ರಷ್ಯಾದಲ್ಲಿ ಮೆಸ್ಸಿಯ ಚಾಕೋಲೆಟ್ ಪ್ರತಿಮೆ..! ಇದು ಬರ್ತ್ ಡೇ ಸ್ಪೆಷಲ್

Published : Jun 25, 2018, 12:03 PM IST
ರಷ್ಯಾದಲ್ಲಿ ಮೆಸ್ಸಿಯ ಚಾಕೋಲೆಟ್ ಪ್ರತಿಮೆ..! ಇದು ಬರ್ತ್ ಡೇ ಸ್ಪೆಷಲ್

ಸಾರಾಂಶ

‘ಮೆಸ್ಸಿ ಹುಟ್ಟುಹಬ್ಬವನ್ನು ವಿಶೇಷವಾಗಿ ಆಚರಿಸಬೇಕು ಎನ್ನುವ ಆಲೋಚನೆ ಬಂತು. ಮೆಸ್ಸಿಗೆ ಮೆಸ್ಸಿಯನ್ನೇ ಉಡುಗೊರೆಯಾಗಿ ನೀಡುತ್ತಿದ್ದೇವೆ’ ಎಂದು ಮಲ್ಕಿನಾ ಸಂತಸ ವ್ಯಕ್ತಪಡಿಸಿದ್ದಾರೆ.

ಮಾಸ್ಕೋ(ಜೂ.25]: ಅರ್ಜೆಂಟೀನಾದ ಫುಟ್ಬಾಲ್ ತಾರೆ ಲಿಯೋನೆಲ್ ಮೆಸ್ಸಿ ಭಾನುವಾರ (ಜೂ.24) ತಮ್ಮ 31ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡರು.

ಜಗತ್ತಿನಾದ್ಯಂತ ಮೆಸ್ಸಿಗೆ ಅಭಿಮಾನಿಗಳಿದ್ದು, ಮಾಸ್ಕೋದ ಸಿಹಿ ತಿನಿಸುಗಳ ಅಂಗಡಿಯ ಮಾಲಕಿ ದಾರಿಯಾ ಮಲ್ಕಿನಾ 60 ಕೆ.ಜಿ ತೂಕದ ಮೆಸ್ಸಿಯ ಚಾಕೋಲೆಟ್ ಪ್ರತಿಮೆಯನ್ನು ನಿರ್ಮಿಸಿ ಗಮನ ಸೆಳೆದಿದ್ದಾರೆ. ಇದಕ್ಕಾಗಿ 5 ಜನರ ತಂಡ ಒಂದು ವಾರದಿಂದ ಕಾರ್ಯನಿರ್ವಹಿಸಿದೆ.

‘ಮೆಸ್ಸಿ ಹುಟ್ಟುಹಬ್ಬವನ್ನು ವಿಶೇಷವಾಗಿ ಆಚರಿಸಬೇಕು ಎನ್ನುವ ಆಲೋಚನೆ ಬಂತು. ಮೆಸ್ಸಿಗೆ ಮೆಸ್ಸಿಯನ್ನೇ ಉಡುಗೊರೆಯಾಗಿ ನೀಡುತ್ತಿದ್ದೇವೆ’ ಎಂದು ಮಲ್ಕಿನಾ ಸಂತಸ ವ್ಯಕ್ತಪಡಿಸಿದ್ದಾರೆ. ಮಾಸ್ಕೋದಿಂದ 50 ಕಿ.ಮೀ ದೂರದಲ್ಲಿರುವ ಬ್ರೊನಿಟ್ಸ್ಕೈ ಎನ್ನುವ ಊರಿನಲ್ಲಿ ಈ ಪ್ರತಿಮೆಯನ್ನು ಪ್ರದರ್ಶನಕ್ಕೆ ಇರಿಸಲಾಗಿದೆ. ಇದೇ ಸ್ಥಳದಲ್ಲಿ ಅರ್ಜೆಂಟೀನಾ ಅಭ್ಯಾಸ ನಡೆಸುತ್ತಿದೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಸಂಜು ಸ್ಯಾಮ್ಸನ್ ನನ್ನ ಅಣ್ಣನಿದ್ದಂತೆ; ಇಬ್ಬರ ಪೈಪೋಟಿ ಬಗ್ಗೆ ಮನಬಿಚ್ಚಿ ಮಾತಾಡಿದ ಜಿತೇಶ್ ಶರ್ಮಾ
ದಕ್ಷಿಣ ಆಫ್ರಿಕಾ ಎದುರು ಗೆದ್ದರೂ ನಿಂತಿಲ್ಲ ಚಿಂತೆ: 2ನೇ ಟಿ20ಗೆ ಭಾರತ ತಂಡದಲ್ಲಿ ಬದಲಾವಣೆ?