
ಹುಲುನ್‌ಬ್ಯುರ್ (ಚೀನಾ): ನಾಯಕ ಹರ್ಮನ್ ಪ್ರೀತ್ ಸಿಂಗ್ ತಮ್ಮ ಅದ್ಭುತ ಲಯ ಮುಂದುವರಿಸಿದ್ದು, ಬದ್ಧವೈರಿ ಪಾಕಿಸ್ತಾನ ವಿರುದ್ಧ 2 ಪೆನಾಲ್ಟಿ ಕಾರ್ನರ್‌ಗಳನ್ನು ಗೋಲಾಗಿ ಪರಿವರ್ತಿಸುವ ಮೂಲಕ, ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಹಾಕಿ ಟೂರ್ನಿಯಲ್ಲಿ ಭಾರತ ಸತತ 5ನೇ ಗೆಲುವು ದಾಖಲಿಸಲು ನೆರವಾದರು. 2-1 ಗೋಲುಗಳ ಗೆಲುವು ಸಾಧಿಸಿದ ಭಾರತ, ಅಜೇಯ ಓಟ ಮುಂದುವರಿಸಿದ್ದು, ಪ್ರಶಸ್ತಿ ಉಳಿಸಿಕೊಳ್ಳುವತ್ತ ದಿಟ್ಟ ಹೆಜ್ಜೆ ಇರಿಸಿದೆ.
ಶನಿವಾರ ನಡೆದ ಪಂದ್ಯದಲ್ಲಿ ಅಹ್ಮದ್ ನದೀಂ 8ನೇ ನಿಮಿಷದಲ್ಲೇ ಗೋಲು ಬಾರಿಸುವ ಮೂಲಕ ಪಾಕಿಸ್ತಾನಕ್ಕೆ ಆರಂಭಿಕ ಮುನ್ನಡೆ ಒದಗಿಸಿದರು. ಬಳಿಕ ಹರ್ಮನ್ ಪ್ರೀತ್ 13 ಹಾಗೂ 19ನೇ ನಿಮಿಷಗಳಲ್ಲಿ ಗೋಲು ಬಾರಿಸಿ ಭಾರತ ಮುನ್ನಡೆ ಸಾಧಿಸಲು ನೆರವಾದರು. ಪಾಕಿಸ್ತಾನಕ್ಕಿದು ಈ ಟೂರ್ನಿಯಲ್ಲಿ ಮೊದಲ ಸೋಲು. ಮುಖಾಮುಖಿಗೂ ಮೊದಲೇ ಭಾರತ ಹಾಗೂ ಪಾಕಿಸ್ತಾನ ಎರಡೂ ತಂಡಗಳು ಸೆಮೀಸ್ ಪ್ರವೇಶಿಸಿದ್ದವು. ಸೋಮವಾರ ಸೆಮೀಸ್ ನಡೆಯಲಿದ್ದು, ಫೈನಲ್ ಮಂಗಳವಾರ ನಿಗದಿಯಾಗಿದೆ.
ವಿರಾಟ್ ಕೊಹ್ಲಿಯನ್ನು ನೋಡಿ ನೀವು ಕಲಿಯಬೇಕಾದ ಜೀವನ ಪಾಠಗಳಿವು; ಕುತೂಹಲಕಾರಿ ಸಂಗತಿ ಇಲ್ಲಿವೆ
8 ವರ್ಷಗಳಲ್ಲಿ ಪಾಕ್ ವಿರುದ ಸೋತಿಲ್ಲ ಭಾರತ
ಈ ಗೆಲುವು ಪಾಕಿಸ್ತಾನ ವಿರುದ್ಧ ಭಾರತ ಗೆಲುವಿನ ಓಟ ಮುಂದುವರಿಸಲೂ ಸಹಕಾರಿಯಾಯಿತು. 2016ರ ಬಳಿಕ ಭಾರತ, ಪಾಕ್ ವಿರುದ್ಧ ಸೋಲೇ ಕಂಡಿಲ್ಲ. ಈ ಪಂದ್ಯಕ್ಕೂ ಮುನ್ನ ಉಭಯ ತಂಡಗಳು ಹಾಂಗ್‌ರೋ ಏಷ್ಯನ್ ಗೇಮ್ಸ್ ನಲ್ಲಿ ಮುಖಾಮುಖಿಯಾಗಿದ್ದವು. ಆ ಪಂದ್ಯದಲ್ಲಿ ಭಾರತ 10 -2ರಲ್ಲಿ ಗೆದ್ದಿತ್ತು.
ಸೆಮೀಸ್ ವೇಳಾಪಟ್ಟಿ (ಸೆ.16ಕ್ಕೆ)
1ನೇ ಸೆಮಿಫೈನಲ್: ಪಾಕಿಸ್ತಾನ vs ಚೀನಾ
2ನೇ ಸೆಮಿಫೈನಲ್: ಭಾರತ vs ದಕ್ಷಿಣ ಕೊರಿಯಾ
ಡೇವಿಸ್ ಕಪ್: ಸ್ವೀಡನ್ ವಿರುದ್ಧ ಭಾರತಕ್ಕೆ ಹಿನ್ನಡೆ
ಸ್ಟಾಕ್‌ಹೋಮ್: ಡೇವಿಸ್ ಕಪ್ ವಿಶ್ವಗುಂಪು-1ರ ಪಂದ್ಯದಲ್ಲಿ ಭಾರತ ಬಲಿಷ್ಠ ಸ್ವೀಡನ್ ವಿರುದ್ಧ ಮೊದಲ ದಿನ ಎರಡೂ ಸಿಂಗಲ್ಸ್ ಪಂದ್ಯಗಳನ್ನು ಸೋತು, 0-2ರ ಹಿನ್ನಡೆ ಅನುಭವಿಸಿದೆ. ಮೊದಲ ಸಿಂಗಲ್ಸ್‌ನಲ್ಲಿ ಎನ್.ಶ್ರೀರಾಮ್ ಬಾಲಾಜಿ, ಎಲಿಯಸ್ ಎಮೆರ್ ವಿರುದ್ಧ 4-6, 2-6 ನೇರ ಸೆಟ್‌ಗಳಲ್ಲಿ ಸೋಲುಂಡರು. 2ನೇ ಸಿಂಗಲ್ಸ್‌ನಲ್ಲಿ ವಿಶ್ವ ರ್‍ಯಾಂಕಿಂಗ್‌ನಲ್ಲಿ ತಮಗಿಂತ ಕೆಳಗಿರುವ, ದಿಗ್ಗಜ ಬೊರ್ನ್ ಬೊರ್ಗ್ ಪುತ್ರ ಲಿಯೋ ಬೊರ್ಗ್ ವಿರುದ್ಧ ರಾಮ್ ಕುಮಾರ್ ರಾಮನಾಥನ್ ಪರಾಭವಗೊಂಡರು.
ವಿಶ್ವ ನಂ.603 ಲಿಯೋಗೆ ವಿಶ್ವ ನಂ.189 ರಾಮ್ ಕುಮಾರ್ 3-6, 3-6ರಲ್ಲಿ ಶರಣಾದರು. ಭಾರತದ ಅಗ್ರ ಸಿಂಗಲ್ಸ್ ಆಟಗಾರ ಸುಮಿತ್ ನಗಾಲ್ ಬೆನ್ನು ನೋವಿನ ಕಾರಣ, ಈ ಮುಖಾಮುಖಿಯಿಂದ ಹಿಂದೆ ಸರಿದ ಕಾರಣ ಡಬಲ್ಸ್ ಆಟಗಾರ ಶ್ರೀರಾಮ್ ಸಿಂಗಲ್ಸ್ ವಿಭಾಗದಲ್ಲಿ ಆಡಬೇಕಾಯಿತು.
ನಿಮಗೆ ಗೊತ್ತಿರಲಿ, ಹಾಕಿ ಭಾರತದ ಅಧಿಕೃತ ರಾಷ್ಟ್ರೀಯ ಕ್ರೀಡೆ ಅಲ್ಲವೇ ಅಲ್ಲ! ಅಚ್ಚರಿಯೆನಿಸಿದ್ರೂ ಇದು ಸತ್ಯ
ಭಾನುವಾರ ಡಬಲ್ಸ್ ಹಾಗೂ ರಿವರ್ಸ್ ಸಿಂಗಲ್ಸ್ ಪಂದ್ಯಗಳು ನಡೆಯಲಿದ್ದು, ಸ್ವೀಡನ್ ವಿರುದ್ಧ ಭಾರತ ಚೊಚ್ಚಲ ಗೆಲುವು ದಾಖಲಿಸಬೇಕಿದ್ದರೆ, ಎಲ್ಲಾ 3 ಪಂದ್ಯಗಳನ್ನೂ ಗೆಲ್ಲಬೇಕು. ಡೇವಿಸ್ ಕಪ್‌ನಲ್ಲಿ ಈ ಹಿಂದೆ ಉಭಯ ತಂಡಗಳು 5 ಬಾರಿ ಮುಖಾಮುಖಿಯಾಗಿದ್ದು, ಎಲ್ಲಾ ಪಂದ್ಯಗಳಲ್ಲೂ ಸ್ವೀಡನ್ ಗೆದ್ದಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.