ಅಂ.ರಾ.ಕಬಡ್ಡಿ ಲೀಗ್‌ನ ಲಾಭ ಯೋಧರ ಕುಟುಂಬಕ್ಕೆ!

By Web DeskFirst Published Feb 18, 2019, 9:59 AM IST
Highlights

ಪುಲ್ವಾಮ ಭಯೋತ್ವಾದಕ ದಾಳಿಯಿಂದ ಹುತಾತ್ಮರಾದ ಕುಟುಂಬಕ್ಕೆ ಅಂತಾರಾಷ್ಟ್ರೀಯ ಕಬಡ್ಡಿ ಲೀಗ್ ಫೆಡರೇಶನ್ ನೆರವಿನ ಹಸ್ತ ಚಾಚಿದೆ. ಬಂಡಾಯ ಕಬಡ್ಡಿ ಲೀಗ್‌ನಿಂದ ಬರುವ ಆದಾಯವನ್ನು ಹುತಾತ್ಮ ಯೋಧರ ಕುಟುಂಬಕ್ಕೆ ನೀಡುವುದಾಗಿ ಘೋಷಿಸಿದೆ.

ಬೆಂಗಳೂರು(ಫೆ.18): ಇಂಡೋ-ಇಂಟರ್‌ನ್ಯಾಷನಲ್‌ ಪ್ರೀಮಿಯರ್‌ ಕಬಡ್ಡಿ ಲೀಗ್‌ನ ಉದ್ಘಾಟನಾ ಆವೃತ್ತಿಯಲ್ಲಿ ಗಳಿಸುವ ಲಾಭದ ಶೇ.10ರಷ್ಟನ್ನು ಪುಲ್ವಾಮ ದಾಳಿಯಲ್ಲಿ ಹುತಾತ್ಮರಾದ ವೀರ ಯೋಧರ ಕುಟುಂಬಗಳಿಗೆ ನೀಡುವುದಾಗಿ ನ್ಯೂ ಕಬಡ್ಡಿ ಫೆಡರೇಷನ್‌ ಕಾರ್ಯದರ್ಶಿ ಪ್ರಸಾದ್‌ ಬಾಬು ಘೋಷಿಸಿದ್ದಾರೆ. 

ಇದನ್ನೂ ಓದಿ: ದಾಳಿಯಲ್ಲಿ ಹುತಾತ್ಮರಾದ ಎಲ್ಲಾ ಯೋಧರ ಮಕ್ಕಳಿಗೆ ಸೆಹ್ವಾಗ್ ಉಚಿತ ಶಿಕ್ಷಣ!

ಪುಲ್ವಾಮ ಭಯೋತ್ವಾದಕ ದಾಳಿಯಿಂದ 40ಕ್ಕೂ ಹೆಚ್ಚು CRPF ಯೋಧರು ಹುತಾತ್ಮರಾಗಿದ್ದಾರೆ. ಪಾಕಿಸ್ತಾನ ಮೂಲದ ಜೈಶ್-ಇ-ಮೊಹಮ್ಮದ್ ಭಯೋತ್ವಾದಕ ಸಂಘಟನೆ ನಡೆಸಿದ ಆತ್ಮಾಹುತಿ ದಾಳಿ ಇಡೀ ಭಾರತವನ್ನೇ ಬೆಚ್ಚಿ ಬೀಳಿಸಿದೆ. ಇದೀಗ ಹುತಾತ್ಮ ಯೋಧರ ಕುಟುಂಬಕ್ಕೆ ಬಂಡಾಯ ಕಬಡ್ಡಿ ಫೆಡರೇಶನ್ ಸೇರಿದಂತೆ ಹಲವು ಕ್ರೀಡಾ ಸಂಸ್ಥೆಗಳು ನೆರವು ನೀಡುವುದಾಗಿ ಘೋಷಿಸಿದೆ. 

ಇದನ್ನೂ ಓದಿ: ಪುಲ್ವಾಮ ದಾಳಿ: ಹುತಾತ್ಮರ ಕುಟುಂಬಗಳಿಗೆ ಬಿಸಿಸಿಐ 5 ಕೋಟಿ?

ಬಂಡಾಯ ಕಬಡ್ಡಿ ಫೆಡರೇಷನ್‌ನ ಪಂದ್ಯಾವಳಿ ಈ ವರ್ಷ ಮೇ ತಿಂಗಳಲ್ಲಿ ನಡೆಯಲಿದೆ. ಇತ್ತೀಚೆಗಷ್ಟೇ ಬೆಂಗಳೂರಲ್ಲಿ ಲೀಗ್‌ಗೆ ಅಂತಿಮ ಸುತ್ತಿನ ಆಯ್ಕೆ ಪ್ರಕ್ರಿಯೆ ನಡೆದಿತ್ತು. ಪ್ರೋ ಕಬಡ್ಡಿ ಲೀಗ್ ಟೂರ್ನಿಗೆ ಬಂಡಾಯವಾಗಿ ಇದೀಗ ನ್ಯೂ ಕಬಡ್ಡಿ ಫೆಡರೇಶನ್ ಬಂಡಾಯ ಲೀಗ್ ಆರಂಭಿಸುತ್ತಿದೆ.

click me!