ಸಿಡ್ನಿ ಟೆಸ್ಟ್: ಎರಡನೇ ದಿನ ಭಾರತದ್ದೇ ದರ್ಬಾರ್

By Web Desk  |  First Published Jan 4, 2019, 12:37 PM IST

ಪಂತ್ ಟೆಸ್ಟ್ ವೃತ್ತಿಜೀವನದ 2ನೇ ಶತಕ ಸಿಡಿಸಿ ಸಂಭ್ರಮಿಸಿದರು. ಪಂತ್ ಉತ್ತಮ ಸಾಥ್ ನೀಡಿದ ಜಡೇಜಾ ಟೆಸ್ಟ್ ವೃತ್ತಿಜೀವನದ 10ನೇ ಅರ್ಧಶತಕ ಸಿಡಿಸಿದರು. 


ಸಿಡ್ನಿ[ಜ.04]: ಭಾರತ-ಆಸ್ಟ್ರೇಲಿಯಾ ನಡುವಿನ ನಾಲ್ಕನೇ ಟೆಸ್ಟ್’ನ ಎರಡನೇ ಭಾರತ ದರ್ಬಾರ್ ನಡೆಸಿದ್ದು, ಆಸಿಸ್ ಮೇಲೆ ಸಂಪೂರ್ಣ ಹಿಡಿತ ಸಾಧಿಸಿದೆ. ಎರಡನೇ ದಿನ ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ 622 ರನ್ ಬಾರಿಸಿ ಡಿಕ್ಲೇರ್ ಮಾಡಿಕೊಂಡಿದೆ. ಇನ್ನು ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್ ಆರಂಭಿಸಿದ್ದು ವಿಕೆಟ್ ನಷ್ಟವಿಲ್ಲದೇ 24 ರನ್ ಬಾರಿಸಿದೆ.

Tap to resize

Latest Videos

303 ರನ್’ಗಳೊಂದಿಗೆ ಎರಡನೇ ಇನ್ನಿಂಗ್ಸ್ ಆರಂಭಿಸಿದ ಭಾರತ ಆರಂಭದಲ್ಲೇ ವಿಹಾರಿ ವಿಕೆಟ್ ಕಳೆದುಕೊಂಡಿತು. ಆಬಳಿಕ ಪಂತ್-ಪೂಜಾರ ಜೋಡಿ ಇನ್ನಿಂಗ್ಸ್ ಮುಂದುವರೆಸಿದರು. ಪೂಜಾರ 193 ರನ್ ಬಾರಿಸಿ ಲಯನ್’ಗೆ ವಿಕೆಟ್ ಒಪ್ಪಿಸಿದರು. ಏಳನೇ ವಿಕೆಟ್’ಗೆ ಜತೆಯಾದ ರವೀಂದ್ರ ಜಡೇಜಾ-ರಿಷಭ್ ಪಂತ್ ಜೋಡಿ ಚುರುಕಾಗಿ ರನ್ ಕಲೆಹಾಕಲು ಮುಂದಾಯಿತು. ಈ ಜೋಡಿ ಆಸಿಸ್ ಬೌಲರ್’ಗಳನ್ನು ಮನಬಂದಂತೆ ದಂಡಿಸಿತು. ಪಂತ್ ಟೆಸ್ಟ್ ವೃತ್ತಿಜೀವನದ 2ನೇ ಶತಕ ಸಿಡಿಸಿ ಸಂಭ್ರಮಿಸಿದರು. ಪಂತ್ ಉತ್ತಮ ಸಾಥ್ ನೀಡಿದ ಜಡೇಜಾ ಟೆಸ್ಟ್ ವೃತ್ತಿಜೀವನದ 10ನೇ ಅರ್ಧಶತಕ ಸಿಡಿಸಿದರು. ಈ ಜೋಡಿ 204 ರನ್’ಗಳ ಜತೆಯಾಟವಾಡಿತು.

ಆಸ್ಟ್ರೇಲಿಯಾ ನೆಲದಲ್ಲಿ ಶತಕ ಸಿಡಿಸಿದ ಭಾರತ ಮೊದಲ ವಿಕೆಟ್’ಕೀಪರ್ ಎನ್ನುವ ಕೀರ್ತಿಗೆ ಪಂತ್ ಪಾತ್ರರಾಗಿದ್ದಾರೆ. ಅಲ್ಲದೇ ಏಷ್ಯಾಖಂಡದ ಆಟಗಾರ ಉಪಖಂಡದಾಚೆ ಗರಿಷ್ಠ ರನ್ ಬಾರಿಸಿದ ವಿಕೆಟ್ ಕೀಪರ್ ಖ್ಯಾತಿಗೆ ಪಂತ್ ಹಾಗೂ ಬಾಂಗ್ಲಾದೇಶದ ಮುಷ್ಫಿಕರ್ ರಹೀಮ್[159] ಪಾತ್ರರಾಗಿದ್ದಾರೆ.

click me!