ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ತಂದೆ ಯೋಗರಾಜ್ ಸಿಂಗ್ ತಮ್ಮ ಬಾಲ್ಯದಲ್ಲಿ ನಡೆದ ಘಟನೆಯೊಂದನ್ನು ಮೆಲುಕು ಹಾಕಿದ್ದಾರೆ
ಮೊಹಾಲಿ: ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ಅವರ ತಂದೆ ಯೋಗರಾಜ್ ಸಿಂಗ್ ಕೂಡಾ ತಾವು ಕ್ರಿಕೆಟ್ ಆಡುವ ದಿನಗಳಲ್ಲಿ ಪ್ರತಿಭಾನ್ವಿತ ಆಟಗಾರನಾಗಿ ಗುರುತಿಸಿಕೊಂಡಿದ್ದರು. ಹೀಗಿದ್ದೂ ಯೋಗರಾಜ್ ಸಿಂಗ್ ಆಟಗಾರನಾಗಿ ದೊಡ್ಡ ಹೆಸರು ಮಾಡಲು ಸಾಧ್ಯವಾಗಲಿಲ್ಲ. ಯೋಗರಾಜ್ ಸಿಂಗ್, ಟೀಂ ಇಂಡಿಯಾ ಪರ ಒಂದು ಟೆಸ್ಟ್ ಹಾಗೂ ಆರು ಏಕದಿನ ಪಂದ್ಯಗಳನ್ನು ಆಡಲಷ್ಟೇ ಶಕ್ತರಾಗಿದ್ದರು.
ಯೋಗರಾಜ್ ಸಿಂಗ್ ಆಟಗಾರನಾಗಿ ಯಶಸ್ಸು ಕಾಣದಿದ್ದರೂ ಓರ್ವ ಕೋಚ್ ಆಗಿ ತನ್ನದೇ ಆದ ಛಾಪು ಮೂಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ತಮ್ಮ ಮಗ ಯುವರಾಜ್ ಸಿಂಗ್ ಅವರನ್ನು ಓರ್ವ ಚಾಂಪಿಯನ್ ಆಟಗಾರನಾಗಿ ಬೆಳೆಸುವಲ್ಲಿ ಯೋಗರಾಜ್ ಸಿಂಗ್ ಅವರ ಪಾತ್ರ ದೊಡ್ಡದಿದೆ. ಇದೀಗ ಕ್ರಿಕೆಟ್ ದಂತಕಥೆ ಸಚಿನ್ ತೆಂಡುಲ್ಕರ್ ಪುತ್ರ ಅರ್ಜುನ್ ತೆಂಡುಲ್ಕರ್ ಕೂಡಾ ಯೋಗರಾಜ್ ಸಿಂಗ್ ಅವರ ಗರಡಿಯಲ್ಲೇ ಪಳಗುತ್ತಿದ್ದಾರೆ. ಯೋಗರಾಜ್ ಸಿಂಗ್ ಅವರು ತಮ್ಮದೇ ಆದ ಕ್ರಿಕೆಟ್ ಅಕಾಡೆಮಿಯನ್ನು ಹೊಂದಿದ್ದು, ತಮ್ಮಲ್ಲಿ ಅಭ್ಯಾಸ ಮಾಡುತ್ತಿರುವ ಯುವ ಕ್ರಿಕೆಟ್ ಆಟಗಾರರಿಗೆ ಕಠಿಣ ಪರಿಶ್ರಮದೊಂದಿಗೆ ಸಜ್ಜುಗೊಳಿಸುತ್ತಿದ್ದಾರೆ.
undefined
ಬಾಂಗ್ಲಾದೇಶ ಎದುರಿನ ಟೆಸ್ಟ್ ಸರಣಿಗೆ ಟೀಂ ಇಂಡಿಯಾ ಅಭ್ಯಾಸ ಶುರು..!
"ಮೊದಲನೆಯದಾಗಿ, ಸಾವಿನ ಭಯವನ್ನು ಕೊನೆಗಾಣಿಸಬೇಕು. ನಾನು ಮೂರು ವರ್ಷದ ಮಗುವಾಗಿದ್ದಾಗ, ನನ್ನ ತಂದೆ, ತಾಯಿಗೆ ನಾವು ಹುಲಿ ಬೇಟೆಗೆ ಹೋಗುತ್ತಿದ್ದೇವೆ ಎಂದರು. ಇದನ್ನು ಕೇಳಿದ ನಮ್ಮ ತಾಯಿಗೆ ಭಯವಾಯಿತು. ಆಗ ನನ್ನ ತಂದೆ, "ಒಂದು ವೇಳೆ ಈತ ಸತ್ತು ಹೋದರೆ ಏನೂ ವ್ಯತ್ಯಾಸವಾಗುವುದಿಲ್ಲ. ಆದರೆ ನಾನು ಆತನನ್ನು ಹುಲಿ ರೀತಿ ಬೆಳೆಸುತ್ತೇನೆ ನೋಡು" ಎಂದಿದ್ದರು. ಹೀಗಾಗಿ ಕಾಲಾದುಂಗಿ ಎನ್ನುವ ಕಾಡಿಗೆ ನನ್ನನ್ನು ಕರೆದುಕೊಂಡು ಅಪ್ಪ ಅಮ್ಮ ಹೋದರು. ನಮ್ಮ ತಂದೆ ಬಂದೂಕು ಹಿಡಿದುಕೊಂಡು ತಿಂಗಳ ಬೆಳಕಿನಲ್ಲಿ ಹೆಜ್ಜೆಹಾಕಿದರು. ನಾವು ಒಂದು ಕಡೆ ಅಟ್ಟಣಿಗೆ ಮೇಲೆ ಕುಳಿತುಕೊಂಡಿದ್ದೆವು. ಆಗ ದುತ್ತನೇ ನಮ್ಮೆದುರಿಗೆ ಹುಲಿಯೊಂದು ಕಾಣಿಸಿಕೊಂಡಿತು. ಆಗ ನಮ್ಮ ತಾಯಿ ಉಸಿರುಹಿಡಿದುಕೊಂಡು ಕುಳಿತುಬಿಟ್ಟರು. ಆಗ ಹುಲಿಯಿಂದ ಕೇವಲ ಆರು ಅಡಿ ದೂರದಲ್ಲಿದ್ದ ನಮ್ಮ ತಂದೆ ಶೂಟ್ ಮಾಡಿ ಕೊಂದು ಹಾಕಿದರು ಎಂದು ಸಂದರ್ಶನವೊಂದರಲ್ಲಿ ಯೋಗರಾಜ್ ಸಿಂಗ್ ಹೇಳಿದ್ದಾರೆ.
ರಾಹುಲ್ ದ್ರಾವಿಡ್ ಪತ್ನಿ ಯಾರು? ದಿ ವಾಲ್ ಖ್ಯಾತಿಯ ದ್ರಾವಿಡ್ ಪತ್ನಿ ಕುರಿತಾದ ಇಂಟ್ರೆಸ್ಟಿಂಗ್ ಸಂಗತಿಗಳು
"ಮಗುವಾಗಿದ್ದ ನನಗೆ ಮಾತೇ ಹೊರಡಲಿಲ್ಲ. ನನ್ನನ್ನು ಕೆಳಗಿಳಿಸಲು ನನ್ನ ತಂದೆ, ತಾಯಿಗೆ ಹೇಳಿದರು. ನಂತರ ಅವರು ನನ್ನನ್ನು ಹಿಡಿದುಕೊಂಡು, "ಹುಲಿ ಯಾವತ್ತೂ ಹುಲ್ಲು ತಿನ್ನೋದಿಲ್ಲ" ಆ ಧ್ವನಿ ಇಡೀ ಕಾಡನ್ನೇ ಒಂದು ಸಲ ಪ್ರತಿಧ್ವನಿಸುವಂತಿತ್ತು. ಆಮೇಲೆ ನನ್ನನ್ನು ಆ ಹುಲಿಯ ಮೇಲೆ ಕೂರಿಸಿ, ಅದರ ರಕ್ತವನ್ನು ನನ್ನ ಮೈಮೇಲೆ, ತುಟಿಯ ಮೇಲೆ ಹಾಗೂ ಹಣೆಯ ಮೇಲೆಲ್ಲಾ ಎರಚಿದರು. ಆ ಫೋಟೋ ಇನ್ನೂ ನಮ್ಮ ಮನೆಯಲ್ಲಿದೆ ಎಂದು ಯೋಗರಾಜ್ ಸಿಂಗ್ ಹೇಳಿದ್ದಾರೆ.
"ನನ್ನ ಪ್ರಕಾರ ನನ್ನ ಅಕಾಡೆಮಿಗೆ ಬರುವವರು ಹಾಗೆ ಇರಬೇಕು, ನಾನು ಯುವರಾಜ್ ಸಿಂಗ್ ಅವರನ್ನು ಅದೇ ರೀತಿ ಯಾವುದೇ ಹೆದರಿಕೆಯಿರದಂತೆ ಬೆಳೆಸಿದೆ" ಎಂದು ಯೋಗರಾಜ್ ಸಿಂಗ್ ಹೇಳಿದ್ದಾರೆ.