ವೈಜಾಗ್ ಟೆಸ್ಟ್: ಮಿಂಚಿದ ಅಶ್ವಿನ್, ಆಲೌಟ್ ಹೊಸ್ತಿಲಲ್ಲಿ ಆಫ್ರಿಕಾ

By Web Desk  |  First Published Oct 4, 2019, 5:30 PM IST

ದಕ್ಷಿಣ ಆಫ್ರಿಕಾದ ಡೀನ್ ಎಲ್ಗಾರ್ ಹಾಗೂ ಕ್ವಿಂಟನ್ ಡಿಕಾಕ್ ಆಕರ್ಷಕ ಶತಕ, ರವಿಚಂದ್ರನ್ ಅಶ್ವಿನ್ 5 ವಿಕೆಟ್ ಗೊಂಚಲು ಮೊದಲ ಟೆಸ್ಟ್‌ನ ಮೂರನೇ ದಿನದ ಹೈಲೈಟ್ಸ್.. ಈ ಕುರಿತಾದ ವರದಿ ಇಲ್ಲಿದೆ ನೋಡಿ..


ವಿಶಾಖಪಟ್ಟಣಂ[ಅ.04]: ಆರಂಭಿಕ ಡೀನ್ ಎಲ್ಗಾರ್[160] ಹಾಗೂ ವಿಕೆಟ್ ಕೀಪರ್ ಬ್ಯಾಟ್ಸ್’ಮನ್ ಕ್ವಿಂಟನ್ ಡಿಕಾಕ್[111] ಕೆಚ್ಚೆದೆಯ ಶತಕದ ಹೊರತಾಗಿಯೂ ದಕ್ಷಿಣ ಆಫ್ರಿಕಾ ತಂಡ ಆಲೌಟ್ ಭೀತಿಗೆ ಸಿಲುಕಿದ್ದು, ಮೂರನೇ ದಿನದಂತ್ಯಕ್ಕೆ ಹರಿಣಗಳ ಪಡೆ 8 ವಿಕೆಟ್ ಕಳೆದುಕೊಂಡು 385 ರನ್ ಗಳಿಸಿದೆ. ದಕ್ಷಿಣ ಆಫ್ರಿಕಾ ತಂಡ ಇನ್ನೂ 117 ರನ್’ಗಳ ಹಿನ್ನಡೆಯಲ್ಲಿದೆ. ರವಿಚಂದ್ರನ್ ಅಶ್ವಿನ್ 5 ವಿಕೆಟ್ ಕಬಳಿಸಿ ಗಮನ ಸೆಳೆದಿದ್ದಾರೆ.

ICC ನೂತನ ಏಕದಿನ ಶ್ರೇಯಾಂಕ ಪ್ರಕಟ; ಟೀಂ ಇಂಡಿಯಾ ಆಟಗಾರರೇ ನಂ.1

Tap to resize

Latest Videos

ಎರಡನೇ ದಿನದಂತ್ಯಕ್ಕೆ 3 ವಿಕೆಟ್ ಕಳೆದುಕೊಂಡು 39 ರನ್ ಗಳಿಸಿದ್ದ ಆಫ್ರಿಕಾ ಮೂರನೇ ದಿನದಾಟದ ಆರಂಭದಲ್ಲೇ ಡೇನ್ ತೆಂಬಾ ಬಹುಮಾ ವಿಕೆಟ್ ಕಳೆದುಕೊಂಡಿತು. ಆದರೆ 5ನೇ ವಿಕೆಟ್’ಗೆ ಡೀನ್ ಎಲ್ಗಾರ್ ಹಾಗೂ ನಾಯಕ ಫಾಫ್ ಡುಪ್ಲೆಸಿಸ್ ಜೋಡಿ 115 ರನ್’ಗಳ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾಯಿತು. ಡುಪ್ಲೆಸಿಸ್ 103 ಎಸೆತಗಳಲ್ಲಿ 55 ರನ್ ಬಾರಿಸಿ ಅಶ್ವಿನ್’ಗೆ ವಿಕೆಟ್ ಒಪ್ಪಿಸಿದರು. ಈ ವೇಳೆ ಆರನೇ ವಿಕೆಟ್’ಗೆ ಎಲ್ಗಾರ್-ಡಿಕಾಕ್ ಜೋಡಿ 164 ರನ್’ಗಳ ಜತೆಯಾಟವಾಡುವುದರೊಂದಿಗೆ ಭಾರತೀಯ ಬೌಲರ್’ಗಳನ್ನು ಇನ್ನಿಲ್ಲದಂತೆ ಕಾಡಿದರು. ಈ ಜೋಡಿಯನ್ನು ಬೇರ್ಪಡಿಸುವಲ್ಲಿ ರವೀಂದ್ರ ಜಡೇಜಾ ಯಶಸ್ವಿಯಾದರು. ಎಲ್ಗಾರ್ 287 ಎಸೆತಗಳಲ್ಲಿ 18 ಬೌಂಡರಿ ಹಾಗೂ 4 ಸಿಕ್ಸರ್ ನೆರವಿನಿಂದ 160 ರನ್ ಬಾರಿಸಿ ಪೆವಿಲಿಯನ್ ಸೇರಿದರು. ಎಲ್ಗಾರ್ ವಿಕೆಟ್ ಪಡೆಯುವುದರೊಂದಿಗೆ ಜಡೇಜಾ ಟೆಸ್ಟ್ ಕ್ರಿಕೆಟ್’ನಲ್ಲಿ ಅತಿವೇಗವಾಗಿ 200 ವಿಕೆಟ್ ಪಡೆದ ಎಡಗೈ ಬೌಲರ್ ಎನ್ನುವ ದಾಖಲೆ ಬರೆದರು.

ರ‍್ಯಾಂಕಿಂಗ್‌ನಲ್ಲಿ ಕೊಹ್ಲಿ ಹಿಂದಿಕ್ಕಿ ಕ್ಷಮೆ ಕೇಳಿದ ನೆದರ್ಲೆಂಡ್ ಕ್ರಿಕೆಟಿಗ!

ರನ್ ವೇಗ ಹೆಚ್ಚಿಸಿದ ಡಿಕಾಕ್: ಟಿ20 ಸರಣಿಯ ಎರಡೂ ಪಂದ್ಯಗಳಲ್ಲೂ ಅರ್ಧಶತಕ ಸಿಡಿಸಿ ಮಿಂಚಿದ್ದ ಡಿಕಾಕ್, ಟೆಸ್ಟ್ ಕ್ರಿಕೆಟ್’ನಲ್ಲೂ ಶತಕ ಸಿಡಿಸುವ ಮೂಲಕ ಮಿಂಚಿದರು. ಏಕದಿನ ಕ್ರಿಕೆಟ್ ಮಾದರಿಯಂತೆ ಬ್ಯಾಟ್ ಬೀಸಿದ ಡಿಕಾಕ್ ಕೇವಲ 163 ಎಸೆತಗಳಲ್ಲಿ 16 ಬೌಂಡರಿ ಹಾಗೂ 2 ಸಿಕ್ಸರ್ ನೆರವಿನಿಂದ 111 ರನ್ ಸಿಡಿಸಿದರು. ಸಿಕ್ಸರ್ ಮೂಲಕವೇ ಡಿಕಾಕ್ ಶತಕವನ್ನು  ಪೂರೈಸಿದರು.
ಮಿಂಚಿದ ಅಶ್ವಿನ್: ಎರಡನೇ ದಿನದಾಟದಲ್ಲೇ 2 ವಿಕೆಟ್ ಕಬಳಿಸಿದ್ದ ಅಶ್ವಿನ್ ಮೂರನೇ ದಿನ 3 ವಿಕೆಟ್ ಪಡೆಯುವ ಮೂಲಕ ಟೀಂ ಇಂಡಿಯಾಗೆ ಆಸರೆಯಾದರು. ಡುಪ್ಲೆಸಿಸ್, ಡಿಕಾಕ್, ಫಿಲಾಂಡರ್ ವಿಕೆಟ್ ಪಡೆಯುವ ಮೂಲಕ ಪ್ರವಾಸಿ ತಂಡಕ್ಕೆ ಆಘಾತ ನೀಡಿದರು. 

INDvSA 1ನೇ ಟೆಸ್ಟ್; ಭಾರತ ಬಿಗಿ ಹಿಡಿತ, 3 ವಿಕೆಟ್ ಕಳೆದುಕೊಂಡ ಆಫ್ರಿಕಾ!

ಭಾರತ ಪರ ಅಶ್ವಿನ್ 5 ವಿಕೆಟ್ ಪಡೆದರೆ, ರವೀಂದ್ರ ಜಡೇಜಾ 2 ಹಾಗೂ ಇಶಾಂತ್ ಶರ್ಮಾ ಒಂದು ವಿಕೆಟ್ ಪಡೆದಿದ್ದಾರೆ.

ಸಂಕ್ಷಿಪ್ತ ಸ್ಕೋರ್: 
ಭಾರತ: 502/7
ಮಯಾಂಕ್ ಅಗರ್’ವಾಲ್: 215

ದಕ್ಷಿಣ ಆಫ್ರಿಕಾ: 385/8
ಡೀನ್ ಎಲ್ಗಾರ್: 160

[* ಮೂರನೇ ದಿನದಾಟದ ಅಂತ್ಯಕ್ಕೆ]

click me!