ಮತ್ತೆ ಟೀಂ ಇಂಡಿಯಾ ಜೊತೆ ಅನುಷ್ಕಾ ಶರ್ಮಾ- ಫೋಟೋ ವೈರಲ್!

Published : Jan 02, 2019, 10:34 AM ISTUpdated : Jan 02, 2019, 10:35 AM IST
ಮತ್ತೆ ಟೀಂ ಇಂಡಿಯಾ ಜೊತೆ ಅನುಷ್ಕಾ ಶರ್ಮಾ- ಫೋಟೋ ವೈರಲ್!

ಸಾರಾಂಶ

ಟೀಂ ಇಂಡಿಯಾದ ಪ್ರತಿ ಪ್ರವಾಸದಂತೆ ಇದೀಗ ಆಸ್ಟ್ರೇಲಿಯಾ ಪ್ರವಾಸದಲ್ಲೂ ಅನುಷ್ಕಾ ಫೋಟೋ ವೈರಲ್ ಆಗಿದೆ. ಹೊಸ ವರ್ಷಕ್ಕೆ ಟೀಂ ಇಂಡಿಯಾ ಆಸ್ಟ್ರೇಲಿಯಾ ಪ್ರಧಾನಿ ಭೇಟಿಯಾಗಿತ್ತು. ಆದರೆ ಈ ವೇಳೆ ಅನುಷ್ಕಾ ಶರ್ಮಾ ಫೋಟೋ ವೈರಲ್ ಆಗಿದೆ. 

ಸಿಡ್ನಿ(ಜ.02): ಮೆಲ್ಬರ್ನ್ ಟೆಸ್ಟ್ ಪಂದ್ಯದ ಗೆಲುವಿನ ಬಳಿಕ ರಿಲಾಕ್ಸ್ ಮೂಡ್‌ಗೆ ಜಾರಿದ್ದ ಟೀಂ ಇಂಡಿಯಾ ಹೊಸ ವರ್ಷದಂದು ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್ ಮಾರಿಸನ್ ಭೇಟಿ ಮಾಡಿದ್ದಾರೆ. ಹೊಸ ವರ್ಷದ ಪ್ರಯುಕ್ತ ಟೀಂ ಇಂಡಿಯಾ ಹಾಗೂ ಆಸ್ಟ್ರೇಲಿಯಾ ತಂಡವನ್ನ ಪ್ರಧಾನಿ ಮಾರಿಸನ್ ಆಹ್ವಾನಿಸಿದ್ದರು. ಆದರೆ ಈ ಭೇಟಿಯಲ್ಲಿ ನಾಯಕ ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ಫೋಟೋ ವೈರಲ್ ಆಗಿದೆ.

ಇದನ್ನೂ ಓದಿ: ಆಸ್ಟ್ರೇಲಿಯಾ ಪ್ರಧಾನಿ ಮಾರಿಸನ್ ಭೇಟಿ ಮಾಡಿದ ಕೊಹ್ಲಿ ಬಾಯ್ಸ್!

ಟೀಂ ಇಂಡಿಯಾ ಕ್ರಿಕೆಟಿಗರನ್ನ ಹಸ್ತಲಾಘವದ ಜೊತೆಗೆ ಆಸ್ಟ್ರೇಲಿಯಾ ಪ್ರಧಾನಿ ಸ್ವಾಗತಿಸಿದರು. ಈ ಸಂದರ್ಭದಲ್ಲಿ ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ, ಆಸಿಸ್ ಪ್ರಧಾನಿ ಪತ್ನಿ ಜೊತೆಗಿನ ಫೋಟೋ ಇದೀಗ ವೈರಲ್ ಆಗಿದೆ.  

ಇದನ್ನೂ ಓದಿ: ಹೈಕಮಿಶನ್ ಕಚೇರಿಗೆ ಟೀಂ ಇಂಡಿಯಾ ಜೊತೆ ಅನುಷ್ಕಾ ಶರ್ಮಾ ಹೋಗಿದ್ದೇಕೆ?

ಟೀಂ ಇಂಡಿಯಾ ಕ್ರಿಕೆಟಿಗರ ಪ್ರವಾಸದಲ್ಲಿ ಅನುಷ್ಕಾ ಫೋಟೋ ವೈರಲ್ ಆಗುತ್ತಿರುವುದು ಇದೇ ಮೊದಲಲ್ಲ. ಇಂಗ್ಲೆಂಡ್ ಪ್ರವಾಸದಲ್ಲಿ ಟೀಂ ಇಂಡಿಯಾ ಭಾರತೀಯ ಹೈಕಮೀಶನ್ ಕಚೇರಿಗೆ ಭೇಟಿ ನೀಡಿತ್ತು. ಈ ವೇಳೆ ನಾಯಕ ಕೊಹ್ಲಿ ಜೊತೆ ಅನುಷ್ಕಾ ಕೂಡ ತೆರಳಿದ್ದರು. ಇದು ಭಾರಿ ವಿವಾದಕ್ಕೆ ಕಾರಣವಾಗಿತ್ತು. ಇದಕ್ಕೆ ಬಿಸಿಸಿಐಗೂ ಕೂಡ ಸ್ಪಷ್ಟನೆ ನೀಡಿತು.

ಇದನ್ನೂ ಓದಿ: ಟೀಂ ಇಂಡಿಯಾ ಜೊತೆಗಿನ ಫೋಟೋ ವಿವಾದ-ಮೌನ ಮುರಿದ ಅನುಷ್ಕಾ

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

2026: ವಿಶ್ವ ಕಿರೀಟ ಉಳಿಸಿಕೊಳ್ಳೋರು ಯಾರು? ಟೀಂ ಇಂಡಿಯಾ ಮುಂದಿದೆ ಬೆಟ್ಟದಂತ ಸವಾಲು
ಆರ್‌ಸಿಬಿ ಅಂಗಳದಲ್ಲಿ ಕರುನಾಡಿನ ನಂದಿನಿ ಎಂಟ್ರಿ? ಕೆಎಂಎಫ್‌ನ ಹೊಸ ಲೆಕ್ಕಾಚಾರ ಏನು?