ಗಾಯದ ಮೇಲೆ ಬರೆ ಎಳೆದಂತಾದ ರೋಹಿತ್ ಶರ್ಮಾ ಸ್ಥಿತಿ!

Published : Apr 29, 2019, 02:50 PM IST
ಗಾಯದ ಮೇಲೆ ಬರೆ ಎಳೆದಂತಾದ ರೋಹಿತ್ ಶರ್ಮಾ ಸ್ಥಿತಿ!

ಸಾರಾಂಶ

ಕೋಲ್ಕತಾನ ನೈಟ್ ರೈಡರ್ಸ್ ವಿರುದ್ಧದ ಪಂದ್ಯ ಸೋತ ಬೆನ್ನಲ್ಲೇ ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮಾ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸೋಲಿನ ಬಳಿಕ ರೋಹಿತ್ ಎದುರಾದ ಸಮಸ್ಯೆ ಏನು? ಇಲ್ಲಿದೆ ವಿವರ.

ಕೋಲ್ಕತಾ(ಏ.29): 12ನೇ ಆವೃತ್ತಿ ಐಪಿಎಲ್ ಟೂರ್ನಿ ಮತ್ತೊಂದು ರೋಚಕ ಪಂದ್ಯಕ್ಕೆ ಸಾಕ್ಷಿಯಾಗಿದೆ. ಕೋಲ್ಕತಾ ನೈಟ್ ರೈಡರ್ಸ್ ಹಾಗೂ ಮುಂಬೈ ಇಂಡಿಯನ್ಸ್ ನಡುವಿನ ಪಂದ್ಯ ಟೂರ್ನಿ ರೋಚಕತೆ ಮತ್ತಷ್ಟು ಹೆಚ್ಚಿಸಿದೆ. ಹಾರ್ದಿಕ್ ಪಾಂಡ್ಯ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದರೂ ಮುಂಬೈ ಇಂಡಿಯನ್ಸ್ ಸೋಲಿಗೆ ಶರಣಾಗಿದೆ. ಮುಂಬೈ ಸೋಲಿನ ಬೆನ್ನಲ್ಲೇ ನಾಯಕ ರೋಹಿತ್ ಶರ್ಮಾಗೆ ಸಂಕಷ್ಠ ಎದುರಾಗಿದೆ.

ಇದನ್ನೂ ಓದಿ: ಮುಂಬೈ ಇಂಡಿಯನ್ಸ್’ನಿಂದ ಸಚಿನ್‌ಗಿಲ್ಲ ಸಂಭಾವನೆ!

ಮೈದಾನದಲ್ಲಿ ಅನುಚಿತ ವರ್ತನೆ ತೋರಿ ನಿಯಮ ಉಲ್ಲಂಘಿಸಿದ ರೋಹಿತ್ ಶರ್ಮಾಗೆ ಪಂದ್ಯದ ಶೇಖಡಾ 15 ರಷ್ಟು ದಂಡ ವಿಧಿಸಲಾಗಿದೆ. ರೋಹಿತ್ ಲೆವೆಲ್ 1, ಐಪಿಎಲ್ ಕೋಡ್ ಆಫ್ ಕಂಡಕ್ಟ್ 2.2 ನಿಯಮ ಉಲ್ಲಂಘಿಸಿದ್ದಾರೆ. ಸೋಲಿನ ಬೆನ್ನಲ್ಲೇ ನಿಯಮ ಉಲ್ಲಂಘನೆ ನಾಯಕ ರೋಹಿತ್ ತಲೆನೋವು ಹೆಚ್ಚಿಸಿದೆ.

ಇದನ್ನೂ ಓದಿ: IPL ಇತಿಹಾಸದಲ್ಲೇ ಅಪರೂಪದ ದಾಖಲೆ ಬರೆದ CSK

ಗೆಲುವಿಗೆ 233ರನ್ ಟಾರ್ಗೆಟ್ ಪಡೆದ ಮುಂಬೈ ಇಂಡಿಯನ್ಸ್ ತಂಡಕ್ಕೆ ನಾಯಕ ರೋಹಿತ್ ಶರ್ಮಾ ಉತ್ತಮ ಆರಂಭ ನೀಡಿದರು. ಬೌಂಡರಿ ಸಿಡಿಸಿ ಅಬ್ಬರಿಸೋ ಸೂಚನೆ ನೀಡಿದರು. ಆದರೆ ಹ್ಯಾರಿ ಗರ್ನಿ ಎಸೆತದಲ್ಲಿ ರೋಹಿತ್ LB ಬಲೆಗೆ ಬಿದ್ದರು.  ಔಟ್ ಸೈಡ್ ಪಿಚ್ ಆಗಿದ್ದ ಬಾಲ್ ಲೆಗ್ ಸೈಡ್ ವಿಕೆಟ್ ತಾಗಿತ್ತು. ಅಂಪೈರ್ ಔಟ್ ತೀರ್ಪನ್ನು DRS ಮೂಲಕ ಪ್ರಶ್ನಿಸಿದ ರೋಹಿತ್‌ಗೆ ಮತ್ತೆ ಹಿನ್ನಡೆಯಾಗಿತ್ತು. ಇದರಿಂದ ಕೋಪಗೊಂಡ ರೋಹಿತ್ ಪೆವಿಲಿಯನ್‌ಗೆ ಮರಳೋ ವೇಳೆ ನಾನ್ ಸ್ಟ್ರೈಕ್ ವಿಕೆಟ್‌ಗೆ ಉದ್ದೇಶ ಪೂರ್ವಕವಾಗಿ ಬ್ಯಾಟ್ ತಾಗಿಸಿದ್ದರು. 

 

 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಚೇರ್ ಮೇಲೆ ಕೂತು ಹೋಮ ಹವನ ಮಾಡಿದ ಶ್ರೇಯಸ್ ಅಯ್ಯರ್, ಸನಾತನಿಯೋ, ಅಲ್ವೋ ಚರ್ಚೆ!
ಐಸಿಸಿ ಟಿ20 ವಿಶ್ವಕಪ್‌ಗೂ ಮುನ್ನ ಆಸೀಸ್‌, ಆಫ್ಘನ್‌ಗೆ ಟಿ20 ಪಂದ್ಯಗಳೇ ಇಲ್ಲ! ಯಾಕೆ?