ವಿಶ್ವಕಪ್ ಫೈನಲ್ ಪಂದ್ಯಕ್ಕೂ ಮುನ್ನ ಮೊಹಮ್ಮದ್ ಶಮಿಗೆ ಭರ್ಜರಿ ಗಿಫ್ಟ್ ಘೋಷಿಸಿದ ಯುಪಿ ಸರ್ಕಾರ!

By Suvarna News  |  First Published Nov 18, 2023, 4:29 PM IST

ಭಾರತ-ಆಸ್ಟ್ರೇಲಿಯಾ ವಿಶ್ವಕಪ್ ಫೈನಲ್ ಪಂದ್ಯಕ್ಕೆ ಕೌಂಟ್‌ಡೌನ್ ಶುರುವಾಗಿದೆ. ಟೂರ್ನಿಯುದ್ಧಕ್ಕೂ ಅದ್ಭುತ ಬೌಲಿಂಗ್ ದಾಳಿ ಸಂಘಟಿಸಿದ ಮೊಹಮ್ಮದ್ ಶಮಿಗೆ ಇದೀಗ ಯುಪಿ ಸರ್ಕಾರ ಭರ್ಜರಿ ಗಿಫ್ಟ್ ಘೋಷಿಸಿದೆ.


ಲಖನೌ(ನ.18)  ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಐಸಿಸಿ ವಿಶ್ವಕಪ್ ಫೈನಲ್ ಪಂದ್ಯಕ್ಕೆ ಸಕಲ ಸಿದ್ಧತೆ ನಡೆದಿದೆ. ಭಾರತ 3ನೇ ವಿಶ್ವಕಪ್ ಟ್ರೋಫಿ ಗೆಲುವಿಗೆ ಹೊಂಚು ಹಾಕಿದೆ. ಭಾರತ ತಂಡ ಸುಲಭವಾಗಿ ಫೈನಲ್ ತಲುಪುವಲ್ಲಿ ವೇಗಿ ಮೊಹಮ್ಮದ್ ಶಮಿ ಕೂಡುಗೆ ಅಪಾರ. ಸೆಮಿಫೈನಲ್ ಪಂದ್ಯದಲ್ಲಿ 7 ವಿಕೆಟ್ ಕಬಳಿಸಿ ದಾಖಲೆ ಬರೆದಿದ್ದರು. ವಿಶ್ವಕಪ್ ಫೈನಲ್ ಪಂದ್ಯಕ್ಕೂ ಮುನ್ನ ಉತ್ತರ ಪ್ರದೇಶ ಸರ್ಕಾರ ಮೊಹಮ್ಮದ್ ಶಮಿಗೆ ಭರ್ಜರಿ ಗಿಫ್ಟ್ ಘೋಷಿಸಿದೆ. ಶಮಿ ಗ್ರಾಮ ಸಹಸಪುರ ಅಲಿನಗರದಲ್ಲಿ ಕ್ರೀಡಾಂಗಣ ಹಾಗೂ ಸಾರ್ವಜನಿಕ ಜಿಮ್ ತೆರೆಯುವುದಾಗಿ ಘೋಷಣೆ ಮಾಡಲಾಗಿದೆ.

ವಿಶ್ವಕಪ್ ಟೂರ್ನಿಯಲ್ಲಿ ಅದ್ಭುತ ಪ್ರದರ್ಶನ ನೀಡಿ ಯುವ ಕ್ರಿಕೆಟಿಗರಿಗೆ ಪ್ರೇರಣೆಯಾಗಿರುವ ಮೊಹಮ್ಮದ್ ಶಮಿಗೆ ಅಮ್ರೋಹ ಜಿಲ್ಲೆಯ ಸಹಸಪುರ ಅಲಿನಗರ ಗ್ರಾಮದಲ್ಲಿ ಸಣ್ಣ ಕ್ರೀಡಾಂಗಣ ನಿರ್ಮಾಣ ಮಾಡಲು ಅನುಮೋದನೆ ಸಿಕ್ಕಿದೆ. ಕ್ರೀಡಾಂಗಣದ ಜೊತೆಗೆ ಸಾರ್ವಜನಿಕ ಜಿಮ್ ತೆರೆಯಲಾಗುತ್ತದೆ ಎಂದು ಜಿಲ್ಲಾಧಿಕಾರಿ ರಾಜೇಶ್ ತ್ಯಾಗಿ ಹೇಳಿದ್ದಾರೆ.

Latest Videos

undefined

ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯೋ ಭಾರತೀಯ ಕ್ರಿಕೆಟಿಗ; ಕೊಹ್ಲಿನಾ, ರೋಹಿತ್ ಶರ್ಮಾನ?

ಸಹಸಪುರ ಅಲಿನಗರ ಗ್ರಾಮದ ಯುವಕರು, ಯುವ ಕ್ರಿಕೆಟಿಗರಿಗೆ ಮೊಹಮ್ಮದ್ ಶಮಿ ಪ್ರೇರಣೆಯಾಗಿದ್ದಾರೆ. ಈ ಗ್ರಾಮದಲ್ಲಿ ಕ್ರೀಡಾಂಗಣದಲ್ಲಿ ನಿರ್ಮಾಣ ಮಾಡುವುದರಿಂದ ಹೆಚ್ಚಿನ ಯುವ ಸಮೂಹ ಕ್ರೀಡೆಯಲ್ಲಿ ತೊಡಿಗಿಸಿಕೊಳ್ಳಲು ಸಾಧ್ಯವಿದೆ ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ. ಮತ್ತೊಂದು ವಿಶೇಷ ಅಂದರೆ ಶಮಿ ಗ್ರಾಮದಲ್ಲಿ ಕ್ರೀಡಾಂಗಣ ಹಾಗೂ ಜಿಮ್ ತೆರೆಯಲು ಇದೇ ಕ್ಷೇತ್ರದ ಸಂಸದ, ಆರ್‌ಎಲ್‌ಡಿ ಪಕ್ಷದ ನಾಯಕ ಜಯಂತ್ ಸಿಂಗ್ ತಮ್ಮ ಸಂಸದರ ನಿಧಿ ನೀಡುವುದಾಗಿ ಘೋಷಿಸಿದ್ದಾರೆ. 

ನನ್ನ ಸಂಸದರ ನಿಧಿ(MPLAD) ಹಣವನ್ನು ಮೊಹಮ್ಮದ್ ಶಮಿ ಗ್ರಾಮದಲ್ಲಿ ನಿರ್ಮಿಸುವ ಕ್ರೀಡಾಂಗಣ, ಜಿಮ್ ಸೇರಿದಂತೆ ಕ್ರೀಡಾ ಕೇಂದ್ರ ನಿರ್ಮಾಣಕ್ಕೆ ನೀಡಲು ಸಂತೋಷವಾಗುತ್ತಿದೆ ಎಂದು ಜಯಂತ್ ಸಿಂಗ್ ಟ್ವೀಟ್ ಮೂಲಕ ಸಂತಸ ಹಂಚಿಕೊಂಡಿದ್ದಾರೆ.

ಸೆಮೀಸ್‌ನಲ್ಲಿ ಶಮಿಗೆ 7 ವಿಕೆಟ್..! ವಿಶ್ವಕಪ್ ಪಂದ್ಯಕ್ಕೂ ಒಂದು ದಿನ ಮೊದಲೇ ಕನಸು ಕಂಡ ನೆಟ್ಟಿಗ..!

ಮೊಹಮ್ಮದ್ ಶಮಿ ಈ ಬಾರಿಯ ಐಸಿಸಿ ವಿಶ್ವಕಪ್ ಟೂರ್ನಿಯಲ್ಲಿ 23 ವಿಕೆಟ್ ಕಬಳಿಸಿದ್ದಾರೆ. ಭಾರತದ ಒಂದು ವಿಶ್ವಕಪ್ ಟೂರ್ನಿಯಲ್ಲಿ ಬೌಲರ್ ಗಳಿಸಿದ ಅತ್ಯಂತ ಗರಿಷ್ಠ ವಿಕೆಟ್ ಇದಾಗಿದೆ. ಇನ್ನು ಅತೀ ವೇಗದಲ್ಲಿ ವಿಶ್ವಕಪ್ ಟೂರ್ನಿಯಲ್ಲಿ 50 ವಿಕೆಟ್ ಸಾಧನೆ ಮಾಡಿದ ವಿಶ್ವದ ಮೊದಲ ಕ್ರಿಕೆಟಿಗ  ಅನ್ನೋ ದಾಖಲೆಯನ್ನು ಶಮಿ ಬರೆದಿದ್ದಾರೆ. ಶಮಿ 17 ಇನ್ನಿಂಗ್ಸ್‌ನಲ್ಲಿ 50 ವಿಕೆಟ್ ಸಾಧನೆ ಮಾಡಿದ್ದಾರೆ.

ನವೆಂಬರ್ 19ರ ಭಾನುವಾರ ಭಾರತ ಹಾಗೂ ಆಸ್ಟ್ರೇಲಿಯಾ ಫೈನಲ್ ಪಂದ್ಯ ಆಡಲಿದೆ. ಅಹಮ್ಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಈ ಪಂದ್ಯ ನಡೆಯಲಿದೆ.
 

click me!