ಹಾರ್ದಿಕ್ ಶರ್ಟ್ ಬೆಲೆಗೆ ಬೆಂಗ್ಳೂರಲ್ಲಿ ಸಿಗುತ್ತೆ 1BHK ಬಾಡಿಗೆ ಮನೆ!

By Web Desk  |  First Published May 10, 2019, 5:41 PM IST

ಟೀಂ ಇಂಡಿಯಾ ಸ್ಟೈಲ್ ಕಿಂಗ್ ಹಾರ್ದಿಕ್ ಪಾಂಡ್ಯ ಇದೀಗ ಮತ್ತೆ ಸುದ್ದಿಯಲ್ಲಿದ್ದಾರೆ. ಇತ್ತೀಚೆಗೆ ವಿವಾದದಿಂದ ಸದ್ದು ಮಾಡಿದ್ದ ಹಾರ್ದಿಕ್ ಇದೀಗ ಧರಿಸಿದ ಶರ್ಟ್ ಮೂಲಕ ಎಲ್ಲರ ಹುಬ್ಬೇರಿಸಿದ್ದಾರೆ.


ಮುಂಬೈ(ಮೇ.10): ಟೀಂ ಇಂಡಿಯಾ ಆಲ್ರೌಂಡರ್, ಮುಂಬೈ ಇಂಡಿಯನ್ಸ್ ತಂಡದ ಸ್ಟಾರ್ ಪ್ಲೇಯರ್ ಹಾರ್ದಿಕ ಪಾಂಡ್ಯ ಮೈದಾದಲ್ಲಿರಲಿ, ಕ್ರೀಡಾಂಗಣದಿಂದ ಹೊರಗಿರಲಿ ಡ್ರೆಸ್ಸಿಂಗ್, ಹೇರ್‌ಸ್ಟೈಲ್ ಸೇರಿದಂತೆ ಸ್ಟೈಲ್ ವಿಚಾರದಲ್ಲಿ ರಾಜಿಯಿಲ್ಲ. ಹೊಸ ಹೊಸ ಸ್ಟೈಲ್ ಪರಿಚಯಿಸುವುದರಲ್ಲಿ ಹಾರ್ದಿಕ್ ಪಾಂಡ್ಯ ಎತ್ತಿದ ಕೈ.   ಇದೀಗ ಹಾರ್ದಿಕ್ ಪಾಂಡ್ಯ ತಮ್ಮ ಶರ್ಟ್ ಬೆಲೆಯಿಂದ ಸುದ್ದಿಯಲ್ಲಿದ್ದಾರೆ.

ಇದನ್ನೂ ಓದಿ: ಪಂತ್ ದಾಖಲೆ ಧೂಳೀಪಟ ಮಾಡಿದ ಪಾಂಡ್ಯ..!

Tap to resize

Latest Videos

undefined

ಐಪಿಎಲ್ ಟೂರ್ನಿ ನಡುವೆ ಹಾರ್ದಿಕ್ ಪಾಂಡ್ಯ ಲೂಯಿ ವಿಟಾನ್ ಪ್ಯಾರಿಸ್ ಶರ್ಟ್‌ನಲ್ಲಿ ಕಾಣಿಸಿಕೊಂಡಿದ್ದಾರೆ.  ಲೂಯಿ ವಿಟಾನ್ ಪ್ಯಾರಿಸ್  ಪ್ರಿಂಟೆಡ್ ಶರ್ಟ್ ಇದಾಗಿದ್ದು, ಸಿಲ್ಕ್ ಫ್ಯಾಬ್ರಿಕ್ ಮೆಟಿರೀಯಲ್ ಹೊಂದಿದೆ. ಇದಕ್ಕೆ ಪರ್ಲ್ ಬಟನ್ ಮೂಲಕ ಫಿನೀಶ್ ನೀಡಲಾಗಿದೆ. ಇದರ ಬೆಲೆ $1,470. ಭಾರತೀಯ ರೂಪಾಯಿಗಳಲ್ಲಿ 1,01,999.

ಇದನ್ನೂ ಓದಿ: CSK Vs MI: ಗೆಲುವಿನ ಬಳಿಕ ಧೋನಿ ಕುರಿತು ಹಾರ್ದಿಕ್ ಟ್ವೀಟ್!

ಬೆಂಗಳೂರಲ್ಲಿ 1 ಬೆಡ್ ರೂಂ ಬಾಡಿಗೆ ಮನೆಯ ಮುಂಗಡ ಮೊತ್ತ ಸರಾಸರಿ 1 ಲಕ್ಷ ರೂಪಾಯಿ. ಇದೀಗ ದುಬಾರಿ ಬೆಲೆಯ ಶರ್ಟ್ ಹಾಕೋ ಮೂಲಕ ಹಾರ್ದಿಕ್ ಪಾಂಡ್ಯ ಭಾರಿ ಸದ್ದು ಮಾಡುತ್ತಿದ್ದಾರೆ. ಟೀಂ ಇಂಡಿಯಾದಲ್ಲಿ ಧೋನಿ ಹೇರ್ ಸ್ಟೈಲ್ ಮೂಲಕ ಗಮನಸೆಳೆದಿದ್ದಾರೆ. ಬಳಿಕ ವಿರಾಟ್ ಕೊಹ್ಲಿ ಟ್ಯಾಟು ಹಾಗೂ ಅತ್ಯುತ್ತಮ ಡ್ರೆಸ್ಸಿಂಗ್ ಮೂಲಕ ಮಿಂಚಿದ್ದಾರೆ. ಇದೀಗ ಹಾರ್ದಿಕ್ ಹೇರ್ ಸ್ಟೈಲ್, ಡ್ರೈಸ್, ಶೂ, ಗಾಗಲ್ಸ್, ವಾಚ್ ಸೇರಿದಂತೆ ಪ್ರತಿಯೊಂದರಲ್ಲೂ ಸದ್ದು ಮಾಡುತ್ತಿದ್ದಾರೆ.

click me!