ಕುಸಿದ ಟೀಂ ಇಂಡಿಯಾಗೆ ರಾಯುಡು-ಶಂಕರ್ ಆಸರೆ!

By Web DeskFirst Published Feb 3, 2019, 9:41 AM IST
Highlights

3 ಬದಲಾವಣೆಯೊಂದಿಗೆ ನ್ಯೂಜಿಲೆಂಡ್ ವಿರುದ್ದದ ಅಂತಿಮ ಏಕದಿನ ಪಂದ್ಯದಲ್ಲಿ ಕಣಕ್ಕಿಳಿದ ಟೀಂ ಇಂಡಿಯಾ ಆರಂಭದಲ್ಲೇ 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಆದರೆ ಅಂಬಾಟಿ ರಾಯುಡು ಹಾಗೂ ವಿಜಯ್ ಶಂಕರ್ ಹೋರಾಟದಿಂದ ಭಾರತ ಚೇತರಿಸಿಕೊಂಡಿದೆ.

ವೆಲ್ಲಿಂಗ್ಟನ್(ಫೆ.03): ನ್ಯೂಜಿಲೆಂಡ್ ವಿರುದ್ದದ 5ನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಆರಂಭಿಕ ಆಘಾತದಿಂದ ಚೇತರಿಸಿಕೊಂಡಿದೆ. ಟ್ರೆಂಟ್ ಬೋಲ್ಟ್ ಹಾಗೂ ಮ್ಯಾಟ್ ಹೆನ್ರಿ ದಾಳಿಗೆ ತತ್ತರಿಸಿದ ಭಾರತ 18 ರನ್‌ಗಳಿಗೆ 4 ವಿಕೆಟ್ ಕಳೆದುಕೊಂಡು ಸಂಕಷ್ಟ ಅನುಭವಿಸಿತ್ತು. ಆದರೆ ಅಂಬಾಟಿ ರಾಯುಡು ಹಾಗೂ ವಿಜಯ್ ಶಂಕರ್ ಹೋರಾಟದಿಂದ ಭಾರತ 100 ರನ್ ಗಡಿ ದಾಟಿತು.

ಇದನ್ನೂ ಓದಿ: 5ನೇ ಏಕದಿನ: ಟಾಸ್ ಗೆದ್ದ ಭಾರತ ಬ್ಯಾಟಿಂಗ್ ಆಯ್ಕೆ-ತಂಡದಲ್ಲಿ 3 ಬದಲಾವಣೆ!

ಟಾಸ್ ಗೆದ್ದು ಬ್ಯಾಟಿಂಗ್ ಇಳಿದ ಟೀಂ ಇಂಡಿಯಾ 8 ರನ್‌ಗಳಿಸುವಷ್ಟರಲ್ಲೇ ನಾಯಕ ರೋಹಿತ್ ಶರ್ಮಾ ವಿಕೆಟ್ ಕಳೆದುಕೊಂಡಿತು. ರೋಹಿತ್ 2 ರನ್ ಸಿಡಿಸಿ ಔಟಾದರೆ, ಶಿಖರ್ ಧವನ್ 6 ರನ್ ಸಿಡಿಸಿ ವಿಕೆಟ್ ಕೈಚೆಲಿಲ್ಲಿದರು. ಈ ಮೂಲಕ ಸತತ 2ನೇ ಹಾರಿ ಆರಂಭಿಕ ಜೋಡಿ ಅತ್ಯುಮತ್ತ ಜೊತೆಯಾಟ ನೀಡುವಲ್ಲಿ ವಿಫಲವಾಯಿತು.

ಇದನ್ನೂ ಓದಿ: ಐಪಿಎಲ್ ತಂಡದ ಆಟಗಾರರ ಒಟ್ಟು ವೇತನ-ಯಾವ ತಂಡಕ್ಕೆ ಮೊದಲ ಸ್ಥಾನ?

ಚೊಚ್ಚಲ ಪಂದ್ಯದಲ್ಲಿ ನಿರಾಸೆ ಅನುಭವಿಸಿದ ಶುಭ್‌ಮಾನ್ ಗಿಲ್ , 2ನೇ ಪಂದ್ಯದಲ್ಲೂ ಭರವಸೆ ಮೂಡಿಸಲಿಲ್ಲ. ಇಂಜುರಿಯಿಂದ ಕಮ್‌ಬ್ಯಾಕ್ ಮಾಡಿದ ಎಂ.ಎಸ್.ಧೋನಿ ಕೇವಲ 1 ರನ್ ಸಿಡಿಸಿ ಔಟಾದರು. 18 ರನ್‌ಗೆ 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ ಭಾರತಕ್ಕೆ ಅಂಬಾಟಿ ರಾಯುಡು ಹಾಗೂ ವಿಜಯ್ ಶಂಕರ್ ಜವಾಬ್ದಾರಿಯುತ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಈ ಮೂಲಕ ಭಾರತ 100 ರನ್ ಗಡಿ ದಾಟಿತು. ವಿಜಯ್ ಶಂಕರ್ 45 ರನ್ ಸಿಡಿಸಿ ರನೌಟ್‌ಗೆ ಬಲಿಯಾದರು. ಈ ಮೂಲಕ ಭಾರತ 116 ರನ್‌ಗಳಿಗೆ 5 ವಿಕೆಟ್ ಕಳೆದುಕೊಂಡಿತು.

click me!