ಭಾರತದ ಬಿಗಿ ಹಿಡಿತದಲ್ಲಿ ಆಫ್ರಿಕಾ; ಹರಿಣಗಳ ಗೆಲುವಿಗೆ 395 ಟಾರ್ಗೆಟ್

By Web Desk  |  First Published Oct 5, 2019, 5:04 PM IST

ಟೀಂ ಇಂಡಿಯಾ ರೋಹಿತ್ ಶರ್ಮಾ ಆಕರ್ಷಕ ಶತಕದ ನೆರವಿನಿಂದ ಎರಡನೇ ಇನಿಂಗ್ಸ್‌ನಲ್ಲಿ 4 ವಿಕೆಟ್ ಕಳೆದುಕೊಂಡು 323 ರನ್ ಬಾರಿಸಿ ಡಿಕ್ಲೇರ್ ಮಾಡಿಕೊಂಡಿದೆ. ಈ ಮೂಲಕ ಆಫ್ರಿಕಾ ತಂಡಕ್ಕೆ ಗೆಲ್ಲಲು 395 ರನ್‌ಗಳ ಗುರಿ ನೀಡಿದೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...


ವಿಶಾಖಪಟ್ಟಣಮ[ಅ.05]: ರೋಹಿತ್ ಶರ್ಮಾ ದಾಖಲೆಯ ಶತಕ ಹಾಗೂ ಚೇತೇಶ್ವರ್ ಪೂಜಾರ ಆಕರ್ಷಕ ಅರ್ಧಶತಕಗಳ ನೆರವಿನಿಂದ ಟೀಂ ಇಂಡಿಯಾ ಎರಡನೇ ಇನಿಂಗ್ಸ್’ನಲ್ಲಿ 4 ವಿಕೆಟ್ ಕಳೆದುಕೊಂಡು 323 ರನ್ ಬಾರಿಸಿ ಡಿಕ್ಲೇರ್ ಮಾಡಿಕೊಂಡಿದೆ. ಈ ಮೂಲಕ ಹರಿಣಗಳಿಗೆ ಮೊದಲ ಟೆಸ್ಟ್ ಪಂದ್ಯವನ್ನು ಗೆಲ್ಲಲು 395 ರನ್’ಗಳ ಗುರಿ ನೀಡಿದೆ.

ರೋಹಿತ್ ಆರ್ಭಟಕ್ಕೆ 25 ವರ್ಷದ ದಾಖಲೆ ಧೂಳೀಪಟ..!

Tap to resize

Latest Videos

undefined

ನಾಲ್ಕನೇ ದಿನದಾಟದ ಆರಂಭದಲ್ಲೇ ಎರಡು ವಿಕೆಟ್ ಗಳನ್ನು ಕಬಳಿಸುವ ಮೂಲಕ ಅಶ್ವಿನ್ ಹರಿಣಗಳ ಪಡೆಯನ್ನು 431 ರನ್’ಗಳಿಗೆ ನಿಯಂತ್ರಿಸಿದರು. ಈ ಮೂಲಕ ಭಾರತಕ್ಕೆ 71 ರನ್’ಗಳ ಮೊದಲ ಇನಿಂಗ್ಸ್ ಮುನ್ನಡೆಗೆ ನೆರವಾದರು. ಅಶ್ವಿನ್ ಮೊದಲ ಇನಿಂಗ್ಸ್’ನಲ್ಲಿ 7 ವಿಕೆಟ್ ಪಡೆದರೆ, ಜಡೇಜಾ 2 ಹಾಗೂ ಇಶಾಂತ್ ಶರ್ಮಾ ಒಂದು ವಿಕೆಟ್ ಪಡೆದರು.

2ನೇ ಇನಿಂಗ್ಸ್‌ನಲ್ಲೂ ರೋಹಿತ್ ಶತಕ; ವಿಶ್ವದಾಖಲೆ ಬರೆದ ಹಿಟ್‌ಮ್ಯಾನ್!

ಇನ್ನು 71 ರನ್’ಗಳ ಮುನ್ನಡೆಯೊಂದಿಗೆ ಎರಡನೇ ಇನಿಂಗ್ಸ್ ಆರಂಭಿಸಿದ ಭಾರತಕ್ಕೆ ಕೇಶವ್ ಮಹರಾಜ್ ಆಘಾತ ನೀಡಿದರು. ಮೊದಲ ಇನಿಂಗ್ಸ್’ನಲ್ಲಿ ದ್ವಿಶತಕ ಸಿಡಿಸಿ ಮಿಂಚಿದ್ದ ಮಯಾಂಕ್ ಅಗರ್’ವಾಲ್ ಕೇವಲ 7 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಆ ಬಳಿಕ ಎರಡನೇ ವಿಕೆಟ್’ಗೆ ರೋಹಿತ್-ಪುಜಾರಾ ಜೋಡಿ 169 ರನ್’ಗಳ ಜತೆಯಾಟ ನಿಭಾಯಿಸಿದರು. ಆರಂಭದಲ್ಲಿ ಮಂದಗತಿಯಲ್ಲಿ ಬ್ಯಾಟ್ ಬೀಸಿದ ಪೂಜಾರ ಪಿಚ್ ಅರಿತ ಬಳಿಕ ಲೀಲಾಜಾಲವಾಗಿ ರನ್ ಗಳಿಸತೊಡಗಿದರು. ಪೂಜಾರ 148 ಎಸೆತಗಳಲ್ಲಿ 13 ಬೌಂಡರಿ ಹಾಗೂ 2 ಸಿಕ್ಸರ್ ನೆರವಿನಿಂದ 81 ರನ್ ಬಾರಿಸಿ ಫಿಲಾಂಡರ್ ಬೌಲಿಂಗ್’ನಲ್ಲಿ ವಿಕೆಟ್ ಒಪ್ಪಿಸಿದರು.

ಮುರಳೀಧರನ್ ವಿಶ್ವದಾಖಲೆ ಸರಿಗಟ್ಟಲು ಅಶ್ವಿನ್ ಗೆ ಬೇಕಿದೆ ಇನ್ನೊಂದೇ ವಿಕೆಟ್..!

ಇನ್ನು ಮೊದಲ ಇನಿಂಗ್ಸ್’ನಲ್ಲಿ ಸೆಂಚುರಿ ಬಾರಿಸಿದ್ದ ರೋಹಿತ್ ದ್ವಿತೀಯ ಇನಿಂಗ್ಸ್’ನಲ್ಲೂ ಮೂರಂಕಿ ಮೊತ್ತ ದಾಖಲಿಸಲು ಯಶಸ್ವಿಯಾದರು. ರೋಹಿತ್ 149 ಎಸೆತಗಳಲ್ಲಿ 10 ಬೌಂಡರಿ ಹಾಗೂ 7 ಸಿಕ್ಸರ್ ನೆರವಿನಿಂದ 127 ರನ್ ಬಾರಿಸಿ ಎರಡನೇ ಬಾರಿಗೆ ಕೇಶವ್ ಮಹರಾಜ್ ಬೌಲಿಂಗ್’ನಲ್ಲೇ ಸ್ಟಂಪೌಟ್ ಆದರು. ಇನ್ನು ಮಧ್ಯಮ ಕ್ರಮಾಂಕದಲ್ಲಿ ರವೀಂದ್ರ ಜಡೇಜಾ[40], ನಾಯಕ ವಿರಾಟ್ ಕೊಹ್ಲಿ[31*] ಹಾಗೂ ಉಪನಾಯಕ ಅಜಿಂಕ್ಯ ರಹಾನೆ[27] ವೇಗವಾಗಿ ರನ್ ಕಲೆಹಾಕುವಲ್ಲಿ ಯಶಸ್ವಿಯಾದರು.

ದಕ್ಷಿಣ ಆಫ್ರಿಕಾ ಪರ ಕೇಶವ್ ಮಹರಾಜ್ 2 ವಿಕೆಟ್ ಪಡೆದರೆ, ವೆರ್ನಾನ್ ಫಿಲಾಂಡರ್ ಹಾಗೂ ಡೇನ್ ಫಿಯೆಟ್ ತಲಾ ಒಂದೊಂದು ವಿಕೆಟ್ ಪಡೆದರು. 

ಸಂಕ್ಷಿಪ್ತ ಸ್ಕೋರ್:
ಭಾರತ: 502/7&323/4
ದಕ್ಷಿಣ ಆಫ್ರಿಕಾ: 431

ಅ.05ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ; 
  

click me!