ಭಾರತ ವಿರುದ್ಧದ ಅಂತಿಮ 2 ಟೆಸ್ಟ್ ಪಂದ್ಯಕ್ಕೆ ಆಸ್ಟ್ರೇಲಿಯಾ ತಂಡ ಪ್ರಕಟ!

By Web Desk  |  First Published Dec 18, 2018, 1:44 PM IST

ಭಾರತ ವಿರುದ್ದದ ಅಂತಿಮ 2 ಟೆಸ್ಟ್ ಪಂದ್ಯಕ್ಕೆ ಆಸ್ಟ್ರೇಲಿಯಾ ತಂಡವನ್ನ ಪ್ರಕಟಿಸಲಾಗಿದೆ. ಪರ್ತ್ ಗೆಲುವಿನ ಬೆನ್ನಲ್ಲೇ ಆಸಿಸ್ ತಂಡದಲ್ಲಿ ಸ್ಥಾನ ಪಡೆದ ಕ್ರಿಕೆಟಿಗರು ಯಾರು? ಇಲ್ಲಿದೆ ವಿವರ.


ಪರ್ತ್(ಡಿ.18): ಭಾರತ ವಿರುದ್ದದ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ 146 ರನ್ ಭರ್ಜರಿ ಗೆಲುವು ದಾಖಲಿಸಿದ ಆಸ್ಟ್ರೇಲಿಯಾ ಸರಣಿಯನ್ನ 1-1 ಅಂತರದಲ್ಲಿ ಸಮಬಗೊಳಿಸಿದೆ. ಇದರ ಬೆನ್ನಲ್ಲೇ 3 ಮತ್ತು 4ನೇ ಟೆಸ್ಟ್ ಪಂದ್ಯಕ್ಕೆ ಕ್ರಿಕೆಟ್ ಆಸ್ಟ್ರೇಲಿಯಾ ಆಯ್ಕೆ ಸಮಿತಿ ತಂಡ ಪ್ರಕಟಿಸಿದೆ. 

 

BREAKING: Australia announce an unchanged 13-man squad for the remaining two Tests against India

— cricket.com.au (@cricketcomau)

Tap to resize

Latest Videos

 

ಆರಂಭಿಕ 2 ಟೆಸ್ಟ್ ಪಂದ್ಯಕ್ಕೆ ಆಯ್ಕೆ ಮಾಡಿದ ತಂಡವನ್ನೇ ಅಂತಿಮ 2 ಪಂದ್ಯಕ್ಕೆ ಆಯ್ಕೆ ಮಾಡಿದೆ. ಈ ಮೂಲಕ ತಂಡದಲ್ಲಿ ಯಾವುದೇ ಬದಲಾವಣೆಗೆ ಕ್ರಿಕೆಟ್ ಆಸ್ಟ್ರೇಲಿಯಾ ಮುಂದಾಗಿಲ್ಲ. ಈಗಾಗಲೇ ಆಸಿಸ್ ಗೆಲುವಿನ ಲಯಕ್ಕೆ ಬಂದಿದ್ದು, ಅದೇ ವಿನ್ನಿಂಗ್ಸ್ ಕಾಂಬಿನೇಷನ್ ಮುಂದುವರಿಸಿದೆ.

ಇದನ್ನೂ ಓದಿ: ಪಿಎಲ್ ಹರಾಜಿಗೂ ಮೊದಲೇ ಮುಂಬೈ ಪಾಲಾದ ಜಹೀರ್ ಖಾನ್!

ಅಂತಿಮ 2 ಟೆಸ್ಟ್ ಪಂದ್ಯಕ್ಕೆ ಆಸ್ಟ್ರೇಲಿಯಾ ತಂಡ: 
ಟಿಮ್ ಪೈನೆ(ನಾಯಕ), ಮಿಶೆಲ್ ಮಾರ್ಶ್, ಜೋಶ್ ಹೆಜಲ್‌ವುಡ್, ಪ್ಯಾಟ್ ಕಮಿನ್ಸ್, ಆ್ಯರೋನ್ ಫಿಂಚ್, ಪೀಟರ್ ಹ್ಯಾಂಡ್ಸ್‌ಕಾಂಬ್, ಮಾರ್ಕಸ್ ಹ್ಯಾರಿಸ್, ಟ್ರಾವಿಸ್ ಹೆಡ್, ಉಸ್ಮಾನ್ ಖವಾಜ, ನಥನ್ ಲಿಯೋನ್, ಶಾನ್ ಮಾರ್ಶ್, ಫೀಟರ್ ಸಿಡಲ್, ಮಿಚೆಲ್ ಸ್ಟಾರ್ಕ್ಟ, ಕ್ರಿಸ್ ಟ್ರೆಮೈನ್

ಇದನ್ನೂ ಓದಿ: ಐಪಿಎಲ್ ಆಟಗಾರರ ಹರಾಜು; ವಿದೇಶಿ ಆಟಗಾರರ ಮೇಲೆ ಎಲ್ಲರ ಚಿತ್ತ

click me!