ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಗೆ ಬೆನ್ನು ನೋವಿನ ಸಮಸ್ಯೆ ಕಾಣಿಸಿಕೊಂಡಿದೆ. ಸುದ್ದಿಗೋಷ್ಠಿಯಲ್ಲಿ ತಮ್ಮ ಬೆನ್ನು ನೋವಿನ ಕುರಿತು ಆಘಾತಕಾರಿ ಅಂಶ ಬಹಿರಂಗ ಪಡಿಸಿದ್ದಾರೆ.
ಸಿಡ್ನಿ(ಜ.02): ಆಸ್ಟ್ರೇಲಿಯಾ ವಿರುದ್ದದ ಸಿಡ್ನಿ ಟೆಸ್ಟ್ ಪಂದ್ಯಕ್ಕೆ ಟೀಂ ಇಂಡಿಯಾ ಅಂತಿಮ ಕಸರತ್ತು ನಡೆಸುತ್ತಿದೆ. ನಾಳೆಯಿಂದ(ಜ.03) 4ನೇ ಟೆಸ್ಟ್ ಪಂದ್ಯ ಆರಂಭವಾಗಲಿದೆ. ಪಂದ್ಯಕ್ಕೂ ಮುನ್ನ ನಡೆದ ಸುದ್ದಿಗೋಷ್ಠಿಯಲ್ಲಿ ವಿರಾಟ್ ಕೊಹ್ಲಿ ಅಘಾತಕಾರಿ ವಿಚಾರ ಬಹಿರಂಗ ಪಡಿಸಿದ್ದಾರೆ.
ಇದನ್ನೂ ಓದಿ: ಮತ್ತೆ ಟೀಂ ಇಂಡಿಯಾ ಜೊತೆ ಅನುಷ್ಕಾ ಶರ್ಮಾ- ಫೋಟೋ ವೈರಲ್!
ಮೆಲ್ಬರ್ನ್ ಟೆಸ್ಟ್ ಪಂದ್ಯದ 2 ದಿನದಾಟದಲ್ಲಿ ಕೊಹ್ಲಿ, ಬೆನ್ನು ನೋವು ಸಮಸ್ಯೆ ಎದುರಿಸಿದ್ದರು. ದಿನದಾಟದ ಬಳಿಕ ಕೊಹ್ಲಿಗೆ ಫಿಸಿಯೋ ಸೂಕ್ತ ಚಿಕಿತ್ಸೆ ನೀಡಿದ್ದರು. ಬೆನ್ನು ನೋವು ಕುರಿತು ಸುದ್ದಿಗೋಷ್ಠಿಯಲ್ಲಿನ ಪ್ರಶ್ನೆ ಕೊಹ್ಲಿ, 2011ರಿಂದಲೇ ಬೆನ್ನು ನೋವಿನ ಸಮಸ್ಯೆ ಇದೆ. ನೋವಿನಲ್ಲೇ ಆಡಿದ್ದೇನೆ. ಸದ್ಯ ಸಮಸ್ಯೆ ಗಂಭೀರವಾಗಿಲ್ಲ ಎಂದಿದ್ದಾರೆ.
ಇದನ್ನೂ ಓದಿ: 140 ಸೆಕೆಂಡ್‌ನಲ್ಲಿ 63 ಕೋಟಿ ಗೆದ್ದ ಫ್ಲಾಯ್ಡ್ ಮೇವೆದರ್
ಫಿಸಿಯೋ ತಂಡದಿಂದ ನನ್ನ ಬೆನ್ನು ನೋವಿನ ಸಮಸ್ಯೆಗೆ ಪರಿಹಾರ ಸಿಕ್ಕಿದೆ. ಆದರೆ ಪಂದದ್ಯದಲ್ಲಿ ಮತ್ತೆ ಮತ್ತೆ ನೋವು ಕಾಣಿಸಿಕೊಳ್ಳುತ್ತಿದೆ ಎಂದು ಕೊಹ್ಲಿ ಹೇಳಿದ್ದಾರೆ. ಮೂರು ಮಾದರಿಯಲ್ಲಿ ಶ್ರೇಷ್ಠ ಬ್ಯಾಟ್ಸ್‌ಮನ್ ಆಗಿರುವ ಕೊಹ್ಲಿ, ಇದೀಗ ಸಿಡ್ನಿ ಟೆಸ್ಟ್ ಪಂದ್ಯದಲ್ಲಿ ಗೆಲುವು ಸಾಧಿಸಿ ಆಸ್ಟ್ರೇಲಿಯಾ ವಿರುದ್ದ ಸರಣಿ ಗೆಲುವಿನ ಲೆಕ್ಕಾಚಾರದಲ್ಲಿದ್ದಾರೆ.