ಚೆನ್ನೈಗೆ 100ನೇ ಗೆಲುವು; ಡೆಲ್ಲಿಗೆ ನೂರನೇ ಸೋಲು; ನಿರ್ಮಾಣವಾದವು ಅಪರೂಪದ ದಾಖಲೆಗಳು

By Web DeskFirst Published May 11, 2019, 7:03 PM IST
Highlights

ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ಕೆಲವು ಅಪರೂಪದ ದಾಖಲೆಗಳು ನಿರ್ಮಾಣವಾಗಿದ್ದು ಸುವರ್ಣನ್ಯೂಸ್.ಕಾಂ ನಿಮ್ಮ ಮುಂದಿಡುತ್ತಿದೆ. ನೋಡಿ ಎಂಜಾಯ್ ಮಾಡಿ...

ಬೆಂಗಳೂರು[ಮೇ.11]: ಹಾಲಿಚಾಂಪಿಯನ್ ಚೆನ್ನೈ ಸೂಪರ್’ಕಿಂಗ್ಸ್ ತಂಡವು ದಾಖಲೆಯ 8ನೇ ಬಾರಿಗೆ ಐಪಿಎಲ್ ಫೈನಲ್ ಪ್ರವೇಶಿಸಿದೆ. ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಮಣಿಸಿದ ಧೋನಿ ಪಡೆ ಈ ಸಾಧನೆಯನ್ನು ಮಾಡಿದೆ. 

ವಿಶಾಖಪಟ್ಟಣಂನಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ 148 ರನ್’ಗಳ ಸ್ಫರ್ಧಾತ್ಮಕ ಮೊತ್ತ ಕಲೆಹಾಕಿತ್ತು. ಇದಕ್ಕುತ್ತರವಾಗಿ ಚೆನ್ನೈ ಆರಂಭಿಕ ಬ್ಯಾಟ್ಸ್’ಮನ್’ಗಳಾದ ಫಾಫ್ ಡು ಪ್ಲೆಸಿಸ್ ಹಾಗೂ ಶೇನ್ ವ್ಯಾಟ್ಸನ್ ತಲಾ 50 ರನ್ ಬಾರಿಸುವ ಮೂಲಕ ತಂಡದ ಗೆಲುವು ಸುಲಭವಾಗಿಸಿಕೊಟ್ಟರು. 

IPL 2019: ಡೆಲ್ಲಿ ಕ್ಯಾಪಿಟಲ್ಸ್‌ಗೆ ಶಾಕ್- CSKಗೆ ಫೈನಲ್ ಟಿಕೆಟ್!

ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ಕೆಲವು ಅಪರೂಪದ ದಾಖಲೆಗಳು ನಿರ್ಮಾಣವಾಗಿದ್ದು ಸುವರ್ಣನ್ಯೂಸ್.ಕಾಂ ನಿಮ್ಮ ಮುಂದಿಡುತ್ತಿದೆ. ನೋಡಿ ಎಂಜಾಯ್ ಮಾಡಿ...

08: ಚೆನ್ನೈ ಸೂಪರ್’ಕಿಂಗ್ಸ್ ತಂಡವು ಇದುವರೆಗೂ 10 ಐಪಿಎಲ್ ಆವೃತ್ತಿಗಳಲ್ಲಿ ಪಾಲ್ಗೊಂಡಿದ್ದು, ಎಲ್ಲಾ ಆವೃತ್ತಿಗಳಲ್ಲೂ ಪ್ಲೇ ಆಫ್ ಪ್ರವೇಶಿಸಿದ ಏಕೈಕ ತಂಡ ಎನ್ನುವ ಕೀರ್ತಿಗೆ ಪಾತ್ರವಾಗಿದೆ. ಇದೀಗ ಡೆಲ್ಲಿ ಮಣಿಸುವ ಮೂಲಕ ಚೆನ್ನೈ ದಾಖಲೆಯ 8ನೇ ಬಾರಿಗೆ ಫೈನಲ್ ಪ್ರವೇಶಿಸಿದ ಮೊದಲ ತಂಡ ಎನ್ನುವ ಗರಿಮೆಯನ್ನು ತನ್ನ ಮುಡಿಗೇರಿಸಿಕೊಂಡಿದೆ.

00: ಡೆಲ್ಲಿ ಕ್ಯಾಪಿಟಲ್ಸ್ ತಂಡದ ಫೈನಲ್ ಪ್ರವೇಶದ ಕನಸು ಮತ್ತೊಮ್ಮೆ ಭಗ್ನವಾದಂತಾಗಿದೆ. ಈ ಮೂಲಕ ಆಡಿದ 12 ಆವೃತ್ತಿಗಳಲ್ಲಿ ಒಮ್ಮೆಯೂ ಫೈನಲ್ ಪ್ರವೇಶಿಸದ ನತದೃಷ್ಟ ತಂಡ ಎನ್ನುವ ಕುಖ್ಯಾತಿಗೆ ಡೆಲ್ಲಿ ಪಾತ್ರವಾಗಿದೆ.

100: ಡೆಲ್ಲಿ ವಿರುದ್ಧ ಗೆಲುವು ಸಾಧಿಸುವ ಮೂಲಕ ಚೆನ್ನೈ ಸೂಪರ್’ಕಿಂಗ್ಸ್ ಐಪಿಎಲ್ ಟೂರ್ನಿಯಲ್ಲಿ ನೂರು ಗೆಲುವು ದಾಖಲಿಸಿದ ಎರಡನೇ ತಂಡ ಎನ್ನುವ ಕೀರ್ತಿಗೆ ಭಾಜನವಾಯಿತು. ಇದೇ ಆವೃತ್ತಿಯಲ್ಲಿ ಈ ಮೊದಲು ಮುಂಬೈ ಇಂಡಿಯನ್ಸ್ ಐಪಿಎಲ್’ನಲ್ಲಿ ನೂರನೇ ಗೆಲುವು ದಾಖಲಿಸಿತ್ತು. ಕಾಕತಾಳೀಯವೆಂದರೆ ಡೆಲ್ಲಿ ಕ್ಯಾಪಿಟಲ್ಸ್ ತಂಡ ಟಿ20 ಕ್ರಿಕೆಟ್’ನಲ್ಲಿ ನೂರನೇ ಸೋಲು ಕಂಡಿತು. ಈ ಮೊದಲು ಇದೇ ಆವೃತ್ತಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ನೂರು ಸೋಲು ಕಂಡ ಭಾರತದ ಮೊದಲ ತಂಡ ಎನ್ನುವ ಅನಿರೀಕ್ಷಿತ ದಾಖಲೆಗೆ ಪಾತ್ರವಾಗಿತ್ತು.  

150: ಹರ್ಭಜನ್ ಸಿಂಗ್ ಐಪಿಎಲ್ ಟೂರ್ನಿಯಲ್ಲಿ 150 ವಿಕೆಟ್ ಕಬಳಿಸಿದ ಸಾಧನೆ ಮಾಡಿದ್ದಾರೆ. ಶೆರ್ಫಾನೆ ರುದರ್’ಫೋರ್ಡ್ ವಿಕೆಟ್ ಪಡೆಯುವ ಮೂಲಕ ಈ ಸಾಧನೆ ಮಾಡಿದ್ದಾರೆ. ಈ ಮೂಲಕ ಐಪಿಎಲ್ ಟೂರ್ನಿಯಲ್ಲಿ 150+ ವಿಕೆಟ್ ಪಡೆದ ಭಾರತದ ಮೂರನೇ ಹಾಗೂ ಒಟ್ಟಾರೆ 4ನೇ ಬೌಲರ್ ಆಗಿ ಭಜ್ಜಿ ಹೊರಹೊಮ್ಮಿದ್ದಾರೆ.   

click me!