋ-ಪಾಕ್ ಕದನ: ಮಜಾ ಬಂತು ಎಂದ ಸೆಹ್ವಾಗ್...!
ಕೀನ್ಯಾ ವಿರುದ್ಧ ಭರ್ಜರಿ ಪ್ರದರ್ಶನ ತೋರಿದ್ದ ರಿಷಾಂಕ್ ದೇವಾಡಿಗ ಹಾಗೂ ಮೋನು ಗೋಯೆತ್ ಇಂದಿನ ಪಂದ್ಯದಲ್ಲೂ ಮಿಂಚುವ ವಿಶ್ವಾಸದಲ್ಲಿದ್ದಾರೆ. ರಾಹುಲ್ ಚೌಧರಿ ಹಾಗೂ ಪ್ರದೀಪ್ ನರ್ವಾಲ್ ಅವರಿಗೆ ಇಂದಿನ ಪಂದ್ಯಕ್ಕೆ ರೆಸ್ಟ್ ನೀಡುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.