
ಮುಂಬೈ: ಭಾರತದ ಶ್ರೀಮಂತ ಉದ್ಯಮಿ ಮುಕೇಶ್ ಅಂಬಾನಿ ಸದ್ಯ ಎರಡನೇ ಮಗ ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ಮದುವೆ ಸಂಭ್ರಮದಲ್ಲಿದ್ದಾರೆ. ಮುಂಬೈನ ಜಿಯೋ ಕನ್ವೆಷನಲ್ ಹಾಲ್‌ನಲ್ಲಿ ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ಅವರ ಅದ್ಧೂರಿ ಮದುವೆ ಕಾರ್ಯಕ್ರಮ ಜುಲೈ 12ರಿಂದ ಆರಂಭವಾಗಿದ್ದು, ಜುಲೈ 14ರ ವರೆಗೆ ನಡೆಯಲಿದೆ. ಹೀಗಿರುವಾಗಲೇ ರಿಲಯನ್ಸ್ ಇಂಡಸ್ಟ್ರಿ ಮಾಲೀಕರಾದ ಮುಕೇಶ್ ಅಂಬಾನಿ, ಮಗನ ಮದುವೆ ಖುಷಿಯಲ್ಲಿ ಭಾರತೀಯರಿಗೆ ಬಂಪರ್ ಗಿಫ್ಟ್ ಘೋಷಿಸಿದ್ದಾರೆ
ಹೌದು, ಜಗತ್ತಿನ ಅತಿದೊಡ್ಡ ಕ್ರೀಡಾ ಹಬ್ಬ ಎಂದೇ ಕರೆಸಿಕೊಳ್ಳುವ ಒಲಿಂಪಿಕ್ಸ್ ಕ್ರೀಡಾಕೂಟ ಈ ಬಾರಿ ಜುಲೈ 26ರಿಂದ ಪ್ಯಾರಿಸ್‌ನಲ್ಲಿ ಜರುಗಲಿದೆ. 2024ರ ಪ್ಯಾರಿಸ್ ಒಲಿಂಪಿಕ್ಸ್ ಕ್ರೀಡಾಕೂಟದ ಅಧಿಕೃತ ಪ್ರಸಾರ ಹಾಗೂ ಡಿಜಿಟಲ್ ಹಕ್ಕನ್ನು ಮುಕೇಶ್ ಅಂಬಾನಿ ಒಡೆಯನದ ವೈಕಾಮ್18 ಸಂಸ್ಥೆ ಪಡೆದುಕೊಂಡಿದೆ. ಒಲಿಂಪಿಕ್ಸ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಭಾರತದ ಕ್ರೀಡಾಪಟುಗಳ ಒಟ್ಟು 20 ಫೀಡ್‌ಗಳ ಮೂಲಕ ಸ್ಪರ್ಧೆಗಳನ್ನು ವೀಕ್ಷಿಸಲು ಅನುವು ಮಾಡಿ ಕೊಡಲಾಗಿದೆ.
ವಿನಯ್ ಕುಮಾರ್ ಬದಲಿಗೆ ಈತನನ್ನಾದರೂ ಬೌಲಿಂಗ್ ಕೋಚ್ ಮಾಡಿ: ಬಿಸಿಸಿಐ ಮುಂದೆ ಹೊಸ ಡಿಮ್ಯಾಂಡ್ ಇಟ್ಟ ಗಂಭೀರ್..!
ಭಾರತೀಯರಿಗೆ ಭರ್ಜರಿ ಗಿಫ್ಟ್:
ಈ ಬಾರಿಯ ಪ್ಯಾರಿಸ್ ಒಲಿಂಪಿಕ್ಸ್ ಕ್ರೀಡಾಕೂಟವನ್ನು ಸ್ಪೋರ್ಟ್ಸ್18 ನೆಟ್‌ವರ್ಕ್(Sports18 Network) ಹಾಗೂ ಜಿಯೋ ಸಿನಿಮಾದಲ್ಲಿ ಉಚಿತವಾಗಿ ವೀಕ್ಷಿಸಲು ಅವಕಾಶ ಮಾಡಿಕೊಟ್ಟಿದೆ. ಈ ಮೂಲಕ ಮುಕೇಶ್ ಅಂಬಾನಿ, ಮಗನ ಮದುವೆಯ ಖುಷಿಯಲ್ಲಿ ಭಾರತೀಯ ಕ್ರೀಡಾಭಿಮಾನಿಗಳಿಗೆ ಭರ್ಜರಿ ಗಿಫ್ಟ್ ಘೋಷಿಸಿದ್ದಾರೆ.
ಇಲ್ಲಿಯವರೆಗೆ ಭಾರತೀಯ ಕ್ರೀಡಾಪಟುಗಳ ಸ್ಪರ್ಧೆಯ ಕುರಿತಂತೆ ಯಾವುದೇ ಪ್ರತ್ಯೇಕ ಫೀಡ್ ವ್ಯವಸ್ಥೆ ಇರಲಿಲ್ಲ. ಹೀಗಾಗಿ ಏಕಕಾಲದಲ್ಲಿ ಭಾರತೀಯರ ಕೆಲವು ಸ್ಪರ್ಧೆಗಳು ನಡೆಯುತ್ತಿದ್ದರೇ, ಈ ಪೈಕಿ ಕೆಲವು ಸ್ಪರ್ಧೆಗಳನ್ನು ಮಾತ್ರ ವೀಕ್ಷಿಸಲು ಭಾರತೀಯ ಅಭಿಮಾನಿಗಳಿಗೆ ಅವಕಾಶವಿತ್ತು. ಆದರೆ ಇದೀಗ ಭಾರತೀಯ ಅಭಿಮಾನಿಗಳು ಈ ಬಾರಿಯ ಪ್ಯಾರಿಸ್ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ತಮಗೆ ಬೇಕಾದ ಸ್ಪರ್ಧೆಯಗಳನ್ನು ಬೆರಳ ತುದಿಯಲ್ಲಿ ವೀಕ್ಷಿಸಲು ಜಿಯೋ ಸಿನಿಮಾ ಅವಕಾಶ ಮಾಡಿಕೊಟ್ಟಿದೆ.
ಅಂಬಾನಿ ಮಗನ ಮದುವೆಯಲ್ಲಿ ಪಾಂಡ್ಯ ಜತೆ ಟಪ್ಪಾಂಗುಚ್ಚಿ ಸ್ಟೆಪ್ಸ್ ಹಾಕಿದ ಫಿಫಾ ಅಧ್ಯಕ್ಷ..! ವಿಡಿಯೋ ವೈರಲ್
ಸ್ಪೋರ್ಟ್ಸ್18 ನೆಟ್‌ವರ್ಕ್ ಹಾಗೂ ಜಿಯೋ ಸಿನಿಮಾದಲ್ಲಿ ಈ ಬಾರಿ ಭಾರತಕ್ಕೆ ಚೊಚ್ಚಲ ಒಲಿಂಪಿಕ್ಸ್ ಪದಕ ಗೆದ್ದ ಮಹಿಳಾ ಕುಸ್ತಿಪಟು ಸಾಕ್ಷಿ ಮಲಿಕ್, 2008ರ ಬೀಜಿಂಗ್ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದ ವಿಜೇಂದ್ರ ಸಿಂಗ್, 4 ಬಾರಿ ಒಲಿಂಪಿಕ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸಿರುವ ಟೆನಿಸ್ ತಾರೆ ಸಾನಿಯಾ ಮಿರ್ಜಾ ತಜ್ಞ ವೀಕ್ಷಕ ವಿವರಣೆಗಾರರಾಗಿ ಕಾಣಿಸಿಕೊಳ್ಳಲಿದ್ದಾರೆ ಎಂದು ವೈಕಾಮ್18 ಸಂಸ್ಥೆಯು ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.