
ಬೆಂಗಳೂರು[ಅ.04]: ಟೀಂ ಇಂಡಿಯಾ ಯುವ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ರಿಷಭ್ ಪಂತ್ 22ನೇ ವಸಂತಕ್ಕೆ ಕಾಲಿರಿಸಿದ್ದಾರೆ. ಡೆಲ್ಲಿ ಕ್ರಿಕೆಟಿಗನಿಗೆ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದೆ.
ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಕ್ರಿಕೆಟ್’ನಲ್ಲಿ ಶತಕ ಸಿಡಿಸುವ ಮೂಲಕ ಭರ್ಜರಿಯಾಗಿಯೇ ಟೀಂ ಇಂಡಿಯಾಗೆ ಎಂಟ್ರಿ ಕೊಟ್ಟಿದ್ದ ಪಂತ್, ಇದೀಗ ಕಳಫೆ ಫಾರ್ಮ್’ನಿಂದಾಗಿ ಟೆಸ್ಟ್ ತಂಡದಿಂದಲೇ ಹೊರಬಿದ್ದಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧ ಆಡಿದ 2 ಪಂದ್ಯಗಳಲ್ಲಿ ಕೇವಲ 58 ರನ್ ಗಳನ್ನು ಬಾರಿಸಲಷ್ಟೇ ಶಕ್ತರಾಗಿದ್ದರು. ಹೀಗಾಗಿ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ತಂಡದಲ್ಲಿ ಪಂತ್’ಗೆ ಸ್ಥಾನ ಸಿಕ್ಕಿಲ್ಲ.
ICC ನೂತನ ಏಕದಿನ ಶ್ರೇಯಾಂಕ ಪ್ರಕಟ; ಟೀಂ ಇಂಡಿಯಾ ಆಟಗಾರರೇ ನಂ.1
ಇದುವರೆಗೂ 11 ಟೆಸ್ಟ್ ಪಂದ್ಯಗಳನ್ನಾಡಿರುವ ಪಂತ್, 44.35ರ ಸರಾಸರಿಯಲ್ಲಿ 754 ರನ್ ಬಾರಿಸಿದ್ದಾರೆ. ಇದರಲ್ಲಿ ಎರಡು ಶತಕ ಹಾಗೂ ಒಂದು ಅರ್ಧಶತಕವೂ ಸೇರಿದೆ. ಇನ್ನು ವಿಕೆಟ್ ಕೀಪಿಂಗ್’ನಲ್ಲೂ ಕಮಾಲ್ ಮಾಡಿರುವ ಪಂತ್ 51 ಕ್ಯಾಚ್ ಹಾಗೂ 2 ಸ್ಟಂಪಿಂಗ್ ಕೂಡ ಮಾಡಿ ಸೈ ಎನಿಸಿಕೊಂಡಿದ್ದಾರೆ. ಇದರ ಜತೆಗೆ ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ನೆಲದಲ್ಲಿ ಶತಕ ಬಾರಿಸಿದ ಮೊದಲ ಭಾರತೀಯ ವಿಕೆಟ್ ಕೀಪರ್ ಬ್ಯಾಟ್ಸ್’ಮನ್ ಎನ್ನುವ ಗೌರವಕ್ಕೂ ಪಂತ್ ಪಾತ್ರರಾಗಿದ್ದಾರೆ. ಪಂತ್ ಏಕದಿನ ಕ್ರಿಕೆಟ್’ನಲ್ಲಿ 12 ಪಂದ್ಯಗಳಿಂದ 229 ರನ್ ಬಾರಿಸಿದ್ದರೆ, ಟಿ20 ಕ್ರಿಕೆಟ್’ನಲ್ಲಿ 20 ಪಂದ್ಯಗಳನ್ನಾಡಿ 325 ರನ್ ಬಾರಿಸಿದ್ದಾರೆ.
ಪಂತ್ ಹುಟ್ಟುಹಬ್ಬಕ್ಕೆ ಹಲವರು ಶುಭಕೋರಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.