ಟೆನಿಸ್ ತಾರೆ ಕರ್ಮನ್ ಕೈಹಿಡಿದ ಹಾಕಿ ಆಟಗಾರ ಗುರ್ಜಂತ್ ಸಿಂಗ್

Published : Nov 18, 2023, 05:19 PM IST
ಟೆನಿಸ್ ತಾರೆ ಕರ್ಮನ್ ಕೈಹಿಡಿದ ಹಾಕಿ ಆಟಗಾರ ಗುರ್ಜಂತ್ ಸಿಂಗ್

ಸಾರಾಂಶ

ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದ ಇಬ್ಬರು ತಮ್ಮ ಕುಟುಂಬ, ಸ್ನೇಹಿತರ ಸಮ್ಮುಖದಲ್ಲಿ ದಾಂಪತ್ಯಕ್ಕೆ ಕಾಲಿರಿಸಿದರು. ಸಾಮಾಜಿಕ ತಾಣಗಳಲ್ಲಿ ಹಲವು ಕ್ರೀಡಾಪಟುಗಳು, ಅಭಿಮಾನಿಗಳು ನವದಂಪತಿಗೆ ಶುಭ ಹಾರೈಸಿದ್ದಾರೆ.

ನವದೆಹಲಿ: ಭಾರತ ಹಾಕಿ ತಂಡದ ಆಟಗಾರ, ಒಲಿಂಪಿಕ್ ಪದಕ ವಿಜೇತ ಗುರ್ಜಂತ್ ಸಿಂಗ್ ಶುಕ್ರವಾರ ಭಾರತದ ತಾರಾ ಟೆನಿಸ್ ಆಟಗಾರ್ತಿ ಕರ್ಮನ್ ಕೌರ್ ಥಂಡಿ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದ ಇಬ್ಬರು ತಮ್ಮ ಕುಟುಂಬ, ಸ್ನೇಹಿತರ ಸಮ್ಮುಖದಲ್ಲಿ ದಾಂಪತ್ಯಕ್ಕೆ ಕಾಲಿರಿಸಿದರು. ಸಾಮಾಜಿಕ ತಾಣಗಳಲ್ಲಿ ಹಲವು ಕ್ರೀಡಾಪಟುಗಳು, ಅಭಿಮಾನಿಗಳು ನವದಂಪತಿಗೆ ಶುಭ ಹಾರೈಸಿದ್ದಾರೆ.

ಫುಟ್ಬಾಲ್‌: ಭಾರತಕ್ಕೆ 1-0 ಗೆಲುವು!

ಕುವೈತ್‌ ಸಿಟಿ: ಮನ್ವೀರ್‌ ಸಿಂಗ್‌ 75ನೇ ನಿಮಿಷದಲ್ಲಿ ಬಾರಿಸಿದ ಆಕರ್ಷಕ ಗೋಲು, 2026ರ ಫಿಫಾ ಫುಟ್ಬಾಲ್‌ ವಿಶ್ವಕಪ್‌ನ ಅರ್ಹತಾ ಸುತ್ತಿನ 2ನೇ ಹಂತದಲ್ಲಿ ಭಾರತ ಶುಭಾರಂಭ ಮಾಡಲು ನೆರವಾಯಿತು. ಗುರುವಾರ ರಾತ್ರಿ ಇಲ್ಲಿ ನಡೆದ ಪಂದ್ಯದಲ್ಲಿ ಭಾರತ ಕುವೈತ್‌ ವಿರುದ್ಧ 1-0 ಗೋಲಿನ ಗೆಲುವು ಸಾಧಿಸಿ 3 ಅಂಕ ಸಂಪಾದಿಸಿತು.

World Cup final: ಅಹಮದಾಬಾದ್‌ನಲ್ಲಿ ಒಂದು ದಿನದ ಹೋಟೆಲ್‌ ರೂಂಗೆ ₹2 ಲಕ್ಷ..!

ಭಾರೀ ರೋಚಕತೆಯಿಂದ ಕೂಡಿದ್ದ ಪಂದ್ಯದ ಮೊದಲಾರ್ಧ ಗೋಲು ರಹಿತ ಮುಕ್ತಾಯಗೊಂಡ ಬಳಿಕ ದ್ವಿತೀಯಾರ್ಧದಲ್ಲಿ ಭಾರತ ಹೆಚ್ಚು ಆಕ್ರಮಣಕಾರಿ ಆಟವಾಡಿತು. ಇದರ ಫಲವಾಗಿ 75ನೇ ನಿಮಿಷದಲ್ಲಿ ಲಾಲಿಯಾನ್ಜುವಾಲ ಚಾಂಗ್ಟೆ ನೀಡಿದ ಪಾಸನ್ನು ಗೋಲಾಗಿ ಪರಿವರ್ತಿಸಿದ ಮನ್ವೀರ್‌ ಭಾರತಕ್ಕೆ ಮುನ್ನಡೆ ಒದಗಿಸಿದರು.

ಭಾರತ ತನ್ನ 2ನೇ ಪಂದ್ಯವನ್ನು ನ.21ರಂದು ಏಷ್ಯನ್‌ ಚಾಂಪಿಯನ್‌ ಕತಾರ್‌ ವಿರುದ್ಧ ಭುವನೇಶ್ವರದಲ್ಲಿ ಆಡಲಿದೆ. ಭಾರತ ತಂಡ ‘ಎ’ ಗುಂಪಿನಲ್ಲಿ ಕತಾರ್‌, ಕುವೈತ್‌ ಹಾಗೂ ಅಫ್ಘಾನಿಸ್ತಾನದ ಜೊತೆ ಸ್ಥಾನ ಪಡೆದಿದ್ದು, ಗುಂಪಿನಲ್ಲಿ ಅಗ್ರ 2 ಸ್ಥಾನ ಪಡೆಯುವ ತಂಡಗಳು ಫಿಫಾ ವಿಶ್ವಕಪ್‌ ಅರ್ಹತಾ ಸುತ್ತಿನ 3ನೇ ಹಂತಕ್ಕೆ ಪ್ರವೇಶಿಸಲಿವೆ. ಜೊತೆಗೆ ಅಗ್ರ-2 ತಂಡಗಳಿಗೆ 2027ರ ಎಎಫ್‌ಸಿ ಏಷ್ಯನ್‌ ಕಪ್‌ಗೂ ಅರ್ಹತೆ ಸಿಗಲಿದೆ.

ವಿರಾಟ್ ಕೊಹ್ಲಿ ಬೇರೆ ಗ್ರಹದಿಂದ ಬಂದಿದ್ದಾರೆ: ಸರ್ ವಿವಿಯನ್‌ ರಿಚರ್ಡ್ಸ್‌

ಜೂ. ಹಾಕಿ ವಿಶ್ವಕಪ್‌ ತಂಡದಲ್ಲಿ ಕರ್ನಾಟಕದ ಮೋಹಿತ್‌, ಪೂವಣ್ಣ

ನವದೆಹಲಿ: ಡಿ.5ರಿಂದ 16ರ ವರೆಗೆ ಮಲೇಷ್ಯಾದಲ್ಲಿ ನಡೆಯಲಿರುವ ಎಫ್‌ಐಎಚ್‌ ಪುರುಷರ ಹಾಕಿ ವಿಶ್ವಕಪ್‌ಗೆ ಭಾರತ ತಂಡ ಪ್ರಕಟಗೊಂಡಿದ್ದು, ಕರ್ನಾಟಕದ ಇಬ್ಬರು ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಗೋಲ್‌ಕೀಪರ್‌ ಮೋಹಿತ್‌ ಎಚ್‌.ಎಸ್‌ ಹಾಗೂ ಪೂವಣ್ಣ ಸಿ.ಬಿ. ತಂಡದಲ್ಲಿದ್ದಾರೆ. ಉತ್ತಮ್‌ ಸಿಂಗ್‌ ನಾಯಕತ್ವದ ಭಾರತ ‘ಸಿ’ ಗುಂಪಿನಲ್ಲಿದ್ದು, ಡಿ.5ರಂದು ಮೊದಲ ಪಂದ್ಯದಲ್ಲಿ ಕೊರಿಯಾ ವಿರುದ್ಧ ಆಡಲಿದೆ. ಬಳಿಕ ಡಿ.7ಕ್ಕೆ ಸ್ಪೇನ್‌ ಹಾಗೂ ಡಿ.9ಕ್ಕೆ ಕೆನಡಾ ವಿರುದ್ಧ ಸೆಣಸಾಡಲಿದೆ. 2 ಬಾರಿ ಚಾಂಪಿಯನ್‌ ಭಾರತ ಕಳೆದ ಆವೃತ್ತಿಯಲ್ಲಿ 4ನೇ ಸ್ಥಾನಿಯಾಗಿತ್ತು.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಕೆಲವೇ ದಿನದಲ್ಲಿ ಸ್ಮೃತಿ ಮಂಧನಾ ಮದುವೆ ಆಘಾತದಿಂದ ಹೊರಬಂದಿದ್ದೇಗೆ? 3 ವರ್ಷ ಹಿಂದೆ ಹೇಳಿದ್ದ ಟಿಪ್ಸ್
ದಕ್ಷಿಣ ಆಫ್ರಿಕಾ ಎದುರಿನ ಮೊದಲ ಟಿ20 ಪಂದ್ಯಕ್ಕೂ ಮೊದಲು ಗೊಂದಲಕ್ಕೆ ಸಿಲುಕಿದ ಗೌತಮ್ ಗಂಭೀರ್!