ಕೋಚ್‌ ಹುದ್ದೆಗೆ ಅರ್ಜಿ ಆಹ್ವಾನ: ಟ್ರೋಫಿ ಗೆದ್ದರೆ ಕೋಚ್‌ಗೆ 12 ಲಕ್ಷ ಬೋನಸ್‌!

Published : May 11, 2019, 04:19 PM IST
ಕೋಚ್‌ ಹುದ್ದೆಗೆ ಅರ್ಜಿ ಆಹ್ವಾನ: ಟ್ರೋಫಿ ಗೆದ್ದರೆ ಕೋಚ್‌ಗೆ 12 ಲಕ್ಷ ಬೋನಸ್‌!

ಸಾರಾಂಶ

ಕ್ರಿಕೆಟ್ ಕೋಚ್ ಆಗುವವರಿಗೆ ಗುಡ್ ನ್ಯೂಸ್ ಇದು. ಇದೇ ಮೊದಲ ಬಾರಿಗೆ ಮುಂಬೈ ಕ್ರಿಕೆಟ್‌ ಸಂಸ್ಥೆ(ಎಂಸಿಎ) ಎಲ್ಲಾ ವಯೋಮಿತಿಯ ತಂಡಗಳ ಕೋಚ್‌ಗಳಿಗೆ ಬೋನಸ್‌ ನೀಡುವುದಾಗಿ ಘೋಷಿಸಿದೆ. 

ಮುಂಬೈ(ಮೇ.11): ತಂಡದ ಕಳಪೆ ಪ್ರದರ್ಶನಕ್ಕೆ ಕೋಚ್‌ಗಳನ್ನು ಹೊಣೆ ಮಾಡುವ ಪದ್ಧತಿ ಹಿಂದಿನಿಂದಲೂ ಇದೆ. ಆದರೆ ತಂಡ ಉತ್ತಮ ಪ್ರದರ್ಶನ ತೋರಿದಾಗ ಕೋಚ್‌ಗಳಿಗೆ ಪ್ರಶಂಸೆಯಷ್ಟೇ ಸಿಗಲಿದೆ ಹೊರತು ಬಹುಮಾನ ಸಿಗುವುದು ಅಪರೂಪ. 

ಇದೇ ಮೊದಲ ಬಾರಿಗೆ ಮುಂಬೈ ಕ್ರಿಕೆಟ್‌ ಸಂಸ್ಥೆ(ಎಂಸಿಎ) ಎಲ್ಲಾ ವಯೋಮಿತಿಯ ತಂಡಗಳ ಕೋಚ್‌ಗಳಿಗೆ ಬೋನಸ್‌ ನೀಡುವುದಾಗಿ ಘೋಷಿಸಿದೆ. ರಣಜಿ ಟ್ರೋಫಿಯ ಅತ್ಯಂತ ಯಶಸ್ವಿ ತಂಡ ಮುಂಬೈ, ಮುಂದಿನ ಆವೃತ್ತಿಯಲ್ಲಿ ಪ್ರಶಸ್ತಿ ಜಯಿಸಿದರೆ ಕೋಚ್‌ಗೆ 12 ಲಕ್ಷ ರುಪಾಯಿ ಬೋನಸ್‌ ನೀಡುವುದಾಗಿ ಘೋಷಿಸಿದೆ. ತಂಡ ಒಂದೊಮ್ಮೆ ರನ್ನರ್‌-ಅಪ್‌ ಆದರೆ 6 ಲಕ್ಷ ರುಪಾಯಿ ಬೋನಸ್‌ ಸಿಗಲಿದೆ. ಕೋಚ್‌ ಹುದ್ದೆಗೆ ಹೊಸದಾಗಿ ಅರ್ಜಿ ಆಹ್ವಾನಿಸಿರುವ ಎಂಸಿಎ, ವರ್ಷಕ್ಕೆ 24 ಲಕ್ಷ ರುಪಾಯಿ ವೇತನ ನೀಡುವುದಾಗಿ ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ.

ಅಂಡರ್‌-23 ತಂಡ ಸಿ.ಕೆ.ನಾಯ್ಡು ಟ್ರೋಫಿ ಗೆದ್ದರೆ ಕೋಚ್‌ಗೆ 7.5 ಲಕ್ಷ, ರನ್ನರ್‌-ಅಪ್‌ ಆದರೆ 3.5 ಲಕ್ಷ ಬೋನಸ್‌ ಸಿಗಲಿದೆ. ಕಿರಿಯರ ತಂಡದ ಕೋಚ್‌ಗೆ ವರ್ಷಕ್ಕೆ 15 ಲಕ್ಷ ಸಂಭಾವನೆ ನೀಡುವುದಾಗಿ ಎಂಸಿಎ ಘೋಷಿಸಿದೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

IPL 2027 ಮಿನಿ ಹರಾಜಿಗೆ ಹೆಸರು ನೋಂದಾಯಿಸಿದ ತಂದೆ-ಮಗ..! ದಿಗ್ಗಜ ಕ್ರಿಕೆಟಿಗ, ಮತ್ತವರ ಮಗನ ನಡುವಿನ ವಯಸ್ಸಿನ ಅಂತರ ಇಷ್ಟೊಂದಾ?
IND vs NZ 2nd Test: ನ್ಯೂಜಿಲೆಂಡ್ ವಿರುದ್ಧ ಸರಣಿ ಗೆಲ್ಲಲು ಭಾರತಕ್ಕೆ ಲಾಸ್ಟ್ ಚಾನ್ಸ್; ಕ್ರೈಸ್ಟ್‌ಚರ್ಚ್ ಟೆಸ್ಟ್ ಯಾವಾಗ ಆರಂಭ?