ಆಸ್ಟ್ರೇಲಿಯನ್ ಓಪನ್ ಟೆನಿಸ್‌ನಲ್ಲಿ 10 ಬಾರಿ ಚಾಂಪಿಯನ್ ನೋವಾಕ್ ಜೋಕೋವಿಚ್, ಮೊದಲ ಸುತ್ತಿನಲ್ಲಿ ಭಾರತೀಯ ಮೂಲದ ನಿಶೇಶ್ ಬಸವರೆಡ್ಡಿ ವಿರುದ್ಧ ಸೆಣಸಲಿದ್ದಾರೆ. ಸುಮಿತ್ ನಗಾಲ್ ಮೊದಲ ಸುತ್ತಿನಲ್ಲಿ ಥಾಮಸ್ ಮಚಾಕ್ ವಿರುದ್ಧ ಆಡಲಿದ್ದಾರೆ.
ಮೆಲ್ಬರ್ನ್: 2025ರ ಮೊದಲ ಗ್ರಾನ್‌ಸ್ಲಾಂ ಟೂರ್ನಿಯಾಗಿರುವ ಆಸ್ಟ್ರೇಲಿಯನ್ ಓಪನ್ ಟೆನಿಸ್ ನ ಡ್ರಾ ಬಿಡುಗಡೆಗೊಂಡಿದೆ. 10 ಬಾರಿ ಚಾಂಪಿಯನ್ ನೋವಾಕ್ ಜೋಕೋವಿಚ್ ಪುರುಷರ ಸಿಂಗಲ್ ಮೊದಲ ಸುತ್ತಿನಲ್ಲಿ ಭಾರತೀಯ ಮೂಲಕ ನಿಶೇಶ್ ಬಸವರೆಡ್ಡಿ ವಿರುದ್ದ ಸೆಣಸಾಡಲಿದ್ದಾರೆ.
ಗುರುವಾರ ಆಯೋಜಕರು ಟೂರ್ನಿಯ ಡ್ರಾ ಪ್ರಕಟಿಸಿದರು. ಜೋಕೋವಿಚ್ ಹಾಗೂ ಸಿನ್ನರ್ ಬೇರೆ ಬೇರೆ ವಿಭಾಗಗಳಲ್ಲಿದ್ದು, ಟೂರ್ನಿಯ ಎಲ್ಲಾ ಪಂದ್ಯಗಳಲ್ಲೂ ಗೆದ್ದರೆ ಫೈನಲ್‌ನಲ್ಲಿ ಪರಸ್ಪರ ಎದುರಾಗಲಿದ್ದಾರೆ. ಜೋಕೋ ಹಾಗೂ ಕಾರ್ಲೊಸ್ ಆಲ್ಕರಜ್ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಮುಖಾಮುಖಿಯಾಗುವ ಸಾಧ್ಯತೆಯಿದೆ.
ಚಹಲ್ ಹಾದಿ ಹಿಡಿದ್ರಾ ಕನ್ನಡಿಗ; ಟೀಂ ಇಂಡಿಯಾ ಕ್ರಿಕೆಟಿಗನ ದಾಂಪತ್ಯ ಜೀವನದಲ್ಲಿ ಬಿರುಗಾಳಿ?
ಯಾರಿವರು ನಿಶೇಶ್?
ಜೋಕೋಗೆ ಮೊದಲ ಸುತ್ತಿನಲ್ಲಿ ಸ್ಪರ್ಧೆಯೊಡ್ಡಲಿರುವ 19 ವರ್ಷದ ನಿಶೇಶ್ವರ ಮೂಲ ಭಾರತ, ನಿಶೇಶ್ ಪೋಷಕರು ಹೈದರಾಬಾದ್ ಮತ್ತು ಆಂಧ್ರದ ನೆಲ್ಲೋರ್ ನವರು. 1999ರಲ್ಲಿ ಅವರು ಅಮೆರಿಕಕ್ಕೆ ವಾಸ ಬದಲಾಯಿಸಿದ್ದರು. ನಿಶೇಶ್ 2005ರಲ್ಲಿ ಕ್ಯಾಲಿಫೋರ್ನಿಯಾದಲ್ಲಿ ಜನಿಸಿದ್ದಾರೆ. ಅವರು ಈವರೆಗೂ ಎಟಿಪಿ ಚಾಲೆಂಜರ್ ಟೂರ್ನಿಯಲ್ಲಿ 2 ಬಾರಿ ಚಾಂಪಿಯನ್ ಆಗಿದ್ದು, 5 ಬಾರಿ ರನ್ನರ್-ಅಪ್ ಆಗಿದ್ದಾರೆ.
A battle of the generations ⚔️
Novak Djokovic takes on 19-year-old Nishesh Basavareddy in the first round! pic.twitter.com/6BMHhOAkrC
ಆಸ್ಟ್ರೇಲಿಯನ್ ಓಪನ್: ಮೊದಲ ಸುತ್ತಿನಲ್ಲಿ ನಗಾಲ್ vs ಮಚಾಕ್
ಮೆಲ್ಬರ್ನ್: ಭಾರತದ ಅಗ್ರ ಟೆನಿಸಿಗ ಸುಮಿತ್ ನಗಾಲ್ ಆಸ್ಟ್ರೇಲಿಯನ್ ಓಪನ್ ಗ್ಯಾನ್‌ಸ್ಲಾಂನ ಮೊದಲ ಸುತ್ತಿನ ಪಂದ್ಯದಲ್ಲಿ ವಿಶ್ವ ನಂ.26, ಚೆಕ್ ಗಣರಾಜ್ಯದ ಥಾಮಸ್ ಮಚಾಕ್ ವಿರುದ್ಧ ಸೆಣಸಾಡಲಿದ್ದಾರೆ. 27 ವರ್ಷದ ನಗಾಲ್ ಸದ್ಯ ವಿಶ್ವ ರ್‍ಯಾಂಕಿಂಗ್‌ನಲ್ಲಿ 96ನೇ ಸ್ಥಾನದಲ್ಲಿದ್ದಾರೆ. ಕಳೆದ ಬಾರಿ ಟೂರ್ನಿಯಲ್ಲಿ ನಗಾಲ್ ಅವರು ಮೊದಲ ಸುತ್ತಿನಲ್ಲಿ ವಿಶ್ವ ನಂ.31 ಅಲೆಕ್ಸಾಂಡರ್ ಬಬ್ಲಿಕ್ ವಿರುದ್ದ ಗೆದ್ದಿದ್ದರು. 2ನೇ ಸುತ್ತಿನಲ್ಲಿ ಚೀನಾದ ಜುನ್‌ಚೆಂಗ್ ಶಾಂಗ್ ವಿರುದ್ಧ ಸೋತಿದ್ದರು.