
ಕಾಬೂಲ್[ಏ.05]: ಏಕದಿನ ವಿಶ್ವಕಪ್ ಟೂರ್ನಿಗೆ ಕೇವಲ ಇನ್ನೊಂದು ತಿಂಗಳು ಬಾಕಿ ಇರುವಂತೆಯೇ ಆಫ್ಘಾನಿಸ್ತಾನ ಕ್ರಿಕೆಟ್ ತಂಡದ ನಾಯಕ ಅಸ್ಗರ್ ಆಫ್ಘನ್ ತಲೆದಂಡವಾಗಿದ್ದು, ಮೂರು ಮಾದರಿಯ ಕ್ರಿಕೆಟ್’ಗೂ ಹೊಸ ನಾಯಕರನ್ನು ನೇಮಕ ಮಾಡಿ ಆಫ್ಘಾನಿಸ್ತಾನ ಕ್ರಿಕೆಟ್ ಸಂಸ್ಥೆ ಆದೇಶ ಹೊರಡಿಸಿದೆ.
ದೇಶಕ್ಕಾಗಿ ಹೆಸರನ್ನೇ ಬದಲಿಸಿದ ಆಫ್ಘಾನಿಸ್ತಾನ ಕ್ರಿಕೆಟ್ ನಾಯಕ!
ಏಕದಿನ ತಂಡದ ನಾಯಕನಾಗಿ ಗುಲಾಬದ್ದೀನ್ ನೈಬ್, ಉಪನಾಯಕನಾಗಿ ರಶೀದ್ ಖಾನ್ ನೇಮಕವಾದರೆ, ಟೆಸ್ಟ್ ತಂಡದ ನಾಯಕನಾಗಿ ರೆಹಮತ್ ಶಾ, ಉಪನಾಯಕನಾಗಿ ಹಸ್ಮತ್ ಶಾಹಿದಿಗೆ ಪಟ್ಟ ಕಟ್ಟಲಾಗಿದೆ. ಇನ್ನು ಟಿ20 ನಾಯಕತ್ವ ರಶೀದ್ ಖಾನ್ ಪಾಲಾಗಿದ್ದು, ಇವರಿಗೆ ಉಪನಾಯಕನಾಗಿ ಶಫೀಕ್’ಉಲ್ಲಾ ಶಫಕ್ ಸಾಥ್ ನೀಡಲಿದ್ದಾರೆ.
ಚೊಚ್ಚಲ ಟೆಸ್ಟ್ ಪಂದ್ಯ ಜಯಿಸಿದ ಆಫ್ಘಾನಿಸ್ತಾನ
ಮೊಹಮ್ಮದ್ ನಬೀ ಬಳಿಕ 2015ರಲ್ಲಿ ತಂಡದ ನಾಯಕತ್ವ ವಹಿಸಿಕೊಂಡಿದ್ದ ಅಸ್ಗರ್ ಆಫ್ಘಾನ್ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿದ್ದಾರೆ. ಅಸ್ಗರ್ ನಾಯಕತ್ವದಲ್ಲಿ ಆಫ್ಘನ್ ತಂಡ ಐಸಿಸಿ ಪೂರ್ಣಾವಧಿ ಸದಸ್ಯ ತಂಡವಾಗಿ ಹೊರಹೊಮ್ಮಿತ್ತು. ಟೆಸ್ಟ್ ಮಾನ್ಯತೆ ಪಡೆದ ಬೆನ್ನಲ್ಲೇ ಆಡಿದ ಎರಡನೇ ಪಂದ್ಯದಲ್ಲೇ ಆಫ್ಘನ್ ತಂಡವು ಐರ್ಲೆಂಡ್ ವಿರುದ್ಧ ಚೊಚ್ಚಲ ಐತಿಹಾಸಿಕ ಟೆಸ್ಟ್ ಗೆಲುವನ್ನು ಸಾಧಿಸಿತ್ತು. ಇನ್ನು ಅಸ್ಗರ್ ನೇತೃತ್ವದಲ್ಲಿ ಏಕದಿನ ಕ್ರಿಕೆಟ್’ನಲ್ಲಿ 33 ಹಾಗೂ ಟಿ20 ಕ್ರಿಕೆಟ್’ನಲ್ಲಿ 37 ಗೆಲುವುಗಳನ್ನು ಕಂಡಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.