ರಸೆಲ್ ಸ್ಫೋಟ- ಮುಂಬೈಗೆ 233 ರನ್ ಟಾರ್ಗೆಟ್ ನೀಡಿದ KKR

Published : Apr 28, 2019, 09:46 PM ISTUpdated : Apr 28, 2019, 09:48 PM IST
ರಸೆಲ್ ಸ್ಫೋಟ- ಮುಂಬೈಗೆ 233 ರನ್ ಟಾರ್ಗೆಟ್ ನೀಡಿದ KKR

ಸಾರಾಂಶ

ಗೆಲ್ಲಲೇಬೇಕಾದ ಒತ್ತಡದಲ್ಲಿರುವ ಕೋಲ್ಕತಾ ನೈಟ್ ರೈಡರ್ಸ್ ಸ್ಫೋಟಕ ಬ್ಯಾಟಿಂಗ್ ಪ್ರರ್ಶನ ನೀಡಿದೆ. ಮುಂಬೈ ವಿರುದ್ದ ಅಬ್ಬರಿಸಿರುವ ಕೆಕೆಆರ್ ತವರಿನ ಅಭಿಮಾನಿಗಳಿಗೆ ಬೌಂಡರಿ ಸಿಕ್ಸರ್ ಮನರಂಜನೆ ನೀಡಿದೆ. ಕೆಕೆಆರ್ ಬ್ಯಾಟಿಂಗ್ ಹೈಲೈಟ್ಸ್ ಇಲ್ಲಿದೆ.

ಕೋಲ್ಕತಾ(ಏ.28): ಸತತ 6 ಸೋಲಿನಿಂದ ಕಂಗೆಟ್ಟಿರುವ ಕೋಲ್ಕತಾ ನೈಟ್ ರೈಡರ್ಸ್ ಇದೀಗ ಮುಂಬೈ ವಿರುದ್ಧ ಗೆಲುವಿನ ವಿಶ್ವಾಸದಲ್ಲಿದೆ. ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆಯುತ್ತಿರುವ 47ನೇ ಲೀಗ್ ಪಂದ್ಯದಲ್ಲಿ ಕೆಕೆಆರ್ ವಿಕೆಟ್ 2 ನಷ್ಟಕ್ಕೆ 232 ರನ್ ಸಿಡಿಸಿದೆ. ಇದೀಗ ಮುಂಬೈ ಗೆಲುವಿಗೆ 233 ರನ್ ಸಿಡಿಸಬೇಕಿದೆ.

ಟಾಸ್ ಸೋತು ಬ್ಯಾಟಿಂಗ್ ಇಳಿದ ಕೋಲ್ಕತಾ ನೈಟ್ ರೈಡರ್ಸ್ ಭರ್ಜರಿ ಆರಂಭ ಪಡೆಯಿತು. ಶುಭಮಾನ್ ಗಿಲ್ ಹಾಗೂ ಕ್ರಿಸ್ ಲಿನ್ ಮೊದಲ ವಿಕೆಟ್‌ಗೆ 96 ರನ್ ಜೊತೆಯಾಟ ನೀಡಿದರು. ಅರ್ಧಶತಕ ಸಿಡಿಸಿದ ಕ್ರಿಸ್ ಲಿನ್ 54 ರನ್ ಬಾರಿಸಿ ಔಟಾದರು. ಅಬ್ಬರಿಸಿದ ಶುಭ್‌ಮಾನ್ ಗಿಲ್ 45 ಎಸೆತದಲ್ಲಿ 76 ರನ್ ಸಿಡಿಸಿ ಔಟಾದರು.

ಆ್ಯಂಡ್ರೆ ರಸೆಲ್ ಹಾಗೂ ನಾಯಕ ದಿನೇಶ್ ಕಾರ್ತಿಕ್ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಕೆಕೆಆರ್ 200 ರನ್ ಗಡಿ ದಾಟಿತು. ರಸೆಲ್ 40 ಎಸೆತದಲ್ಲಿ 6 ಬೌಂಡರಿ ಹಾಗೂ 8 ಸಿಕ್ಸರ್ ನೆರವಿನಿಂದ ಅಜೇಯ 80 ರನ್ ಸಿಡಿಸಿದರು. ಇನ್ನು ಕಾರ್ತಿಕ್ ಅಜೇಯ 15 ರನ್ ಸಿಡಿಸಿದರು.  ಈ ಮೂಲಕ ಕೆಕೆಆರ್ 2 ವಿಕೆಟ್ 232 ನಷ್ಟಕ್ಕೆ ರನ್  ಸಿಡಿಸಿತು.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕ್ರೈಸ್ಟ್‌ಚರ್ಚ್ ಪವಾಡ: ಕಿವೀಸ್ ಎದುರು ಐತಿಹಾಸಿಕ ಡ್ರಾ ಸಾಧಿಸಿದ ವೆಸ್ಟ್ ಇಂಡೀಸ್!
20 ಮ್ಯಾಚ್ ಬಳಿಕ ಕೊನೆಗೂ ಟಾಸ್ ಗೆದ್ದ ಭಾರತ! ದಕ್ಷಿಣ ಆಫ್ರಿಕಾ ತಂಡದಲ್ಲಿ 2 ಬದಲಾವಣೆ!