ಆಸ್ಟ್ರೇಲಿಯಾ ವಿರುದ್ಧದ ಸಿಡ್ನಿ ಟೆಸ್ಟ್ ಪಂದ್ಯದಲ್ಲಿ ರಿಷಬ್ ಪಂತ್ ಸ್ಫೋಟಕ ಬ್ಯಾಟಿಂಗ್ ಮೂಲಕ ಸೆಂಚುರಿ ದಾಖಲಿಸಿದ್ದಾರೆ. 2ನೇ ಟೆಸ್ಟ್ ಶತಕ ಸಿಡಿಸಿದ ರಿಷಬ್ ಪಂತ್ ಹಲವು ದಾಖಲೆ ಬರೆದಿದ್ದಾರೆ. ಇಷ್ಟೇ ಅಲ್ಲ ವಿಶ್ವದ ದಿಗ್ಗಜ ಕ್ರಿಕೆಟಿಗರು ದಾಖಲೆಗಳನ್ನೂ ಮುರಿದಿದ್ದಾರೆ.
ಸಿಡ್ನಿ(ಜ.04): ಆಸ್ಟ್ರೇಲಿಯಾ ವಿರುದ್ಧದ 4ನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಬ್ಯಾಟ್ಸ್‌ಮನ್‌ಗಳ ಭರ್ಜರಿ ಪ್ರದರ್ಶನದಿಂದ 622 ರನ್ ಸಿಡಿಸಿ ಡಿಕ್ಲೇರ್ ಮಾಡಿಕೊಂಡಿದೆ. ಚೇತೇಶ್ವರ್ ಪೂಜಾರ ಬಳಿಕ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ರಿಷಬ್ ಪಂತ್ ಭರ್ಜರಿ ಶತಕ ಸಿಡಿಸಿ ಮಿಂಚಿದರು. ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದ ರಿಷಬ್ ಪಂತ್ ಅಜೇಯ 159 ರನ್ ಸಿಡಿಸಿದರು. 15 ಬೌಂಡರಿ ಹಾಗೂ 1 ಸಿಕ್ಸರ್ ಮೂಲಕ ರಿಷಬ್ ಆಸಿಸ್ ನೆಲದಲ್ಲಿ ಹಲವು ದಾಖಲೆ ನಿರ್ಮಿಸಿದರು.
ಇದನ್ನೂ ಓದಿ: ಸಿಡ್ನಿ ಟೆಸ್ಟ್: ಎರಡನೇ ದಿನ ಭಾರತದ್ದೇ ದರ್ಬಾರ್
undefined
ಆಸ್ಟ್ರೇಲಿಯಾ ನೆಲದಲ್ಲಿ ಗರಿಷ್ಠ ರನ್ ಸಿಡಿಸಿದ ಭಾರತದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಅನ್ನೋ ದಾಖಲೆಗೆ ಪಂತ್ ಪಾತ್ರರಾಗಿದ್ದಾರೆ. 1967ರಲ್ಲಿ ಭಾರತದ ಫಾರೂಖ್ ಇಂಜಿನಿಯರ್ 89 ರನ್ ಸಿಡಿಸಿದರು. ಇದೀಗ ಪಂತ್ ಅಜೇಯ 159 ರನ್ ಸಿಡಿಸೋ ಮೂಲಕ ಹೊಸ ದಾಖಲೆ ನಿರ್ಮಿಸಿದ್ದಾರೆ.
ತವರಿನಾಚೆ ಗರಿಷ್ಠ ರನ್ ಸಿಡಿಸಿದ ಭಾರತದ ವಿಕೆಟ್ ಕೀಪರ್ ಅನ್ನೋ ದಾಖಲೆ ಕೂಡ ಪಂತ್ ಬರೆದಿದ್ದಾರೆ. ಪಂತ್ ಅಜೇಯ 159 ರನ್ ಸಿಡಿಸೋ ಮೊದಲು, ಎಂ.ಎಸ್ ಧೋನಿ ಪಾಕಿಸ್ತಾನ ವಿರುದ್ಧ ಫೈಸ್ಲಾಬಾದ್‌ನಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ 148 ರನ್ ಸಿಡಿಸಿದ್ದರು.
ಇದನ್ನೂ ಓದಿ:ಸಿಡ್ನಿ ಟೆಸ್ಟ್: ಪೂಜಾರ ದ್ವಿಶತಕ ಜಸ್ಟ್ ಮಿಸ್..!
ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾದಲ್ಲಿ ಶತಕ ಸಿಡಿಸಿದ 2ನೇ ಪ್ರವಾಸಿ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಅನ್ನೋ ಹೆಗ್ಗಳಿಕೆಗೆ ರಿಷಬ್ ಪಂತ್ ಪಾತ್ರರಾಗಿದ್ದಾರೆ. ಇದಕ್ಕೂ ಮೊದಲು ವೆಸ್ಟ್ಇಂಡೀಸ್‌ನ ಜೆಫ್ರೇ ಡುಜೊನ್ ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾದಲ್ಲಿ ಸೆಂಚುರಿ ಸಿಡಿಸಿದ್ದರು.
ಆಸ್ಟ್ರೇಲಿಯಾದಲ್ಲಿ ಗರಿಷ್ಠ ರನ್ ಸಿಡಿಸಿದ 2ನೇ ವಿಕೆಟ್ ಕೀಪರ್ ಅನ್ನೋ ಹೆಗ್ಗಳಿಕೆಗೆ ರಿಷಬ್ ಪಂತ್ ಪಾತ್ರರಾಗಿದ್ದಾರೆ. ಇದಕ್ಕೂ ಮೊದಲು 2012ರಲ್ಲಿ ಆಸ್ಟ್ರೇಲಿಯಾದಲ್ಲಿ ಸೌತ್ಆಫ್ರಿಕಾದ ಎಬಿ ಡಿವಿಲಿಯರ್ಸ್ 169 ರನ್ ಸಿಡಿಸಿದ್ದರು.
ಇದನ್ನೂ ಓದಿ:ಸಿಡ್ನಿ ಟೆಸ್ಟ್: ಆಸ್ಟ್ರೇಲಿಯಾ ತಂಡಕ್ಕೆ ಶಾಕ್ ನೀಡಿದ ಶೇನ್ ವಾರ್ನ್
ರಿಷಬ್ ಪಂತ್ ಟೆಸ್ಟ್ ಕ್ರಿಕೆಟ್‌ನಲ್ಲಿ 150ಕ್ಕೂ ಹೆಚ್ಚು ರನ್ ಸಿಡಿಸಿದ ಅತೀ ಕಿರಿಯ ವಿಕೆಟ್ ಕೀಪರ್ ಅನ್ನೋ ದಾಖಲೆ ಬರೆದಿದ್ದಾರೆ. ಪಂತ್ 21 ವರ್ಷ 91ನೇ ದಿನ ಅಜೇಯ 159 ರನ್ ಸಿಡಿಸಿದ್ದಾರೆ. ಇದಕ್ಕೂ ಮೊದಲು ಜಿಂಬಾಬ್ವೆಯ ತಾತೆಂಡಾ ಟೈಬು 21 ವರ್ಷ 245ದಿನಕ್ಕೆ ಬಾಂಗ್ಲಾದೇಶ ವಿರುದ್ಧ 153 ರನ್ ಸಿಡಿಸಿದ್ದರು.
ಏಷ್ಯಾಹೊರಗಡೆ ಗರಿಷ್ಠ ರನ್ ಸಿಡಿಸಿದ ಏಷ್ಯಾ ವಿಕೆಟ್ ಕೀಪರ್ ಪಟ್ಟಿಯಲ್ಲಿ ರಿಷಬ್ ಪಂತ್ ಅಗ್ರಸ್ಥಾನ ಹಂಚಿಕೊಂಡಿದ್ದಾರೆ. ಬಾಂಗ್ಲಾದೇಶದ ವಿಕೆಟ್ ಕೀಪರ್ ಮುಶ್ಫಿಕರ್ ರಹೀಮ್ ನ್ಯೂಜಿಲೆಂಡ್ ವಿರುದ್ಧ 159 ರನ್ ಸಿಡಿಸಿದ್ದಾರೆ. ಈ ಮೂಲಕ ಪಂತ್ ಹಾಗೂ ರಹೀಮ್ ಜಂಟಿಯಾಗಿ ಮೊದಲ ಸ್ಥಾನ ಹಂಚಿಕೊಂಡಿದ್ದಾರೆ.
ಪಂತ್ ವಿದೇಶಿ ಟೆಸ್ಟ್ ಸರಣಿಯಲ್ಲಿ ಗರಿಷ್ಠ ರನ್ ಸಿಡಿಸಿದ ಭಾರತೀಯ ವಿಕೆಟ್ ಕೀಪರ್ ಅನ್ನೋ ದಾಖಲೆ ಬರೆದಿದ್ದಾರೆ. ಪಂತ್ ಆಸಿಸ್ ವಿರುದ್ಧದ ಸರಣಿಯಲ್ಲಿ 350 ರನ್ ದಾಖಲಿಸಿದ್ದಾರೆ. ಇದಕ್ಕೂ ಮೊದಲು 2014ರ ಇಂಗ್ಲೆಂಡ್ ಪ್ರವಾಸದಲ್ಲಿ, 5 ಟೆಸ್ಟ್ ಪಂದ್ಯ ಸರಣಿಯಲ್ಲಿ ಎಂ.ಎಸ್.ಧೋನಿ 349 ರನ್ ಸಿಡಿಸಿದ್ದರು.
ಇದನ್ನೂ ಓದಿ: ಮತ್ತೆ ಟೀಂ ಇಂಡಿಯಾ ಜೊತೆ ಅನುಷ್ಕಾ ಶರ್ಮಾ- ಫೋಟೋ ವೈರಲ್!
ಆಸ್ಟ್ರೇಲಿಯಾದಲ್ಲಿ ಸೆಂಚುರಿ ಸಿಡಿಸಿದ 2ನೇ ಕಿರಿಯ ಭಾರತೀಯ ಬ್ಯಾಟ್ಸ್‌ಮನ್ ಅನ್ನೋ ದಾಖಲೆಯನ್ನೂ ರಿಷಬ್ ಪಂತ್ ಬರೆದಿದ್ದಾರೆ. ಪಂತ್ 21 ವರ್ಷ 92ನೇ ದಿನದಲ್ಲಿ ಅಜೇಯ 159 ರನ್ ಸಿಡಿಸಿದರು. ಇದಕ್ಕೂ ಮೊದಲು ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ 18 ವರ್ಷ 256 ಹಾಗೂ 18 ವರ್ಷ 285ನೇ ದಿನದಲ್ಲಿ ಸತತ 2 ಸೆಂಚುರಿ ಸಿಡಿಸಿದ್ದರು.