ಮೆಲ್ಬರ್ನ್‌ನಲ್ಲಿ ಬುಮ್ರಾ ಮ್ಯಾಜಿಕ್- 346 ರನ್ ಮುನ್ನಡೆಯಲ್ಲಿ ಕೊಹ್ಲಿ ಬಾಯ್ಸ್!

By Web Desk  |  First Published Dec 28, 2018, 1:12 PM IST

ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಬಿಗಿ ಹಿಡಿತ ಸಾಧಿಸಿದೆ. ಮೊದಲೆರೆಡು ದಿನ ಬ್ಯಾಟಿಂಗ್‌ನಲ್ಲಿ ಅಬ್ಬರಿಸಿದ ಟೀಂ ಇಂಡಿಯಾ 3ನೇ ದಿನದಾಟದಲ್ಲಿ ಬೌಲಿಂಗ್‌ನಲ್ಲಿ ಮಿಂಚಿತು. ಜಸ್ಪ್ರೀತ್ ಬುಮ್ರಾ ದಾಳಿಗೆ ನಲುಗಿದ ಆಸಿಸ್ ಅಲ್ಪಮೊತ್ತಕ್ಕೆ ಆಲೌಟ್ ಆಯಿತು. ಇಲ್ಲಿದೆ 3ನೇ ದಿನದಾಟದ ಹೈಲೈಟ್ಸ್.
 


ಮೆಲ್ಬರ್ನ್(ಡಿ.28): ಆಸ್ಟ್ರೇಲಿಯಾ ವಿರುದ್ಧದ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದ ತೃತೀಯ ದಿನ ಭಾರತ ಭರ್ಜರಿ ಮೇಲುಗೈ ಸಾಧಿಸಿದೆ. ವೇಗಿ ಜಸ್ಪ್ರೀತ್ ಬುಮ್ರಾ ಮ್ಯಾಜಿಕ್‌ನಿಂದ ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್‌ನಲ್ಲಿ ಕೇವಲ 151 ರನ್‌ಗೆ ಆಲೌಟ್ ಆದರೆ, ಭಾರತ ದ್ವಿತೀಯ  ಇನ್ನಿಂಗ್ಸ್‌ನಲ್ಲಿ 5 ವಿಕೆಟ್ ನಷ್ಟಕ್ಕೆ 54 ರನ್ ಸಿಡಿಸಿದೆ. ಈ ಮೂಲಕ 346 ರನ್ ಮುನ್ನಡೆ ಸಾಧಿಸಿದೆ.

Tap to resize

Latest Videos

ಇದನ್ನೂ ಓದಿ: ವಿವ್ ರಿಚರ್ಡ್ಸ್ ಆಟ ನೆನಪಿಸಿದ ವಿರಾಟ್ ಕೊಹ್ಲಿ-ದಿಗ್ಗಜನಿಂದ ಶ್ಲಾಘನೆ!

ವಿಕೆಟ್ ನಷ್ಟವಿಲ್ಲದೆ 8 ರನ್‌ಗಳೊಂದಿಗೆ 3ನೇ ದಿನದಾಟ ಆರಂಭಿಸಿದ ಆಸ್ಟ್ರೇಲಿಯಾಗೆ ಬುಮ್ರಾ ಶಾಕ್ ನೀಡಿದರು. ಮಾರ್ಕಸ್ ಹ್ಯಾರಿಸ್, ಶಾನ್ ಮಾರ್ಶ್, ಟ್ರಾವಿಸ್ ಹೆಡ್, ನಾಯಕ ಟಿಮ್ ಪೈನೆ, ನಥನ್ ಲಿಯೊನ್ ಹಾಗೂ ಜೋಶ್ ಹೇಜಲ್‌ವುಡ್ ಸೇರಿದಂತೆ ಪ್ರಮುಖ 6 ವಿಕೆಟ್ ಕಬಳಿಸಿದ ಬುುಮ್ರಾ ಭಾರತಕ್ಕೆ ಭರ್ಜರಿ ಮೇಲುಗೈ ತಂದುಕೊಟ್ಟರು.

ಇದನ್ನೂ ಓದಿ: ಬುಮ್ರಾ-ಜಡ್ಡು ದಾಳಿಗೆ ತತ್ತರಿಸಿದ ಆಸಿಸ್

ಬುಮ್ರಾಗೆ ರವೀಂದ್ರ ಜಡೇಜಾ  ಕೂಡ ಉತ್ತಮ ಸಾಥ್ ನೀಡಿದರು. ಜಡೇಜಾ 2 ವಿಕೆಟ್ ಕಬಳಿಸಿದರೆ, ಇಶಾಂತ್ ಶರ್ಮಾ ಹಾಗೂ ಮೊಹಮ್ಮದ್ ಶಮಿ ತಲಾ 1 ವಿಕೆಟ್ ಉರುಳಿಸಿದರು. ಈ ಮೂಲಕ ಆಸ್ಟ್ರೇಲಿಯಾ ಕೇವಲ 66.5 ಓವರ್‌ಗಳಲ್ಲಿ 151 ರನ್‌ಗೆ ಆಲೌಟ್ ಆಯಿತು. ಈ ಮೂಲಕ ಟೀಂ ಇಂಡಿಯಾ 292 ರನ್ ಬೃಹತ್ ಮುನ್ನಡೆ ಪಡೆಯಿತು.

ಇದನ್ನೂ ಓದಿ: ರೋಹಿತ್‌ ಸಿಕ್ಸ್‌ ಬಾರಿಸಿದ್ರೆ ಮುಂಬೈಗೆ ಬೆಂಬಲ: ಪೈನ್‌

ಫಾಲೋ ಆನ್ ಹೇರೋ ಅವಕಾಶ ನಾಯಕ ವಿರಾಟ್ ಕೊಹ್ಲಿಗಿತ್ತು. ಆದರೆ ಆಸಿಸ್‌ಗೆ ಫಾಲೋ-ಆನ್ ಹೇರದ ಕೊಹ್ಲಿ, ಎರಡನೇ ಇನ್ನಿಂಗ್ಸ್ ಆರಂಭಿಸಲು ನಿರ್ಧರಿಸಿದರು. ಆದರೆ ದ್ವಿತೀಯ ಇನ್ನಿಂಗ್ಸ್‌ನಲ್ಲಿ ಕೊಹ್ಲಿ ಲೆಕ್ಕಾಚಾರ ವರ್ಕೌಟ್ ಆಗಲಿಲಿಲ್ಲ. ಹನುಮಾ ವಿಹಾರಿ 13 ರನ್ ಸಿಡಿಸಿ ಔಟಾದರೆ, ನಾಯಕ ವಿರಾಟ್ ಕೊಹ್ಲಿ, ಚೇತೇಶ್ವರ್ ಪೂಜಾರ,  ಅಜಿಂಕ್ಯ ರಹಾನೆ ಹಾಗೂ ರೋಹಿತ್ ಶರ್ಮಾ ಎರಂಡಕೆ ತಲುಪಲಿಲ್ಲ.

ಇದನ್ನೂ ಓದಿ: ಮೆಲ್ಬರ್ನ್‌ನಲ್ಲಿ ಮಯಾಂಕ್ ಅಬ್ಬರ-ಕೆಎಲ್ ರಾಹುಲ್ ಟ್ವೀಟ್ ಮೂಲಕ ಹೇಳಿದ್ದೇನು?

ಕನ್ನಡಿಗ ಮಯಾಂಕ್ ಅಗರ್ವಾಲ್ ಅಜೇಯ 28  ಹಾಗೂ ರಿಷಬ್ ಪಂತ್ 6 ರನ್ ಸಿಡಿಸಿ ಕ್ರೀಸ್ ಕಾಯ್ದುಕೊಂಡಿದ್ದಾರೆ. ಭಾರತ ದಿನದಾಟದ ಅಂತ್ಯಕ್ಕೆ 5 ವಿಕೆಟ್ ನಷ್ಟಕ್ಕೆ 54 ರನ್ ಸಿಡಿಸಿದೆ. ಈ ಮೂಲಕ ಒಟ್ಟು 346 ರನ್ ಮುನ್ನಡೆ ಪಡೆದುಕೊಂಡು ಸುಸ್ಥಿತಿಯಲ್ಲಿದೆ.

click me!