ಬೆಂಗಳೂರಲ್ಲಿ 7 ಐಪಿಎಲ್‌ ಪಂದ್ಯ- ಸಂಪೂರ್ಣ ಸಜ್ಜಾಗಿದೆ ಚಿನ್ನಸ್ವಾಮಿ ಕ್ರೀಡಾಂಗಣ!

By Web Desk  |  First Published Mar 20, 2019, 8:26 AM IST

ಐಪಿಎಲ್‌ ಲೀಗ್‌ ಹಂತದ ಪೂರ್ಣ ವೇಳಾಪಟ್ಟಿಪ್ರಕಟಗೊಂಡಿದೆ. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ 7 ಐಪಿಎಲ್ ಪಂದ್ಯ ಆಯೋಜನೆಗೊಳ್ಳಲಿದೆ. ಐಪಿಎಲ್ ವೇಳಾಪಟ್ಟಿಯ ಸಂಪೂರ್ಣ ವಿವರ ಇಲ್ಲಿದೆ.
 


ಮುಂಬೈ(ಮಾ.20):  ಲೋಕಸಭಾ ಚುನಾವಣೆ ಜತೆಜತೆಗೆ ಐಪಿಎಲ್‌ 12ನೇ ಆವೃತ್ತಿ ಆಯೋಜನೆಗೊಳ್ಳುತ್ತಿದ್ದರೂ, ಎಲ್ಲಾ 8 ತಂಡಗಳಿಗೂ ತಲಾ 7 ತವರಿನ ಪಂದ್ಯಗಳನ್ನು ಒದಗಿಸುವಲ್ಲಿ ಬಿಸಿಸಿಐ ಯಶಸ್ವಿಯಾಗಿದೆ. ಮಂಗಳವಾರ ಟೂರ್ನಿಯ ಲೀಗ್‌ ಹಂತದ ಪೂರ್ಣ ವೇಳಾಪಟ್ಟಿಯನ್ನು ಬಿಸಿಸಿಐ ಪ್ರಕಟಿಸಿತು. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಈ ಬಾರಿಯೂ 7 ಪಂದ್ಯಗಳು ನಡೆಯಲಿದೆ.

ಇದನ್ನೂ ಓದಿ: RCB ತಂಡಕ್ಕೆ ಕೊಹ್ಲಿ ಕೃತಜ್ಞರಾಗಿರಬೇಕು: ಗಂಭೀರ್ ಕೊಂಕು ನುಡಿ

Latest Videos

undefined

ಕೆಲ ದಿನಗಳ ಹಿಂದೆ ಮೊದಲ 2 ವಾರಗಳ ವೇಳಾಪಟ್ಟಿಯನ್ನು ಮಾತ್ರ ಪ್ರಕಟಿಸಲಾಗಿತ್ತು. ಚುನಾವಣಾ ದಿನಾಂಕಗಳು ಪ್ರಕಟಗೊಂಡ ಬಳಿಕ, ಅದಕ್ಕೆ ಅನುಗುಣವಾಗಿ ವೇಳಾಪಟ್ಟಿಸಿದ್ಧಪಡಿಸಲಾಗಿದೆ. ಮಾ.23ಕ್ಕೆ ಆರಂಭಗೊಳ್ಳಲಿರುವ ಲೀಗ್‌ ಹಂತ ಮೇ 5ರ ವರೆಗೂ ನಡೆಯಲಿದೆ. ಪ್ಲೇ-ಆಫ್‌ ವೇಳಾಪಟ್ಟಿಯನ್ನು ಬಿಸಿಸಿಐ ಇನ್ನೂ ಬಿಡುಗಡೆ ಮಾಡಿಲ್ಲ. 6 ವಾರಗಳ ನಡೆಯಲಿರುವ ಲೀಗ್‌ ಹಂತದಲ್ಲಿ ಒಟ್ಟು 56 ಪಂದ್ಯಗಳು ನಡೆಯಲಿವೆ. ವಾರಾಂತ್ಯದಲ್ಲಿ ದಿನಕ್ಕೆ 2 ಪಂದ್ಯಗಳು ನಡೆಯಲಿದ್ದು, 56 ಪಂದ್ಯಗಳ ಪೈಕಿ 12 ಪಂದ್ಯಗಳು ಸಂಜೆ 4ಕ್ಕೆ ಆರಂಭಗೊಳ್ಳಲಿವೆ.

ಇದನ್ನೂ ಓದಿ: ಮುಂಬೈ ಆರಂಭಿಕ ಬ್ಯಾಟ್ಸ್‌ಮನ್ ಹೆಸರು ಬಹಿರಂಗ ಪಡಿಸಿದ ರೋಹಿತ್!

ತವರು ಪಂದ್ಯಗಳು ಸ್ಥಳಾಂತರವಿಲ್ಲ: ಪ್ರಮುಖವಾಗಿ ಕೋಲ್ಕತಾ ನೈಟ್‌ ರೈಡ​ರ್‍ಸ್ ಹಾಗೂ ಮುಂಬೈ ಇಂಡಿಯನ್ಸ್‌ ತಂಡಗಳಿಗೆ ತವರಿನ ಪಂದ್ಯಗಳನ್ನು ನೀಡುವುದು ಬಿಸಿಸಿಐಗೆ ಸವಾಲಾಗಿ ಪರಿಣಮಿಸಿತ್ತು. ಕಾರಣ, ಪಶ್ಚಿಮ ಬಂಗಾಳದಲ್ಲಿ 7 ಹಂತ ಹಾಗೂ ಮಹಾರಾಷ್ಟ್ರದಲ್ಲಿ 4 ಹಂತಗಳಲ್ಲಿ ಮತದಾನ ನಡೆಯಲಿದ್ದು, ಭದ್ರತಾ ಸಮಸ್ಯೆ ಎದುರಾಗಲಿದೆ ಎನ್ನಲಾಗಿತ್ತು. ಆದರೂ ಮುಂಬೈ ಹಾಗೂ ಕೋಲ್ಕತಾ ತಂಡಗಳು ತನ್ನ ತವರು ಪಂದ್ಯಗಳನ್ನು ಪಡೆಯುವಲ್ಲಿ ಯಶಸ್ವಿಯಾಗಿವೆ.

‘ಕೋಲ್ಕತಾದಲ್ಲಿ ಪಂದ್ಯಗಳನ್ನು ಆಯೋಜಿಸುವುದೇ ದೊಡ್ಡ ಸವಾಲಾಗಿ ಪರಿಣಮಿಸಿತ್ತು. ಪಶ್ಚಿಮ ಬಂಗಾಳದಲ್ಲಿ 7 ಹಂತಗಳಲ್ಲಿ ಮತದಾನ ನಡೆದರೂ, ಕೋಲ್ಕತಾ ಹಾಗೂ ಸುತ್ತ ಮುತ್ತಲಿನ ಕ್ಷೇತ್ರಗಳಲ್ಲಿ ಮೇ 19ರಂದು ಚುನಾವಣೆ ನಡೆಯಲಿರುವ ಕಾರಣ, ಎಲ್ಲಾ 7 ಪಂದ್ಯಗಳನ್ನು ಈಡನ್‌ ಗಾರ್ಡನ್ಸ್‌ನಲ್ಲೇ ನಿಗದಿ ಪಡಿಸಲು ಅನುಕೂಲವಾಯಿತು’ ಎಂದು ಬಿಸಿಸಿಐ ಅಧಿಕಾರಿ ಹೇಳಿದ್ದಾರೆ.

ಅಲ್ಲದೇ ಮಹಾರಾಷ್ಟ್ರದಲ್ಲಿ ಭೀಕರ ಬರವಿರುವ ಕಾರಣದಿಂದಲೂ ಮುಂಬೈ ಹಾಗೂ ರಾಜ್ಯದ ಇನ್ನಿತರ ನಗರಗಳಲ್ಲಿ ಪಂದ್ಯಗಳನ್ನು ನಡೆಸಲು ವಿರೋಧ ಎದುರಾಗಲಿದೆ ಎನ್ನುವ ನಿರೀಕ್ಷೆ ಇತ್ತು. ಆದರೆ ಎಲ್ಲಾ ಸವಾಲುಗಳಿಗೂ ಸೂಕ್ತ ಪರಿಹಾರ ಹುಡುಕುವಲ್ಲಿ ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ ಯಶಸ್ಸು ಕಂಡಿದೆ.

ಇದನ್ನೂ ಓದಿ: ಚೊಚ್ಚಲ IPL ಆಡಲು ರೆಡಿಯಾದ 5 ಸ್ಟಾರ್ ವಿದೇಶಿ ಆಟಗಾರರಿವರು..!

ಎಲ್ಲಾ 8 ತಂಡಗಳು ತಮ್ಮ ತಮ್ಮ ನಿಗದಿತ ತವರು ಕ್ರೀಡಾಂಗಣಗಳಲ್ಲೇ ಎಲ್ಲಾ 7 ಪಂದ್ಯಗಳನ್ನು ಆಡಲಿವೆ. ಕಿಂಗ್ಸ್‌ ಇಲೆವೆನ್‌ ಪಂಜಾಬ್‌ ಹಿಂದಿನ ಆವೃತ್ತಿಗಳಲ್ಲಿ ತನ್ನ ಕೆಲ ತವರು ಪಂದ್ಯಗಳನ್ನು ಇಂದೋರ್‌ನಲ್ಲಿ ಆಡಿತ್ತು. ಆದರೆ ಈ ಬಾರಿ ತಂಡದ ಎಲ್ಲಾ ತವರು ಪಂದ್ಯಗಳು ಮೊಹಾಲಿಯಲ್ಲೇ ನಡೆಯಲಿದೆ.

ಐಪಿಎಲ್‌ ಆತಿಥ್ಯಕ್ಕೆ ಚಿನ್ನಸ್ವಾಮಿ ಸಜ್ಜು
ರಾಯಲ್‌ ಚಾಲೆಂಜ​ರ್‍ಸ್ ಬೆಂಗಳೂರು ತಂಡ, ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ 7 ಪಂದ್ಯಗಳನ್ನು ಆಡಲಿದೆ. ಮಾ.23ರಂದು ಚೆನ್ನೈನಲ್ಲಿ ಈ ಆವೃತ್ತಿಯ ಮೊದಲ ಪಂದ್ಯವನ್ನು ಆಡಲಿರುವ ಆರ್‌ಸಿಬಿ, ಮಾ.28ರಂದು ತವರಿನಲ್ಲಿ ಮುಂಬೈ ಇಂಡಿಯನ್ಸ್‌ ವಿರುದ್ಧ ಕಣಕ್ಕಿಳಿಯಲಿದೆ. ಮೇ 4ಕ್ಕೆ ಸನ್‌ರೈಸ​ರ್‍ಸ್ ತವರಿನಲ್ಲಿ ತನ್ನ ಕೊನೆ ಲೀಗ್‌ ಪಂದ್ಯವನ್ನು ಕೊಹ್ಲಿ ಪಡೆ ಆಡಲಿದೆ. ಬೆಂಗಳೂರಲ್ಲಿ ನಡೆಯಲಿರುವ 7 ಪಂದ್ಯಗಳ ಪೈಕಿ, 6 ಪಂದ್ಯಗಳು ರಾತ್ರಿ 8ಕ್ಕೆ ಆರಂಭಗೊಳ್ಳಲಿದ್ದು, ಇನ್ನುಳಿದ 1 ಪಂದ್ಯ ಸಂಜೆ 4ಕ್ಕೆ ಆರಂಭಗೊಳ್ಳಲಿದೆ.

click me!