ರಣಜಿ ಟ್ರೋಫಿ: ಕರ್ನಾಟಕ-ಗುಜರಾತ್ ಪಂದ್ಯ ಡ್ರಾನಲ್ಲಿ ಅಂತ್ಯ

By Web DeskFirst Published Dec 18, 2018, 10:04 AM IST
Highlights

ಅಂತಿಮ ದಿನವಾದ ಸೋಮವಾರ 3 ವಿಕೆಟ್ ನಷ್ಟಕ್ಕೆ 187 ರನ್‌ಗಳಿಂದ 2ನೇ ಇನಿಂಗ್ಸ್ ಮುಂದುವರಿಸಿದ ಗುಜರಾತ್ 345 ರನ್'ಗಳಿಗೆ ಆಲೌಟ್ ಆಯಿತು. ಇದರೊಂದಿಗೆ 173 ರನ್‌ಗಳ ಜಯದ ಗುರಿ ಬೆನ್ನಟ್ಟಿದ ಕರ್ನಾಟಕಕ್ಕೆ ಮಯಾಂಕ್ ಸ್ಫೋಟಕ ಆರಂಭ ಒದಗಿಸಿದರು.

ಸೂರತ್: ಆತಿಥೇಯ ಗುಜರಾತ್ ವಿರುದ್ಧ ರಣಜಿ ಟ್ರೋಫಿ ‘ಎ’ ಗುಂಪಿನ ಪಂದ್ಯದಲ್ಲಿ ಕರ್ನಾಟಕ ತಂಡ ಡ್ರಾಗೆ ತೃಪ್ತಿ ಪಟ್ಟಿದೆ.

ಮೊದಲ ಇನಿಂಗ್ಸ್‌ನಲ್ಲಿ ಮುನ್ನಡೆ ಸಾಧಿಸಿದ್ದ ವಿನಯ್ ಪಡೆ 3 ಅಂಕ ಬಾಚಿಕೊಂಡರೆ, ಗುಜರಾತ್ 1 ಅಂಕಗಳಿಸಿದೆ. ಆಡಿರುವ 5 ಪಂದ್ಯಗಳಲ್ಲಿ ತಲಾ 1 ಗೆಲುವು, ಸೋಲು 3 ಡ್ರಾ ಸಹಿತ 15 ಅಂಕಗಳಿಸಿರುವ ಕರ್ನಾಟಕ ಪಟ್ಟಿಯಲ್ಲಿ 4ನೇ ಸ್ಥಾನ ಪಡೆದಿದೆ.

ಅಂತಿಮ ದಿನವಾದ ಸೋಮವಾರ 3 ವಿಕೆಟ್ ನಷ್ಟಕ್ಕೆ 187 ರನ್‌ಗಳಿಂದ 2ನೇ ಇನಿಂಗ್ಸ್ ಮುಂದುವರಿಸಿದ ಗುಜರಾತ್ 345 ರನ್'ಗಳಿಗೆ ಆಲೌಟ್ ಆಯಿತು. ಇದರೊಂದಿಗೆ 173 ರನ್‌ಗಳ ಜಯದ ಗುರಿ ಬೆನ್ನಟ್ಟಿದ ಕರ್ನಾಟಕಕ್ಕೆ ಮಯಾಂಕ್ ಸ್ಫೋಟಕ ಆರಂಭ ಒದಗಿಸಿದರು. 57 ಎಸೆತಗಳನ್ನು ಎದುರಿಸಿದ ಮಯಾಂಕ್ (53), ಸಮರ್ಥ್ (33) ರನ್ ಗಳಿಸಿದರು. ದೇವದತ್ ಶೂನ್ಯಕ್ಕೆ ನಿರ್ಗಮಿಸಿದರು. ಅಂತಿಮವಾಗಿ 4 ವಿಕೆಟ್‌ಗೆ 107 ರನ್‌ಗಳಿಸಿದ್ದಾಗ ಡ್ರಾ ಆಯಿತು.

ಸ್ಕೋರ್:

ಗುಜರಾತ್ 216 ಹಾಗೂ 345,
ಕರ್ನಾಟಕ 389 ಹಾಗೂ 107/4    
 

click me!