ಡೈಮಂಡ್ ಲೀಗ್ ಫೈನಲ್ಸ್‌: ಕೇವಲ 1 ಸೆಂಟಿಮೀಟರ್ ಅಂತರದಲ್ಲಿ ನೀರಜ್ ಜೋಪ್ರಾ ಕೈ ತಪ್ಪಿದ ಚಾಂಪಿಯನ್ ಪಟ್ಟ

By Kannadaprabha News  |  First Published Sep 15, 2024, 9:59 AM IST

ಪ್ಯಾರಿಸ್ ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತ ನೀರಜ್ ಚೋಪ್ರಾ 2024ರ ಡೈಮಂಡ್ ಲೀಗ್ ಫೈನಲ್ಸ್‌ನಲ್ಲೂ 2ನೇ ಸ್ಥಾನಕ್ಕೆ ತೃಪ್ತಿಪಟ್ಟಿದ್ದಾರೆ. ಕೇವಲ 1 ಸೆಂಟಿಮೀಟರ್ ಅಂತರದಲ್ಲಿ ನೀರಜ್‌ಗೆ ಡೈಮಂಡ್ ಲೀಗ್ ಚಾಂಪಿಯನ್ ಪಟ್ಟ ಕೈತಪ್ಪಿದೆ


ಚೆನ್ನೈ: ಇತ್ತೀಚೆಗೆ ನಡೆದ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಪಡೆದಿದ್ದ ಭಾರತದ ತಾರಾ ಅಥ್ಲೀಟ್ ನೀರಜ್ ಚೋಪ್ರಾ, 2024ರ ಡೈಮಂಡ್ ಲೀಗ್ ಫೈನಲ್ಸ್‌ನಲ್ಲೂ 2ನೇ ಸ್ಥಾನಕ್ಕೆ ತೃಪ್ತಿಪಟ್ಟಿದ್ದಾರೆ. ಶನಿವಾರ ಮಧ್ಯರಾತ್ರಿ ನಡೆದ ಸ್ಪರ್ಧೆ ಯಲ್ಲಿ ನೀರಜ್, 87.86 ಮೀ. ದೂರಕ್ಕೆ ಜಾವೆಲಿನ್ ಎಸೆದು 2ನೇ ಸ್ಥಾನ ಪಡೆದರು. ಕೇವಲ 1 ಸೆಂ.ಮೀ. ಅಂತರದಲ್ಲಿ ನೀರಜ್‌ಗೆ ಚಾಂಪಿಯನ್‌ಶಿಪ್ ಕೈತಪ್ಪಿತು. 

ಪ್ಯಾರಿಸ್ ಗೇಮ್ಸ್‌ನಲ್ಲಿ ಕಂಚಿನ ಪದಕ ಗೆದ್ದಿದ್ದ ಮಾಜಿ ವಿಶ್ವ ಚಾಂಪಿಯನ್ ಗ್ರೆನಡಾದ ಆ್ಯಂಡರ್‌ಸನ್ ಪೀಟರ್ 87.87 ಮೀ. ದೂರಕ್ಕೆ ಜಾವೆಲಿನ್ ಎಸೆದು, ಡೈಮಂಡ್ ಲೀಗ್ ಚಾಂಪಿಯನ್ ಆಗಿ ಹೊರಹೊಮ್ಮಿದರು. ಜರ್ಮನಿಯ ಯೂಲಿಯನ್ ವೇಬರ್ 85.97 ಮೀ. ಎಸೆದು 3ನೇ ಸ್ಥಾನ ಗಳಿಸಿದರು.

Neeraj Chopra Brilliant Throw of 87.86m 💥

He finishes as Runner up of Diamond League 2024 , Just short of 1 cm from Champion Peters 💔

Despite Groin Injury, Neeraj gave his best 🇮🇳👏pic.twitter.com/rbmzBNOXRj

— The Khel India (@TheKhelIndia)

Latest Videos

undefined

ನೀರಜ್ ಸತತ 2ನೇ ವರ್ಷ ಡೈಮಂಡ್‌ ಲೀಗ್‌ನಲ್ಲಿ 2ನೇ ಸ್ಥಾನ ಪಡೆದಿದ್ದಾರೆ. 2022ರಲ್ಲಿ ಅಗ್ರಸ್ಥಾನ ಪಡೆದಿದ್ದ ಚೋಪ್ರಾ, 2023ರಲ್ಲಿ 2ನೇ ಸ್ಥಾನ ಗಳಿಸಿದ್ದರು. ಹಾಲಿ ಒಲಿಂಪಿಕ್ ಚಾಂಪಿಯನ್ ಪಾಕಿಸ್ತಾನದ ಅರ್ಷದ್ ನದೀಂ, ಈ ಕೂಟದಲ್ಲಿ ಸ್ಪರ್ಧಿಸಿರಲಿಲ್ಲ.

ಡೈಮಂಡ್ ಲೀಗ್ ಫೈನಲ್ಸ್: ಭಾರತದ ಸಾಬೆಗೆ 9ನೇ ಸ್ಥಾನ

ಬ್ರುಸೆಲ್ಸ್ (ಬೆಲ್ಲಿಯಂ): 3000 ಮೀ. ಸ್ಟೀಪಲ್ ಚೇಸ್‌ನಲ್ಲಿ ರಾಷ್ಟ್ರೀಯ ದಾಖಲೆ ಹೊಂದಿರುವ ಭಾರತದ ಅವಿನಾಶ್ ಸಾಬ್ಳೆ, ಡೈಮಂಡ್ ಲೀಗ್ ಫೈನಲ್ಸ್ ನಲ್ಲಿ9ನೇ ಸ್ಥಾನ ಪಡೆದಿದ್ದಾರೆ. ಶುಕ್ರವಾರ  ಮಧ್ಯರಾತ್ರಿ ನಡೆದ ಸ್ಪರ್ಧೆಯಲ್ಲಿ ಸಾಬೈ, 8 ನಿಮಿಷ 17.09 ಸೆಕೆಂಡ್ ಗಳಲ್ಲಿ ಗುರಿ ತಲುಪಿ, 10 ಜನ ಸ್ಪರ್ಧಿಗಳ ಪೈಕಿ 9ನೇ ಸ್ಥಾನ ಪಡೆದರು. ಕೀನ್ಯಾದ ಅಮೊಸ್ ಸೆರೆಮ್ 8 ನಿಮಿಷ6.90 ಸೆಕೆಂಡ್‌ಗಳಲ್ಲಿ ಗುರಿ ಮುಟ್ಟಿ ಡೈಮಂಡ್ ಲೀಗ್ ಚಾಂಪಿಯನ್ ಆಗಿ ಹೊರಹೊಮ್ಮಿದರು.

ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಹಾಕಿ: ಭಾರತಕ್ಕೆ ಶರಣಾದ ಬದ್ದ ಎದುರಾಳಿ ಪಾಕ್

ಚೆಸ್‌ ಒಲಿಂಪಿಯಾಡ್: ಭಾರತ ತಂಡಗಳಿಗೆ ಸತತ ಮೂರನೇ ಗೆಲುವು

ಬುಡಾಪೆಸ್ಟ್ (ಹಂಗೇರಿ): ಇಲ್ಲಿ ನಡೆಯುತ್ತಿರುವ 45ನೇ ಚೆಸ್ ಒಲಿಂಪಿಯಾಡ್‌ನಲ್ಲಿ ಭಾರತದ 3 ತಂಡಗಳು ಸತತ 3ನೇ ಗೆಲುವು ದಾಖಲಿಸಿವೆ.ಪುರುಷರ ತಂಡ 3.5-0.5 ಅಂಕಗಳ ಅಂತರದಲ್ಲಿ ಆತಿಥೇಯ ಹಂಗೇರಿ ವಿರುದ್ಧ ಗೆದ್ದರೆ, ಮಹಿಳಾ ತಂಡ 3-1ರ ಅಂತರದಲ್ಲಿ ಸ್ವಿಟ್ಟರ್ಲೆಂಡ್ ವಿರುದ್ಧ ಜಯಗಳಿಸಿತು. ಮುಂದಿನ ಸುತ್ತಿನಲ್ಲಿ ಭಾರತ ಪುರುಷರ ತಂಡಕ್ಕೆ ಸರ್ಬಿಯಾ, ಮಹಿಳಾ ತಂಡಕ್ಕೆ ಫ್ರಾನ್ಸ್ ಸವಾಲು
ಎದುರಾಗಲಿದೆ.

ಐಎಸ್‌ಎಲ್ ಫುಟ್ಬಾಲ್: ಬಿಎಫ್‌ಸಿ ಶುಭಾರಂಭ 

ಬೆಂಗಳೂರು: 11ನೇ ಆವೃತ್ತಿಯ ಇಂಡಿಯನ್ ಸೂಪರ್ ಲೀಗ್ (ಐಎಸ್ಎಲ್) ಫುಟ್ಬಾಲ್ ಟೂರ್ನಿಯಲ್ಲಿ ಬೆಂಗಳೂರು ಎಫ್‌ಸಿ ತಂಡ ಶುಭಾರಂಭ ಮಾಡಿದೆ. ಇಲ್ಲಿನ ಕಂಠೀರವ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಈಸ್ಟ್ ಬೆಂಗಾಲ್ ವಿರುದ್ಧ ಬಿಎಫ್‌ಸಿ 1-0 ಗೋಲಿನ ಗೆಲುವು ಸಾಧಿಸಿತು. 

ನಿಮಗೆ ಗೊತ್ತಿರಲಿ, ಹಾಕಿ ಭಾರತದ ಅಧಿಕೃತ ರಾಷ್ಟ್ರೀಯ ಕ್ರೀಡೆ ಅಲ್ಲವೇ ಅಲ್ಲ! ಅಚ್ಚರಿಯೆನಿಸಿದ್ರೂ ಇದು ಸತ್ಯ

ಬೆಂಗಳೂರಿನ 19 ವರ್ಷದ ಯುವ ಆಟಗಾರ ವಿನಿತ್ ವೆಂಕಟೇಶ್ ತಮ್ಮ ಚೊಚ್ಚಲ ಪಂದ್ಯದಲ್ಲೇ ಗೋಲು ಬಾರಿಸಿ ತಂಡದ ಗೆಲುವಿಗೆ ಆಸರೆಯಾದರು. 25ನೇ ನಿಮಿಷದಲ್ಲಿ ಬಿಎಫ್‌ಸಿ ಪಂದ್ಯದ ಏಕೈಕ ಗೋಲು ದಾಖಲಿಸಿತು. ತಂಡ ತನ್ನ ಮುಂದಿನ ಪಂದ್ಯವನ್ನು ಸೆ.19ರಂದು ಹೈದ್ರಾಬಾದ್ ಎಫ್‌ಸಿ ವಿರುದ್ಧ ಆಡಲಿದೆ.

click me!