ಐಪಿಎಲ್ ಟೂರ್ನಿ ಹರಾಜಿಗೆ ಕ್ಷಣಗಣನೆ ಆರಂಭಗೊಂಡಿದೆ. ಕೆಲ ಹೊತ್ತಲ್ಲೇ ಹರಾಜು ನಡೆಯಲಿದೆ. ಆದರೆ ಹರಾಜಿಗೂ ಮೊದಲೇ ಟೀಂ ಇಂಡಿಯಾ ಮಾಜಿ ವೇಗಿ ಜಹೀರ್ ಖಾನ್ ಮುಂಬೈ ಇಂಡಿಯನ್ಸ್ ತಂಡದ ಪಾಲಾಗಿದ್ದಾರೆ.
ಮುಂಬೈ(ಡಿ.18): ಐಪಿಎಲ್ ಹರಾಜಿಗೆ ಕೆಲ ಗಂಟೆಗಳು ಮಾತ್ರ ಬಾಕಿ. 8 ಫ್ರಾಂಚೈಸಿಗಳು ಆಟಗಾರರ ಖರೀದಿಗೆ ಸಜ್ಜಾಗಿದೆ. ಆದರೆ ಹರಾಜಿಗೂ ಮೊದಲೇ ಟೀಂ ಇಂಡಿಯಾ ಮಾಜಿ ವೇಗಿ ಜಹೀರ್ ಖಾನ್, ಮುಂಬೈ ಇಂಡಿಯನ್ಸ್ ತಂಡದ ಪಾಲಾಗಿದ್ದಾರೆ. ಮುಂಬೈ ತಂಡದಲ್ಲಿ ಜಹೀರ್ ಡೈರೆಕ್ಟರ್ ಆಫ್ ಕ್ರಿಕೆಟ್ ಆಪರೇಶನ್ ಜವಾಬ್ದಾರಿಯನ್ನ ಜಹೀರ್ ನಿರ್ವಹಿಸಲಿದ್ದಾರೆ.
Welcome back home, 💙
📰 Read more before you see our Director of Cricket Operations at today's ➡ https://t.co/IlcflBPTRU pic.twitter.com/H6LDQUrtIN
ಡೆಲ್ಲಿ ಡೇರ್‌ಡೆವಿಲ್ಸ್ ತಂಡದ ನಾಯಕ ಹಾಗೂ ಮೆಂಟರ್ ಆಗಿದ್ದ ಜಹೀರ್ ಖಾನ್ 2018ರಲ್ಲಿ ವೀಕ್ಷಕ ವಿವರಣೆಗಾರನಾಗಿ ಕಾರ್ಯನಿರ್ವಹಿಸಿದ್ದರು. ಇದೀಗ ಮುಂಬೈ ಇಂಡಿಯನ್ಸ್ ತಂಡದ ಸ್ಟಾಫ್ ಆಗಿ ನೇಮಕಗೊಂಡಿದ್ದಾರೆ. ಈ ಮೂಲಕ ಸಚಿನ್ ತೆಂಡೂಲ್ಕರ್, ಮಹೇಲಾ ಜಯವರ್ದನೆ, ಶೇನ್ ಬಾನ್, ರಾಬಿನ್ ಸಿಂಗ್ ಜೊತೆ ಇದೀಗ ಜಹೀರ್ ಖಾನ್ ಕೂಡ ಸೇರಿಕೊಂಡಿದ್ದಾರೆ.
ಇದನ್ನೂ ಓದಿ: ಐಪಿಎಲ್ ಆಟಗಾರರ ಹರಾಜು; ವಿದೇಶಿ ಆಟಗಾರರ ಮೇಲೆ ಎಲ್ಲರ ಚಿತ್ತ
ಹರಾಜಿಗೂ ಮೊದಲೇ ಮುಂಬೈ ಇಂಡಿಯನ್ಸ್ ಸೇರಿಕೊಂಡ ಜಹೀರ್ ಖಾನ್ ಇನ್ನು ಕೆಲ ಹೊತ್ತಲ್ಲೇ ನಡೆಯಲಿರುವ ಐಪಿಎಲ್ ಹರಾಜಿನಲ್ಲಿ ಮುಂಬೈ ಪರ ಆಟಗಾರರನ್ನ ಖರೀದಿಸಲಿದ್ದಾರೆ. ಮುಂಬೈ ಇಂಡಿಯನ್ಸ್ ಈ ಹರಾಜಿನಲ್ಲಿ 7 ಆಟಗಾರರನ್ನ ಖರೀದಿಸಲಿದೆ. ಮುಂಬೈ ಬಳಿ 11.5 ಕೋಟಿ ಬಾಕಿ ಉಳಿದಿದೆ.
ಇದನ್ನೂ ಓದಿ: ಪರ್ತ್ ಟೆಸ್ಟ್: ಆಸಿಸ್’ಗೆ ಶರಣಾದ ಟೀಂ ಇಂಡಿಯಾ