2020 ಟಿ20 ವಿಶ್ವಕಪ್: ಗುಂಪು ಹಂತದಲ್ಲಿ ಭಾರತ-ಪಾಕ್ ಮುಖಾಮುಖಿ ಇಲ್ಲ!

By Web Desk  |  First Published Jan 30, 2019, 8:56 AM IST

2020ರ ಐಸಿಸಿ ಟಿ20 ವಿಶ್ವಕಪ್ ವೇಳಾಪಟ್ಟಿ ಪ್ರಕಟಗೊಂಡಿದೆ. 2011ರ ವಿಶ್ವಕಪ್ ಟೂರ್ನಿ ಬಳಿಕ ಇದೇ ಮೊದಲ ಬಾರಿಗೆ ಭಾರತ ಹಾಗೂ ಪಾಕಿಸ್ತಾನ ಗುಂಪು ಹಂತದಲ್ಲಿ ಮುಖಾಮುಖಿಯಾಗುವುದಿಲ್ಲ. ಇಲ್ಲಿದೆ ವೇಳಾಪಟ್ಟಿ ವಿವರ. 
 


ದುಬೈ(ಜ.30): ಮಾಜಿ ವಿಶ್ವ ಚಾಂಪಿಯನ್‌ ಭಾರತ, ಆಸ್ಪ್ರೇಲಿಯಾದಲ್ಲಿ ನಡೆಯಲಿರುವ 2020ರ ಐಸಿಸಿ ಟಿ20 ವಿಶ್ವಕಪ್‌ನ ಮೊದಲ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾವನ್ನು ಎದುರಿಸಲಿದೆ. ಮಂಗಳವಾರ ಅಂತಾರಾಷ್ಟ್ರೀಯ ಕ್ರಿಕೆಟ್‌ ಸಮಿತಿ (ಐಸಿಸಿ) ವಿಶ್ವಕಪ್‌ ವೇಳಾಪಟ್ಟಿಯನ್ನು ಪ್ರಕಟಿಸಿತು. ‘ಬಿ’ ಗುಂಪಿನಲ್ಲಿರುವ ಭಾರತ, ಅಕ್ಟೋಬರ್‌ 24ರಂದು ಪರ್ತ್‌ನಲ್ಲಿ ತನ್ನ ಮೊದಲ ಪಂದ್ಯವನ್ನು ಆಡಲಿದೆ. ಅ.18ರಿಂದ ಟೂರ್ನಿ ಆರಂಭಗೊಳ್ಳಲಿದ್ದು, ಅರ್ಹತಾ ಸುತ್ತಿನ ಪಂದ್ಯಗಳು ದಕ್ಷಿಣ ಗೀಲಾಂಗ್‌ ಹಾಗೂ ಹೊಬಾರ್ಟ್‌ನಲ್ಲಿ ನಡೆಯಲಿವೆ.

ಇದನ್ನೂ ಓದಿ: 2015ರ ವಿಶ್ವಕಪ್‌ನಿಂದ 2019 - ಟೀಂ ಇಂಡಿಯಾದ ಯಶಸ್ವಿ ಜರ್ನಿ ಮೆಲುಕು!

Tap to resize

Latest Videos

undefined

ಭಾರತ, ಅ.29ರಂದು ಸೂಪರ್‌ 12 ಹಂತದ ತನ್ನ 2ನೇ ಪಂದ್ಯದಲ್ಲಿ ಅರ್ಹತಾ ಸುತ್ತಿನಲ್ಲಿ ಗೆಲ್ಲುವ ತಂಡದ ವಿರುದ್ಧ ಆಡಲಿದೆ. ನ.1ರಂದು ನಡೆಯಲಿರುವ 3ನೇ ಪಂದ್ಯದಲ್ಲಿ ಇಂಗ್ಲೆಂಡ್‌ ವಿರುದ್ಧ ಸೆಣಸಲಿರುವ ಭಾರತ, ನ.5ರಂದು ಅರ್ಹತಾ ಸುತ್ತಿನಲ್ಲಿ ಗೆಲ್ಲುವ ಮತ್ತೊಂದು ತಂಡವನ್ನು ಎದುರಿಸಲಿದೆ. ಗುಂಪು ಹಂತದ ಅಂತಿಮ ಪಂದ್ಯವನ್ನು ಭಾರತ ನ.8ರಂದು ಆಷ್ಘಾನಿಸ್ತಾನದ ವಿರುದ್ಧ ಆಡಲಿದೆ. ನ.11, 12ರಂದು ಸೆಮಿಫೈನಲ್‌, ನ.15ಕ್ಕೆ ಫೈನಲ್‌ ನಡೆಯಲಿದೆ. ಟೂರ್ನಿಯಲ್ಲಿ ಒಟ್ಟು 45 ಪಂದ್ಯಗಳು ನಡೆಯಲಿದೆ. ಆಸ್ಪ್ರೇಲಿಯಾ ಮೊದಲ ಬಾರಿಗೆ ಟಿ20 ವಿಶ್ವಕಪ್‌ಗೆ ಆತಿಥ್ಯ ವಹಿಸಲಿದ್ದು, 8 ನಗರಗಳಲ್ಲಿ ಪಂದ್ಯಗಳು ನಡೆಯಲಿವೆ.

ಇದನ್ನೂ ಓದಿ: ತನ್ನ ಜಾಕೆಟ್ ಮೇಲೆ ಸಹಿ ಮಾಡಿ ಅಭಿಮಾನಿಗೆ ನೀಡಿದ ಜೋಕೋವಿಚ್

ಗುಂಪು ಹಂತದಲ್ಲಿ ಇಲ್ಲ ಭಾರತ-ಪಾಕ್‌ ಮುಖಾಮುಖಿ!
2011ರ ಏಕದಿನ ವಿಶ್ವಕಪ್‌ ಬಳಿಕ ಇದೇ ಮೊದಲ ಬಾರಿಗೆ ಬದ್ಧವೈರಿಗಳಾದ ಭಾರತ ಹಾಗೂ ಪಾಕಿಸ್ತಾನ ತಂಡಗಳು ಗುಂಪು ಹಂತದಲ್ಲಿ ಮುಖಾಮುಖಿಯಾಗುವುದಿಲ್ಲ. 2011ರ ಬಳಿಕ ಉಭಯ ತಂಡಗಳು 5 ಐಸಿಸಿ ಟೂರ್ನಿಗಳಲ್ಲಿ ಪರಸ್ಪರ ಎದುರಾಗಿವೆ. ಇಂಗ್ಲೆಂಡ್‌ನಲ್ಲಿ ನಡೆಯಲಿರುವ 2019ರ ಏಕದಿನ ವಿಶ್ವಕಪ್‌ನಲ್ಲೂ ಭಾರತ-ಪಾಕಿಸ್ತಾನ ಸೆಣಸಲಿವೆ. ಸದ್ಯ ವಿಶ್ವ ಟಿ20 ರಾರ‍ಯಂಕಿಂಗ್‌ನಲ್ಲಿ ಪಾಕಿಸ್ತಾನ ಹಾಗೂ ಭಾರತ ಕ್ರಮವಾಗಿ 1 ಹಾಗೂ 2ನೇ ಸ್ಥಾನದಲ್ಲಿರುವ ಕಾರಣ, ಅಗ್ರ 2 ತಂಡಗಳಿಗೆ ಬೇರೆ ಬೇರೆ ಗುಂಪಿನಲ್ಲಿ ಸ್ಥಾನ ನೀಡಬಬೇಕಾಯಿತು.

ಇದನ್ನೂ ಓದಿ: ಮೊದಲ ಬಾರಿಗೆ ಏಕದಿನ ಸರಣಿ ಗೆದ್ದು ಇತಿಹಾಸ ಬರೆದ ನೇಪಾಳ!

ಮಹಿಳಾ ಟಿ20 ವಿಶ್ವಕಪ್‌: ‘ಎ’ ಗುಂಪಿನಲ್ಲಿ ಭಾರತ
ದುಬೈ: 2020ರ ಫೆ.21ರಿಂದ ಮಾ.8ರ ವರೆಗೂ ಐಸಿಸಿ ಮಹಿಳಾ ಟಿ20 ವಿಶ್ವಕಪ್‌ ಆಸ್ಪ್ರೇಲಿಯಾದಲ್ಲಿ ನಡೆಯಲಿದೆ. ಭಾರತ ತಂಡ ‘ಎ’ ಗುಂಪಿನಲ್ಲಿ ಸ್ಥಾನ ಪಡೆದಿದ್ದು, ಫೆ.21ರಂದು ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್‌ ಆಸ್ಪ್ರೇಲಿಯಾವನ್ನು ಎದುರಿಸಲಿದೆ. ಟೂರ್ನಿಯಲ್ಲಿ ಒಟ್ಟು 10 ತಂಡಗಳು ಪಾಲ್ಗೊಳ್ಳಲಿವೆ. ಭಾರತ ಸೇರಿ 8 ತಂಡಗಳು ನೇರ ಪ್ರವೇಶ ಪಡೆದರೆ, ಅರ್ಹತಾ ಸುತ್ತಿನಿಂದ 2 ತಂಡಗಳು ಪ್ರಧಾನ ಸುತ್ತಿಗೇರಲಿವೆ. ಫೆ.24ರಂದು ಅರ್ಹತಾ ಸುತ್ತಿನಲ್ಲಿ ಗೆಲ್ಲುವ ತಂಡವನ್ನು ಎದುರಿಸಲಿರುವ ಭಾರತ, ಫೆ.27ರಂದು ನ್ಯೂಜಿಲೆಂಡ್‌, ಫೆ.29ರಂದು ಶ್ರೀಲಂಕಾ ವಿರುದ್ಧ ಆಡಲಿದೆ.

click me!