ಐಪಿಎಲ್ 2019: ಪುಲ್ವಾಮಾ ಹುತಾತ್ಮ ಕುಟುಂಬಕ್ಕೆ ಕಿಂಗ್ಸ್ XI ಪಂಜಾಬ್ ನೆರವು!

Published : Mar 19, 2019, 08:57 PM ISTUpdated : Mar 19, 2019, 08:58 PM IST
ಐಪಿಎಲ್ 2019: ಪುಲ್ವಾಮಾ ಹುತಾತ್ಮ ಕುಟುಂಬಕ್ಕೆ ಕಿಂಗ್ಸ್ XI ಪಂಜಾಬ್ ನೆರವು!

ಸಾರಾಂಶ

ಪುಲ್ವಾಮಾ ಭಯೋತ್ಪಾದಕ ದಾಳಿಯಲ್ಲಿ ಭಾರತ 40ಕ್ಕೂ ಹೆಚ್ಚು CRPF ಯೋಧರು ಹುತಾತ್ಮರಾಗಿದ್ದಾರೆ. ಇದೀಗ ಹುತಾತ್ಮ ಯೋಧರ ಕುಟುಂಬಕ್ಕೆ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ನೆರವಾಗಿದೆ.

ಪಂಜಾಬ್(ಮಾ.19): 12ನೇ ಆವೃತ್ತಿ ಐಪಿಎಲ್ ಟೂರ್ನಿ ಮಾ.23 ರಿಂದ ಆರಂಭಗೊಳ್ಳುತ್ತಿದೆ. ಇದೀಗ ಎಲ್ಲಾ ತಂಡಗಳು ಅಂತಿಮ ತಯಾರಿ ನಡೆಸುತ್ತಿದೆ. ಬಲಿಷ್ಠ ಆಟಗಾರರನ್ನು ಖರೀದಿಸಿರುವ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಈ ಬಾರಿ ಪ್ರಶಸ್ತಿ ಮೇಲೆ ಕಣ್ಣಿಟ್ಟಿದೆ. ಅಭ್ಯಾಸ ನಡೆಸುತ್ತಿರುವ ಪಂಜಾಬ್ ತಂಡ, ಪುಲ್ವಾಮಾ ದಾಳಿಯಲ್ಲಿ ಹುತಾತ್ಮರ ಯೋಧರ ಕುಟಂಬಕ್ಕೆ ನೆರವಾಗಿದೆ.

ಇದನ್ನೂ ಓದಿ: ಐಪಿಎಲ್ ಉದ್ಘಾಟನಾ ಸಮಾರಂಭ ರದ್ದು - ಭಾರತೀಯರ ಹೃದಯ ಗೆದ್ದ ಬಿಸಿಸಿಐ!

ಪುಲ್ವಾಮಾ ಭಯೋತ್ಪಾದಕ ದಾಳಿಯಲ್ಲಿ ಭಾರತದ 40ಕ್ಕೂ ಹೆಚ್ತು CRPF ಯೋಧರು ಹುತಾತ್ಮರಾಗಿದ್ದಾರೆ. ಇದರಲ್ಲಿ ಪಂಜಾಬ್ ಹಾಗೂ ಹಿಮಾಚಲ ಪ್ರದೇಶದ ಐವರು ಯೋಧರು ಹುತಾತ್ಮರಾಗಿದ್ದು, ಇವರ ಕುಟುಂಬಕ್ಕೆ ತಲಾ 5 ಲಕ್ಷ ರೂಪಾಯಿಂತೆ ಓಟ್ಟು 25 ಲಕ್ಷ ರೂಪಾಯಿ ಹಣವನ್ನು ಪಂಜಾಬ್ ತಂಡ ನೀಡಿದೆ.

ಇದನ್ನೂ ಓದಿ: ಐಪಿಎಲ್ 2019: ಸಂಪೂರ್ಣ ವೇಳಾ ಪಟ್ಟಿ ಬಿಡುಗಡೆ!

ಪಂಜಾಬ್ ಹಾಗೂ ಹಿಮಾಚಲ ಪ್ರದೇಶದ CRPF ಯೋಧರಾದ ಜೈಮಾಲ್ ಸಿಂಗ್, ಸುಖ್‌ಜಿಂದರರ್ ಸಿಂಗ್, ಮನಿಂದರ್ ಸಿಂಗ್, ಕುಲ್ವಿಂದರ್ ಸಿಂಗ್ ಹಾಗೂ ತಿಲಕ್ ರಾಜ್ ಹುತಾತ್ಮರಾಗಿದ್ದಾರೆ. ಇವರ ಕುಟುಂಬಕ್ಕೆ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಆರ್ಥಿಕ ನೆರವು ನೀಡಿದೆ. ಈಗಾಗಲೇ ಐಪಿಎಲ್ ಉದ್ಘಾಟನಾ ಸಮಾರಂಭವನ್ನು ರದ್ದುಗೊಳಿಸಿರುವ ಬಿಸಿಸಿಐ, ಸಮಾರಂಭದ ಹಣವನ್ನು ಹುತಾತ್ಮ CRPF ಯೋಧರ ಕುಟುಂಬಕ್ಕೆ ನೀಡುವುದಾಗಿ ಘೋಷಿಸಿದೆ.
 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಅರ್ಜುನ್ ಮದುವೆಯಲ್ಲಿ ಮಿಂಚಿದ್ದು ಅಕ್ಕ ಸಾರಾ ತೆಂಡೂಲ್ಕರ್, ಪಿಂಕ್ ಸೀರೆಯಲ್ಲಿ ಮೋಡಿ
T20 WC 2026: ಇಂಗ್ಲೆಂಡ್ ವಿರುದ್ಧ ಸೆಮಿಫೈನಲ್: ಟೀಂ ಇಂಡಿಯಾಗೆ ಕಪಿಲ್ ದೇವ್ 'ಗುಡ್ ಲಕ್'!