ಎರಡೇ ದಿನದಲ್ಲಿ ವಿರುಷ್ಕಾ ಫೋಟೋಗೆ 35 ಲಕ್ಷ ಲೈಕ್!

By Web Desk  |  First Published Feb 3, 2019, 8:25 AM IST

ವಿರುಷ್ಕಾ ಜೋಡಿಯ ಜಾಲಿ ಟ್ರಿಪ್ ಫೋಟೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ದಾಖಲೆ ಬರೆದಿದೆ. 2ದಿನದಲ್ಲಿ 35 ಲಕ್ಷ ಮಂದಿ ಫೋಟೋ ಲೈಕ್ ಮಾಡಿದ್ದಾರೆ. ಕೊಹ್ಲಿ ಹಾಗೂ ಅನುಷ್ಕಾ ಫೋಟೋ ಮೋಡಿ ಇಲ್ಲಿದೆ.


ಮುಂಬೈ(ಫೆ.03): ನ್ಯೂಜಿಲೆಂಡ್ ವಿರುದ್ದದ ಅಂತಿಮ 2 ಏಕದಿನ ಹಾಗೂ ಟಿ20 ಸರಣಿಯಿಂದ ವಿಶ್ರಾಂತಿ ಪಡೆದಿರುವ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಇದೀಗ ಜಾಲಿ ಮೂಡ್‌ನಲ್ಲಿದ್ದಾರೆ. ಪತ್ನಿ, ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಜೊತೆ ವಿದೇಶದಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. '

ಇದನ್ನೂ ಓದಿ: ವಿಶ್ವಕಪ್ 2019: ಸೆಮಿಫೈನಲ್‌ ಪ್ರವೇಶಿಸಬಲ್ಲ ಬಲಿಷ್ಠ 4 ತಂಡಗಳು ಯಾವುವು?

Tap to resize

Latest Videos

undefined

ತಮ್ಮ ಜಾಲಿ ಟ್ರಿಪ್‌ನಲ್ಲಿ ವಿರಾಟ್ ಕೊಹ್ಲಿ ಫೋಟೋ ಒಂದನ್ನ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಪ್ರಕೃತಿಯ ಸುಂದರ ತಾಣದಲ್ಲಿ ಕೊಹ್ಲಿ ಹಾಗೂ ಅನುಷ್ಕಾ ಜೋಡಿಯ ಫೋಟೋ ಕೇವಲ ಎರಡೇ ದಿನದಲ್ಲಿ 35 ಲಕ್ಷ ಮಂದಿ ಲೈಕ್ ಮಾಡಿದ್ದಾರೆ.

 

 
 
 
 
 
 
 
 
 
 
 
 
 

♥️

A post shared by Virat Kohli (@virat.kohli) on Feb 1, 2019 at 3:40am PST

 

ಇದನ್ನೂ ಓದಿ: ಐಪಿಎಲ್ 2019: ಇಲ್ಲಿದೆ RCB ತಂಡದ ಬೆಸ್ಟ್ ಪ್ಲೇಯಿಂಗ್ ಇಲೆವೆನ್ !

ನಾಯಕ ವಿರಾಟ್ ಕೊಹ್ಲಿ ಫೋಟೋಗಳು ಪ್ರತಿ ಭಾರಿ ಗರಿಷ್ಠ ಲೈಕ್ ಪಡೆದಿದೆ. ಇದೀಗ 2 ದಿನದಲ್ಲಿ 35 ಲಕ್ಷ ಮಂದಿ ಲೈಕ್ ಮಾಡೋ ಮೂಲಕ ದಾಖಲೆ ಬರೆದಿದೆ.  ನ್ಯೂಜಿಲೆಂಡ್ ಪ್ರವಾಸದಿಂದ ವಿಶ್ರಾಂತಿ ಪಡೆದಿರುವ ಕೊಹ್ಲಿ, ತವರಿನಲ್ಲಿ ನಡೆಯಲಿರುವ ಆಸ್ಟ್ರೇಲಿಯಾ ವಿರುದ್ಧದ ಸರಣಿಗೆ ತಂಡ ಸೇರಿಕೊಳ್ಳಲಿದ್ದಾರೆ. 

click me!