ರಾಂಚಿ ಕ್ರೀಡಾಂಗಣದಲ್ಲಿ ಧೋನಿ ಸ್ಟ್ಯಾಂಡ್‌?

By Web DeskFirst Published Feb 17, 2019, 9:32 AM IST
Highlights

ರಾಂಚಿ ಕ್ರೀಡಾಂಗಣದಲ್ಲಿ ಧೋನಿ ಸ್ಟ್ಯಾಂಡ್ ನಾಮಕರಣ ಮಾಡಲು ಜಾರ್ಖಂಡ್ ಕ್ರಿಕೆಟ್ ಸಂಸ್ಛೆ ಮುಂದಾಗಿದೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಸುದ್ದಿ ಹರಿದಾಡುತ್ತಿದೆ. ಇದರ ಸತ್ಯಾಸತ್ಯತೆ ಏನು?  ಇಲ್ಲಿದೆ.

ರಾಂಚಿ(ಫೆ.17): ಜಾರ್ಖಂಡ್‌ ಕ್ರಿಕೆಟ್‌ ಸಂಸ್ಥೆಯ ಕ್ರೀಡಾಂಗಣದ ಸ್ಟ್ಯಾಂಡ್‌ವೊಂದಕ್ಕೆ ಎಂ.ಎಸ್‌.ಧೋನಿ ಹೆಸರಿಡಲು ಸಂಸ್ಥೆ ನಿರ್ಧರಿಸಿದೆ ಎಂದು ವರದಿಯಾಗಿದೆ. ಈಗಾಗಲೇ ಧೋನಿ ಹೆಸರಿನ ನೇಮ್‌ಪ್ಲೇಟ್ ಸಿದ್ಧಪಡಿಸಲಾಗಿದೆ ಎಂದು ಸಾಮಾಜಿಕ ತಾಣಗಳಲ್ಲಿ ಸುದ್ದಿ ಹಬ್ಬಿದೆ. ಮಾ.8ರಂದು ಇಲ್ಲಿ ಭಾರತ-ಆಸ್ಪ್ರೇಲಿಯಾ ನಡುವಿನ ಏಕದಿನ ಸರಣಿಯ 3ನೇ ಪಂದ್ಯ ನಡೆಯಲಿದ್ದು, ಆ ವೇಳೆ ಸ್ಟ್ಯಾಂಡ್‌ ಉದ್ಘಾಟನೆಗೊಳ್ಳಲಿದೆ ಎನ್ನಲಾಗಿದೆ.

ಇದನ್ನೂ ಓದಿ: ಕೊಹ್ಲಿ, ಧೋನಿ ಸೇರಿದಂತೆ ಸ್ಟಾರ್ ಆಟಗಾರರಿಗೆ ಐಪಿಎಲ್‌ನಿಂದ ವಿಶ್ರಾಂತಿ!

 

👇🏻👇🏻👇🏻👇🏻👇🏻👇🏻
MS Dhoni stand
🤘🏻🤘🏻🤘🏻🤘🏻🤘🏻🤘🏻 pic.twitter.com/Kfnoa0aqSX

— Oཽmཽkཽaཽrཽ Aཽnཽpཽaཽtཽ (@Omi_Anpat619)

 

ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಸ್ಟಾಂಡ್, ಗವಾಸ್ಕರ್ ಸ್ಟಾಂಡ್‌ ನಾಮಕರಣ ಮಾಡೋ ಮೂಲಕ ದಿಗ್ಗಜ ಕ್ರಿಕೆಟಿಗರಿಗೆ ಗೌರವ ಸಲ್ಲಿಸಿದೆ. ಇದೀಗ ಟೀಂ ಇಂಡಿಯಾ ಕಂಡ ಯಶಸ್ವಿ ನಾಯಕ ಧೋನಿಗೂ ಗೌರವ ಸಲ್ಲಿಸಲು ಜಾರ್ಖಂಡ್ ಕ್ರಿಕೆಟ್ ಸಂಸ್ಥೆ ನಿರ್ಧರಿಸಿದೆ. 
ಇದನ್ನೂ ಓದಿ: ದಾಳಿಯಲ್ಲಿ ಹುತಾತ್ಮರಾದ ಎಲ್ಲಾ ಯೋಧರ ಮಕ್ಕಳಿಗೆ ಸೆಹ್ವಾಗ್ ಉಚಿತ ಶಿಕ್ಷಣ!

click me!