ಇಂಗ್ಲೆಂಡ್ ಲಯನ್ಸ್ ವಿರುದ್ಧ ಭಾರತ ಎ ತಂಡದ ಗೆಲುವಿನ ಓಟ ಮುಂದುವರಿದಿದೆ. 4ನೇ ಪಂದ್ಯದಲ್ಲೂ ಇಂಗ್ಲೆಂಡ್ ಸೋಲಿಗೆ ಶರಣಾಯಿತು. 5 ಪಂದ್ಯಗಳ ಸರಣಿಯಲ್ಲಿ ರಹಾನೆ ಸೈನ್ಯ 4-0 ಮುನ್ನಡೆ ಸಾಧಿಸಿದೆ. ಇಲ್ಲಿದೆ ಹೈಲೈಟ್ಸ್
ತಿರುವನಂತಪುರಂ(ಜ.30): ರಿಷಭ್ ಪಂತ್(73) ಅಜೇಯ ಅರ್ಧಶತಕ ಮತ್ತು ಶಾರ್ದೂಲ್ ಠಾಕೂರ್ (49ಕ್ಕೆ 4) ಆಕರ್ಷಕ ಬೌಲಿಂಗ್ ನೆರವಿನಿಂದ ಭಾರತ ‘ಎ’ ತಂಡ ಮಂಗಳವಾರ ನಡೆದ ಇಂಗ್ಲೆಂಡ್ ಲಯನ್ಸ್ ವಿರುದ್ಧ 4ನೇ ಅನಧಿಕೃತ ಏಕದಿನ ಪಂದ್ಯದಲ್ಲಿ 6 ವಿಕೆಟ್‌ಗಳ ಗೆಲುವು ಸಾಧಿಸಿತು.
ಇದನ್ನೂ ಓದಿ: 2020 ಟಿ20 ವಿಶ್ವಕಪ್: ಗುಂಪು ಹಂತದಲ್ಲಿ ಭಾರತ-ಪಾಕ್ ಮುಖಾಮುಖಿ ಇಲ್ಲ!
ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ಲಯನ್ಸ್ 8 ವಿಕೆಟ್ ನಷ್ಟಕ್ಕೆ 221 ರನ್ ಸಿಡಿಸಿತು. ಒಲ್ಲಿ ಪೊಪ್ 65 ರನ್ ಸಿಡಿಸಿದರೆ, ಸ್ಟೀವನ್ ಮುಲಾನೆ 58 ರನ್ ಕಾಣಿಕೆ ನೀಡಿದರು. ಭಾರತದ ಪರ ಶಾರ್ದೂಲ್ ಠಾಕೂರ್ 4 ಹಾಗೂ ರಾಹುಲ್ ಚಹಾರ್ 2 ವಿಕೆಟ್ ಕಬಳಿಸಿದರು.
ಇದನ್ನೂ ಓದಿ: ಒಂದು ಆಲ್ರೌಂಡರ್ ಸ್ಥಾನಕ್ಕೆ ಸ್ಪರ್ಧಾತ್ಮಕ ಪೈಪೋಟಿ-ಜಾಧವ್
222 ರನ್ ಗುರಿ ಬೆನ್ನಟ್ಟಿದ ಭಾರತ ಎ ತಂಡಕ್ಕೆ ಕೆಎಲ್ ರಾಹುಲ್ 42 ರನ್ ಕಾಣಿಕೆ ನೀಡಿದರು. ರಿಷಬ್ ಪಂತ್ ಅಜೇಯ 73 ಹಾಗೂ ದೀಪಕ್ ಹೂಡ ಅಜೇಯ 47 ರನ್ ಸಿಡಿಸೋ ಮೂಲಕ ಭಾರತ 46.3 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು ಗುರಿ ತಲುಪಿತು.