ಪಾಕಿಸ್ತಾನ ಕ್ರಿಕೆಟ್ ಮಂಡಳಿಗೆ ಬಿಸಿಸಿಐನಿಂದ ಮತ್ತೊಂದು ಶಾಕ್!

By Web DeskFirst Published Dec 19, 2018, 8:19 PM IST
Highlights

ದ್ವಿಪಕ್ಷೀಯ ಸರಣಿ ಆಯೋಜನೆ ಮಾಡಲು ಹಿಂದೇಟು ಹಾಕಿದ ಬಿಸಿಸಿಐ ವಿರುದ್ದ ಕಾನೂನು ಸಮರ ಸಾರಿದ್ದ ಪಾಕಿಸ್ತಾನ ಕ್ರಿಕೆಟ್ ಮಂಡಳಿಗೆ ಇದೀಗ ಐಸಿಸಿ ಮತ್ತೊಂದು ಶಾಕ್ ನೀಡಿದೆ. ಅಷ್ಟಕ್ಕೂ ಐಸಿಸಿ ನೀಡಿದ ಶಾಕ್ ಏನು? ಇಲ್ಲಿದೆ.

ದುಬೈ(ಡಿ.19): ಭಾರತ ಹಾಗೂ ಪಾಕಿಸ್ತಾನ ನಡುವಿನ ದ್ವಿಪಕ್ಷೀಯ ಸರಣಿ ಆಯೋಜನೆ ಮಾಡದ ಬಿಸಿಸಿಐ ವಿರುದ್ಧ ಯುದ್ಧ ಸಾರಿದ್ದ ಪಾಕಿಸ್ತಾನ ಕ್ರಿಕೆಟ್ ಮಂಡಳಿಗೆ(ಪಿಸಿಬಿ) ಮತ್ತೊಂದು ಹಿನ್ನಡೆಯಾಗಿದೆ.  ಸರಣಿ ರದ್ದ ಮಾಡಿದ ಬಿಸಿಸಿಐ ವಿರುದ್ದ 447 ಕೋಟಿ ಪರಿಹಾರ ಕೇಳಿ ಐಸಿಸಿ ಮೊರೆ ಹೋಗಿದ್ದ ಪಿಸಿಬಿಗೆ ಎರಡನೇ ಆಘಾತ ಎದುರಾಗಿದೆ.

ಇದನ್ನೂ ಓದಿ: ಕೊಹ್ಲಿ ನೋಡಿ ಕಲಿಯಿರಿ-ಪಾಕ್ ಕ್ರಿಕೆಟಿಗರಿಗೆ ಜಾವೆದ್ ಸಲಹೆ!

ಪಾಕಿಸ್ತಾನ ಕ್ರಿಕೆಟ್ ಮಂಡಳಿ ಪರಿಹಾರ ಮನವಿಯನ್ನ ತಿರಸ್ಕರಿಸಿದ್ದ ಐಸಿಸಿ ವಿವಾದ ಪರಿಹರಿಸುವ ಸಮಿತಿ(DRC), ಇದೀಗ ಬಿಸಿಸಿಐನ ಕಾನೂನು ವೆಚ್ಚವದ ಶೇಕಡಾ 60 ರಷ್ಟು ಭರಿಸಲು ಪಾಕಿಸ್ತಾನ ಕ್ರಿಕೆಟ್ ಮಂಡಳಿಗೆ ಆದೇಶಿಸಿದೆ. ಇನ್ನುಳಿದ 40 ಶೇಕಡಾ ಮೊತ್ತವನ್ನ DRC ಸಮಿತಿಯ ವೆಚ್ಚವಾಗಿ ನೀಡುವಂತೆ ಆದೇಶಿಸಿದೆ.

ಇದನ್ನೂ ಓದಿ: ಹೈದರಾಬಾದ್‌ನಲ್ಲಿ ಸೈನಾ ನೆಹ್ವಾಲ್-ಪರುಪಳ್ಳಿ ಕಶ್ಯಪ್ ಅದ್ಧೂರಿ ಆರತಕ್ಷತೆ!

447 ಪರಿಹಾರ ಕೇಳಿ ಕಾನೂನು ಹೋರಾಟ ಮಾಡಿದ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಇದೀಗ ಪರಿಹಾರವೂ ಇಲ್ಲ, ಜೊತೆಗೆ ಬಿಸಿಸಿಐ ಕಾನೂನು ಹೋರಾಟದ ವೆಚ್ಚವನ್ನೂ ಭರಿಸುವಂತಾಗಿದೆ. ಆಟಗಾರರ ಸಂಭಾವನೆ ನೀಡಲು ಹೆಣಗಾಡುತ್ತಿರುವ ಪಿಸಿಬಿ ಇದೀಗ ಆರ್ಥಿಕ ಸಂಕಷ್ಟಕ್ಕೆ ಸಿಲುಕಲಿದೆ.

ಇದನ್ನೂ ಓದಿ: ಮತ್ತೆ ಕಳಪೆ ಪ್ರದರ್ಶನ- ಕೆಎಲ್ ರಾಹುಲ್ ವಿರುದ್ದ ಟ್ವಿಟರಿಗರ ಆಕ್ರೋಶ!

click me!