IPL 2019: ಪ್ಲೇ ಆಫ್ ಹಾಗೂ ಫೈನಲ್ ಪಂದ್ಯದ ಸಮಯ ಬದಲಾವಣೆ!

By Web Desk  |  First Published Apr 29, 2019, 3:07 PM IST

IPL 2019ರ ಪ್ಲೇ ಆಫ್, ಫೈನಲ್ ಪಂದ್ಯ ಹಾಗೂ ಮಹಿಳಾ ಐಪಿಎಲ್ ಪ್ರದರ್ಶನದ ಪಂದ್ಯದ ಸಮಯದಲ್ಲಿ ಬದಲಾವಣೆ ಮಾಡಲಾಗಿದೆ. ನೂತನ ವೇಳಾಪಟ್ಟಿ ಬಿಡುಗಡೆ ಮಾಡಿರುವ ಬಿಸಿಸಿಐ ಹೊಸ ಸಮಯದಲ್ಲಿ ಪಂದ್ಯ ಆರಂಭಗೊಳ್ಳಲಿದೆ ಎಂದು ಸ್ಪಷ್ಟಪಡಿಸಿದೆ.


ಮುಂಬೈ(ಏ.29): ಐಪಿಎಲ್ ಟೂರ್ನಿ ಅಂತಿಮ ಘಟ್ಟ ತಲುಪುತ್ತಿದೆ. ಪ್ಲೇ ಆಪ್ ಸ್ಥಾನಕ್ಕಾಗಿ ತಂಡಗಳ ಹೋರಾಟ ಜೋರಾಗಿದೆ. ಮೇ 5ರಂದು ಲೀಗ್ ಹಂತದ ಪಂದ್ಯಗಳು ಮುಕ್ತಾಯಗೊಳ್ಳಲಿದ್ದು, ಮೇ ರಿಂದ ಪ್ಲೇ ಆಪ್ ಹಂತದ ಪಂದ್ಯಗಳು ಆರಂಭಗೊಳ್ಳಲಿದೆ. ಇದೀಗ ಬಿಸಿಸಿಐ ನೂತನ ವೇಳಾಪಟ್ಟಿ ಬಿಡುಗಡೆ ಮಾಡಲಾಗಿದ್ದು, ಐಪಿಎಲ್ ಪ್ಲೇ ಆಫ್, ಫೈನಲ್ ಹಾಗೂ ಮಹಿಳಾ ಐಪಿಎಲ್ ಪ್ರದರ್ಶನ ಪಂದ್ಯದ ಸಮಯ ಬದಲಾವಣೆ ಮಾಡಲಾಗಿದೆ.

ನೂತನ ವೇಳಾಪಟ್ಟಿಯಲ್ಲಿ ಪ್ಲೇ ಆಫ್, ಫೈನಲ್ ಹಾಗೂ ಮಹಿಳಾ ಐಪಿಎಲ್ ಪ್ರದರ್ಶನ ಪಂದ್ಯ ಸಂಜೆ 7.30ಕ್ಕೆ ಆರಂಭವಾಗಲಿದೆ. ಈ ಮೊದಲು 8 ಗಂಟೆಗೆ ನಿಗಧಿಪಡಿಸಲಾಗಿತ್ತು. ಇದೀಗ ಅರ್ಧಗಂಟೆ ಮುಂಚಿತವಾಗಿ ಪ್ಲೇಆಫ್ ಪಂದ್ಯಗಳು ಆರಂಭಗೊಳ್ಳಲಿದೆ.

Tap to resize

Latest Videos

undefined

ಬದಲಾಯದ IPL ಪ್ಲೇ ಆಫ್ - ಫೈನಲ್ ಪಂದ್ಯದ ಸಮಯ:

ದಿನಾಂಕ ಪಂದ್ಯ ಕ್ರೀಡಾಂಗಣ ಸಮಯ
ಮೇ, 7 ಕ್ವಾಲಿಫೈಯರ್1 ಚೆನ್ನೈ 7.30PM
ಮೇ,8 ಎಲಿಮಿನೇಟರ್ ವೈಝಾಗ್ 7.30PM
ಮೇ,10 ಕ್ವಾಲಿಫೈಯರ್2 ವೈಝಾಗ್ 7.30PM
ಮೇ,12 ಫೈನಲ್ ಹೈದರಾಬಾದ್ 7.30PM

ಮಹಿಳಾ ಐಪಿಎಲ್ ಪ್ರದರ್ಶನ ಪಂದ್ಯ:

ದಿನಾಂಕ ಪಂದ್ಯ ಕ್ರೀಡಾಂಗಣ ಸಮಯ
ಮೇ,6 Supernovas vs Trailblazers ಜೈಪುರ 7.30PM
ಮೇ,8     Trailblazers vs Velocity  ಜೈಪುರ 7.30PM
ಮೇ,9     Supernovas vs Velocity ಜೈಪುರ 7.30PM
ಮೇ,11 Final  ಜೈಪುರ 7.30PM

 

click me!