IPL 2ನೇ ಕ್ವಾಲಿಫೈಯರ್: ಟಾಸ್ ಗೆದ್ದ CSK ಫೀಲ್ಡಿಂಗ್-ತಂಡದಲ್ಲಿ 1 ಬದಲಾವಣೆ!

Published : May 10, 2019, 07:03 PM ISTUpdated : May 10, 2019, 07:25 PM IST
IPL 2ನೇ ಕ್ವಾಲಿಫೈಯರ್: ಟಾಸ್ ಗೆದ್ದ CSK ಫೀಲ್ಡಿಂಗ್-ತಂಡದಲ್ಲಿ 1 ಬದಲಾವಣೆ!

ಸಾರಾಂಶ

12ನೇ ಆವೃತ್ತಿಯಯಲ್ಲಿ ಫೈನಲ್ ಪ್ರವೇಶಿಸೋ 2ನೇ ತಂಡ ಯಾವುದು? ಈ ಕುತೂಹಲಕ್ಕೆ ಇಂದು ಉತ್ತರ ಸಿಗಲಿದೆ. ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ನಡುವಿನ 2ನೇ ಕ್ವಾಲಿಫೈಯರ್ ಪಂದ್ಯ ಆರಂಭದಲ್ಲೇ ರೋಚಕತೆ ಹುಟ್ಟಿಸಿದೆ. ಟಾಸ್ ಗೆದ್ದಿರುವ ಚೆನ್ನೈ ಫೀಲ್ಡಿಂಗ್ ಆಯ್ಕೆ ಮಾಡಿದೆ.

ವಿಶಾಖಪಟ್ಟಣಂ(ಮೇ.10): 12ನೇ ಆವೃತ್ತಿ ಐಪಿಎಲ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ದ ಹೋರಾಟ ನಡೆಸಲಿರುವ ತಂಡ ಯಾವುದು? ಅನ್ನೋದು ಇಂದು ನಿರ್ಧಾರವಾಗಲಿದೆ.  ವಿಶಾಖಪಟ್ಟಣಂದಲ್ಲಿ ನಡೆಯುತ್ತಿರುವ 2ನೇ ಕ್ವಾಲಿಫೈಯರ್ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ಮುಖಾಮುಖಿಯಾಗಿದೆ. ಟಾಸ್ ಗೆದ್ದಿರುವ ಡೆಲ್ಲಿ ಚೆನ್ನೈ  ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದೆ. ಡೆಲ್ಲಿ ತಂಡದಲ್ಲಿ ಯಾವುದೇ ಬದಲಾವಣೆ ಇಲ್ಲ. ಚೆನ್ನೈ ತಂಡದಲ್ಲಿ ಒಂದು ಬದಲಾವಣೆ ಮಾಡಲಾಗಿದೆ. ಮುರಳಿ ವಿಜಯ್ ಬದಲು ಶಾರ್ದೂಲ್ ಠಾಕೂರ್ ತಂಡ ಸೇರಿಕೊಂಡಿದ್ದಾರೆ.

 

 

ಇದನ್ನೂ ಓದಿ: CSK ಮಣಿಸಿ ಫೈನಲ್‌ಗೆ ಎಂಟ್ರಿ ಕೊಟ್ಟ ಮುಂಬೈ ಇಂಡಿಯನ್ಸ್!

ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮುಗ್ಗರಿಸಿತ್ತು.  ಮುಂಬೈ ಇಂಡಿಯನ್ಸ್ ವಿರುದ್ಧ  6 ವಿಕೆಟ್ ಸೋಲು ಅನುಭವಿಸಿದ ಚೆನ್ನೈ, ಇದೀಗ ಫೈನಲ್ ಪ್ರವೇಶಿಸಲು ಡೆಲ್ಲಿ ವಿರುದ್ಧ ಹೋರಾಡಲಿದೆ. ಇತ್ತ ಎಲಿಮಿನೇಟರ್ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ 2 ವಿಕೆಟ್ ರೋಚಕ ಗೆಲುವು ಸಾಧಿಸಿದ ಡೆಲ್ಲಿ, ಮತ್ತೊಂದು ಗೆಲುವಿನ ನಿರೀಕ್ಷೆಯಲ್ಲಿದೆ. 


 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

IPL 2027 ಮಿನಿ ಹರಾಜಿಗೆ ಹೆಸರು ನೋಂದಾಯಿಸಿದ ತಂದೆ-ಮಗ..! ದಿಗ್ಗಜ ಕ್ರಿಕೆಟಿಗ, ಮತ್ತವರ ಮಗನ ನಡುವಿನ ವಯಸ್ಸಿನ ಅಂತರ ಇಷ್ಟೊಂದಾ?
IND vs NZ 2nd Test: ನ್ಯೂಜಿಲೆಂಡ್ ವಿರುದ್ಧ ಸರಣಿ ಗೆಲ್ಲಲು ಭಾರತಕ್ಕೆ ಲಾಸ್ಟ್ ಚಾನ್ಸ್; ಕ್ರೈಸ್ಟ್‌ಚರ್ಚ್ ಟೆಸ್ಟ್ ಯಾವಾಗ ಆರಂಭ?