ಇಂಡಿಯನ್‌ ಕ್ರಿಕೆಟ್‌ ಫ್ಯಾನ್ಸ್‌ಗೇ ಕೈ ತೋರಿಸಿ ಬೈದ್ರಾ ರೋಹಿತ್‌ ಶರ್ಮಾ! ವೈರಲ್‌ ಆಯ್ತು ವಿರಿಯೋ

Published : Nov 18, 2023, 04:19 PM ISTUpdated : Nov 18, 2023, 05:52 PM IST
ಇಂಡಿಯನ್‌ ಕ್ರಿಕೆಟ್‌ ಫ್ಯಾನ್ಸ್‌ಗೇ ಕೈ ತೋರಿಸಿ ಬೈದ್ರಾ ರೋಹಿತ್‌ ಶರ್ಮಾ! ವೈರಲ್‌ ಆಯ್ತು ವಿರಿಯೋ

ಸಾರಾಂಶ

ಬಸ್‌ನಲ್ಲಿ ಟೀ ಇಂಡಿಯಾ ಸದಸ್ಯರು ಹೋಗುವಾಗ ನಾಯಕ ರೋಹಿತ್‌ ಶರ್ಮಾ ಅಭಿಮಾನಿಗಳಿಗೆ ಕೈ ತೋರಿಸಿ ಹೇಳಿದ್ದೇನು ಎಂಬುದರ ಚರ್ಚೆ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ.

ಬೆಂಗಳೂರು (ನ.18): ಇಡೀ ದೇಶದ್ಯಂತ ವಿಶ್ವಕಪ್‌ ಕ್ರಿಕೆಟ್‌ 2023ರ ಫೈನಲ್‌ ಪಂದ್ಯದ್ದೇ ಸದ್ದು ಕೇಳಿಬರುತ್ತದೆ. ಅದಕ್ಕೂ ಮುನ್ನ ಬಸ್‌ನಲ್ಲಿ ಟೀ ಇಂಡಿಯಾ ಸದಸ್ಯರು ಹೋಗುವಾಗ ನಾಯಕ ರೋಹಿತ್‌ ಶರ್ಮಾ ಅಭಿಮಾನಿಗಳಿಗೆ ಕೈ ತೋರಿಸಿ ಹೇಳಿದ್ದೇನು ಎಂಬುದರ ಚರ್ಚೆ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ.

ಗುರುವಾರ ಕೋಲ್ಕತಾದಲ್ಲಿ ದ.ಆಫ್ರಿಕಾ ವಿರುದ್ಧ ಸೆಮಿಫೈನಲ್‌ ಪಂದ್ಯವಾಡಿದ ಆಸ್ಟ್ರೇಲಿಯಾ ಆಟಗಾರರು ಶುಕ್ರವಾರ ಮಧ್ಯಾಹ್ನ ಅಹಮದಾಬಾದ್‌ ತಲುಪಿದ್ದು, ಶನಿವಾರ ಬೆಳಗ್ಗೆ ನೆಟ್ಸ್‌ ಅಭ್ಯಾಸದಲ್ಲಿ ತೊಡಗಿಸಿಕೊಳ್ಳಲಿದ್ದಾರೆ. ಆದರೆ, ಹೀಗೆ ಬಸ್‌ನಲ್ಲಿ ಅಭ್ಯಾಸಕ್ಕೆ ಹೊರಡುವ ವೇಳೆ ಅಭಿಮಾನಿಗಳು ಬಸ್‌ ಬದಿ ನಿಂತು ತಮ್ಮ ಕ್ರಿಕೆಟ್‌ ತಾರೆಗಳನ್ನು ಕಣ್ತುಂಬಿಕೊಳ್ಳುತ್ತಿದ್ದರು. ಬಸ್‌ನ ಮುಂಬದಿ ಸೀಟಿನಲ್ಲಿ ಕುಳಿತ ವಿರಾಟ್‌ ಕೊಹ್ಲಿ ಮೊಬೈಲ್‌ ನೋಡುತ್ತಾ ಕುಳಿತಿದ್ದರು. ಅಭಿಮಾನಿಗಳು ಕೈ ಮಾಡಿದರೂ ಯಾವುದೇ ಪ್ರತಿಕ್ರಿಯೆ ತೋರುತ್ತಿರಲಿಲ್ಲ. ಆದರೆ, ಅದರ ಹಿಂಬದಿ ಸೀಟಿನಲ್ಲಿ ಕುಳಿತಿದ್ದ ಶ್ರೇಯರ್‌ ಅಯ್ಯರ್‌ ಪಕ್ಕದಲ್ಲಿ ಕುಳಿತಿದ್ದ ಭಾರತೀಯ ಕ್ರಿಕೆಟ್‌ ತಂಡದ ನಾಯಕ ರೋಹಿತ್‌ ಶರ್ಮಾ ಅವರು ಕೆಳಗೆ ನಿಂತಿದ್ದ ಅಭಿಮಾನಿಗಳ ಕಡೆಗೆ ಕೈ ತೋರಿಸಿ ಏನನ್ನೋ ಬೈಯುವಂತೆ ಮಾತನಾಡಿದ್ದಾರೆ.

ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯೋ ಭಾರತೀಯ ಕ್ರಿಕೆಟಿಗ; ಕೊಹ್ಲಿನಾ, ರೋಹಿತ್ ಶರ್ಮಾನ?

ಟೀಂ ಇಂಡಿಯಾ ಕ್ಯಾಪ್ಟನ್‌ ರೋಹಿತ್‌ ಶರ್ಮಾ ಮಾತಿನ ಶೈಲಿಯನ್ನು ನೋಡಿದ ಶ್ರೇಯಸ್‌ ಅಯ್ಯರ್‌ ನಗಾಡಿದ್ದಾರೆ. ಆದರೆ, ಅಭಿಮಾನಿಗಳಿಗೆ ಈ ಬಗ್ಗೆ ಏನು ಕೇಳಿಸಿದೆಯೋ ಅಥವಾ ಇಲ್ಲವೋ ಗೊತ್ತಿಲ್ಲ. ಆದ್ರೆ, ಈಗ ರೋಹಿತ್‌ ಶರ್ಮಾ ಕೈ ತೋರಿಸಿ ಮಾತನಾಡಿದ ವಿಡಿಯೋ ವೈರಲ್‌ ಆಗುತ್ತಿದೆ. ಇಲ್ಲಿ ರೋಹಿತ್‌ ಶರ್ಮಾ ಏನು ಮಾತನಾಡಿದ್ದಾರೆ ಎಂಬುದೇ ತಿಳಿಯುತ್ತಿಲ್ಲ. ಇನ್ನು ಕೈಸನ್ನೆ ತೋರಿಸಿ ಮಾತನಾಡುವಾಗ ಬೈಯುವಂತೆ ಭಾಸವಾಗುತ್ತಿದೆ ಎಂದು ಕೆಲವರು ಹೇಳುತ್ತಿದ್ದಾರೆ. ಆದರೆ, ಅವರೊಬ್ಬ ಜೆಂಟಲ್‌ ಮ್ಯಾನ್‌ ಹಾಗೆಲ್ಲ ಅಭಿಮಾನಿಗಳಿಗೆ ಬೈಯೋದಿಲ್ಲ ಎಂದು ವೈರಲ್‌ ಆಗಿರುವ ವಿಡಿಯೋಗೆ ಕಮೆಂಟ್‌ ಮಾಡಿದ್ದಾರೆ. 

ನಿಮಗೇನಾದ್ರೂ ಲಿಪ್‌ ರೀಡಿಂಗ್‌ ಬಂದ್ರೆ ಕಮೆಂಟ್‌ ಮಾಡಿ: 
ವೈರಲ್‌ ಆಗಿರುವ ವಿಡಿಯೋದಲ್ಲಿ ಬಸ್‌ನಲ್ಲಿದ್ದ ರೋಹಿತ್‌ ಶರ್ಮಾ ಅಭಿಮಾನಿಗಳ ಕಡೆಗೆ ತಿರುಗಿ ಏನು ಮಾತನಾಡಿದ್ದಾರೆ ಎಂಬ ಬಗ್ಗೆ ಭಾರಿ ಚರ್ಚೆ ನಡೆಯುತ್ತಿದೆ. ಒಂದು ವೇಳೆ ಯಾರಿಗಾರದರೂ ಲಿಪ್‌ ರೀಡಿಂಗ್‌ ಬಂದರೆ ರೋಹಿತ್‌ ಏನು ಮಾತನಾಡಿದ್ದಾರೆಂದು ಗುರುತಿಸಿ ಅದನ್ನು ಕಮೆಂಟ್‌ ಮಾಡಿ. ಇದರಿಂದ ಸಾಕಷ್ಟು ಜನರಿಗೆ ಇರುವ ಕುತೂಹಲಕ್ಕೆ ನೀವು ತೆರೆ ಎಳೆಯಿರಿ.

ಇನ್ನು ಗುರುವಾರ ರಾತ್ರಿ ನಗರಕ್ಕೆ ಆಗಮಿಸಿದ ರೋಹಿತ್‌ ಶರ್ಮಾ ಬಳಗ ಶುಕ್ರವಾರ ಬೆಳಗ್ಗೆ ಮೈದಾನಕ್ಕಿಳಿಯಿತು. ರೋಹಿತ್‌ ಅವರು ಕೋಚ್‌ ರಾಹುಲ್‌ ದ್ರಾವಿಡ್‌ ಹಾಗೂ ಇತರ ಸಹಾಯಕ ಸಿಬ್ಬಂದಿ ಜೊತೆ ಪಿಚ್‌, ಔಟ್‌ಫೀಲ್ಡ್‌ ಪರಿಶೀಲಿಸಿದರು. ಶನಿವಾರ ಭಾರತ ಕೊನೆಯ ಸುತ್ತಿನ ಅಭ್ಯಾಸ ನಡೆಸಲಿದೆ. ಐಸಿಸಿ ಏಕದಿನ ವಿಶ್ವಕಪ್‌ ಫೈನಲ್‌ ಹಣಾಹಣಿಗೆ ವೇದಿಕೆ ಸಿದ್ಧವಾಗಿದ್ದು, ಜಿದ್ದಾಜಿದ್ದಿನ ಪ್ರಶಸ್ತಿ ಫೈಟ್‌ಗೆ ಬದ್ಧವೈರಿಗಳಾದ ಭಾರತ ಹಾಗೂ ಆಸ್ಟ್ರೇಲಿಯಾ ಆಟಗಾರರು ಸಜ್ಜಾಗುತ್ತಿದ್ದಾರೆ. ಫೈನಲ್‌ ಪಂದ್ಯಕ್ಕೆ ಇಲ್ಲಿನ ನರೇಂದ್ರ ಮೋದಿ ಕ್ರೀಡಾಂಗಣ ಸಾಕ್ಷಿಯಾಗಲಿದೆ. 

World Cup 2023 Final: ಬರೀ 10 ಸೆಕೆಂಡ್‌ನ ಜಾಹೀರಾತಿಗೆ ಅಬ್ಬಬ್ಬಾ ಇಷ್ಟೊಂದು ಹಣ!

2003 vs 2023 ವಿಶ್ವಕಪ್‌ ಫೈನಲ್‌ ಮಂಡ್ಯಗಳಿಗೆ ಹಲವು ಸಾಮ್ಯತೆ!
ಭಾರತ ಹಾಗೂ ಆಸ್ಟ್ರೇಲಿಯಾ ವಿಶ್ವಕಪ್‌ ಫೈನಲ್‌ನಲ್ಲಿ ಬರೋಬ್ಬರಿ 20 ವರ್ಷಗಳ ಬಳಿಕ ಮುಖಾಮುಖಿಯಾಗುತ್ತಿವೆ. ಈ ಎರಡೂ ಫೈನಲ್‌ಗೆ ಕೆಲ ಸಾಮ್ಯತೆಗಳೂ ಇವೆ. 2003ರ ಟೂರ್ನಿಯಲ್ಲಿ ಆಸ್ಟ್ರೇಲಿಯಾ ಸತತ 10 ಪಂದ್ಯ ಗೆದ್ದು ಫೈನಲ್‌ಗೇರಿತ್ತು. ಭಾರತ 8 ಪಂದ್ಯ ಗೆದ್ದು ಪ್ರಶಸ್ತಿ ಸುತ್ತು ಪ್ರವೇಶಿಸಿತ್ತು. ಈ ವಿಶ್ವಕಪ್‌ನಲ್ಲಿ ಭಾರತ ಸತತ 10 ಗೆಲುವುಗಳೊಂದಿಗೆ ಫೈನಲ್‌ಗೇರಿದೆ. ಆಸ್ಟ್ರೇಲಿಯಾ ಸತತ 8 ಜಯ ಸಾಧಿಸಿ ಟ್ರೋಫಿ ಕದನಕ್ಕೆ ಕಾಲಿಟ್ಟಿದೆ. ಇನ್ನೊಂದು ವಿಶೇಷವೇನೆಂದರೆ, 2003ರಲ್ಲಿ ಗೆದ್ದ ಟ್ರೋಫಿ ಆಸ್ಟ್ರೇಲಿಯಾ ಪಾಲಿಗೆ 3ನೇ ವಿಶ್ವಕಪ್‌ ಗೆಲುವು ಆಗಿತ್ತು. ಈ ಬಾರಿ ಭಾರತವೂ 3ನೇ ಟ್ರೋಫಿ ಮೇಲೆ ಕಣ್ಣಿಟ್ಟಿದೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಜೈಸ್ವಾಲ್‌ ಸಖತ್‌ ಸೆಂಚುರಿ, ಟೆಸ್ಟ್‌ ಸರಣಿ ಸೋಲಿಗೆ ಏಕದಿನದಲ್ಲಿ ಸೇಡು ತೀರಿಸಿಕೊಂಡ ಭಾರತ!
ಫೋಟೋ ಹಂಚಿಕೊಂಡು 'ಡಾರ್ಲಿಂಗ್‌..' ಎಂದು ಬರೆದ ಸಾರಾ ತೆಂಡುಲ್ಕರ್‌