ಸ್ಪೇನ್ ಪ್ರವಾಸದಲ್ಲಿರುವ ಭಾರತ ಮಹಿಳಾ ಹಾಕಿ ತಂಡ ಮೊದಲ ಗೆಲುವು ಸಾಧಿಸಿದೆ. 3ನೇ ಪಂದ್ಯದಲ್ಲಿ ಭಾರತ ಮಹಿಳೆಯರು ಗೋಲಿನ ಮಳೆ ಸುರಿಸಿದ್ದಾರೆ. ಈ ಮೂಲಕ ಸರಣಿಯ ಸಮಬಲ ಮಾಡಿದ್ದಾರೆ.
ಸ್ಪೇನ್(ಜ.30): ಸ್ಪೇನ್ ಪ್ರವಾಸದಲ್ಲಿರುವ ಭಾರತ ಮಹಿಳಾ ಹಾಕಿ ತಂಡ ಮೊದಲ ಗೆಲುವಿನ ಸಿಹಿ ಕಂಡಿದೆ. 3ನೇ ಪಂದ್ಯದಲ್ಲಿ ಭಾರತ ವನಿತೆಯರು 5-2 ಗೋಲುಗಳ ಅಂತರದಲ್ಲಿ ಗೆಲುವು ಸಾಧಿಸಿತು. ಈ ಮೂಲಕ ಭಾರತ ಸರಣಿಯಲ್ಲಿ 1-1 ಸಮಬಲ ಸಾಧಿಸಿದೆ.
ಇದನ್ನೂ ಓದಿ: ಇಂಗ್ಲೆಂಡ್ ಲಯನ್ಸ್ ವಿರುದ್ಧ ಭಾರತಕ್ಕೆ ಭರ್ಜರಿ ಗೆಲುವು: 4-0 ಮುನ್ನಡೆ!
ಭಾರತದ ಯವ ಸ್ಟ್ರೈಕರ್ ಲಾಲ್ರೆಮ್ಸಿಯಾಮಿ 17ನೇ ನಿಮಿಷದಲ್ಲಿ ಮೊದಲ ಗೋಲು ಸಿಡಿಸಿ ಭಾರತಕ್ಕೆ ಮುನ್ನಡೆ ತಂದುಕೊಟ್ಟರು. 21ನೇ ನಿಮಿಷದಲ್ಲಿ ನೇಹಾ ಗೋಯಲ್ ಗೋಲು ಸಿಡಿಸಿದರೆ, ನವನೀತ್ ಕೌರ್ 32ನೇ ಮಿಷದಲ್ಲಿ ಗೋಲು ಭಾರಿಸಿದರು. ಈ ಮೂಲಕ ಭಾರತ 3 ಗೋಲು ಸಿಡಿಸಿತು.
ಇದನ್ನೂ ಓದಿ: ಇಂಡೋನೇಷ್ಯಾ ಓಪನ್ ಗೆದ್ದ ಇಂಡಿಯನ್: ಸೈನಾ ದಿ ಗ್ರೇಟ್!
ರಾಣಿ ರಾಂಪಾಲ್ 51ನೇ ನಿಮಿಷದಲ್ಲಿ ಹಾಗೂ ಲಾಲ್ರೆಮ್ಸಿಯಾಮಿ 58ನೇ ನಿಮಿಷದಲ್ಲಿ ಗೋಲು ಸಿಡಿಸಿದರು. ಈ ಮೂಲಕ ಭಾರತ 5-2 ಅಂತರದಲ್ಲಿ ಗೆಲುವು ಸಾಧಿಸಿತು. ಮೊದಲ ಪಂದ್ಯದಲ್ಲಿ 2-3 ಅಂತರದಲ್ಲಿ ಸೋಲು ಕಂಡಿದ್ದ ಭಾರತ, 2ನೇ ಪಂದ್ಯದಲ್ಲಿ 1-1 ಅಂತರದಲ್ಲಿ ಡ್ರಾ ಮಾಡಿಕೊಂಡಿತು.