ನಗರದ ಜಂಜಾಟದ ಬದುಕಿನಲ್ಲಿ ನಗುವುದನ್ನೇ ಮರೆತಿದ್ದೇವೆ. ಪರಸ್ಪರ ಬೆರೆಯಲು ಸಮಯವೇ ಇಲ್ಲದಾಗಿದೆ. ಆದರೆ ಇದಕ್ಕೆ ಅಪವಾದ ಎಂಬಂತೆ ಜೈನ್ ಸಹಕಾರ್ ಬ್ಯಾಡ್ಮಿಂಟನ್ ಕಪ್ ಟೂರ್ನಿಯಲ್ಲಿ ಸಮುದಾಯದ 136 ಸ್ಪರ್ಧಿಗಳು ಪಾಲ್ಗೊಂಡಿದ್ದರೆ, ಸಾವಿರಕ್ಕೂ ಹೆಚ್ಚು ಜನ ಕ್ರೀಡಾಹಬ್ಬದಲ್ಲಿ ಸಂತಸದಲ್ಲಿ ತೇಲಾಡಿದರು.
ಬೆಂಗಳೂರು(ಡಿ.19): ಭಗವಾನ್ ಶ್ರಿ ಮಹಾವೀರ್ ಜೈನ್ ಅಸೋಸಿಯೇಶನ್ ಹಾಗೂ ಜೈನ್ ಸಹಕಾರ ಬೆಂಗಳೂರು ಸಹಯೋಗದಲ್ಲಿ ಆಯೋಜಿಸಲಾದ ಜೈನ್ ಸಹಕಾರ್ ಬ್ಯಾಡ್ಮಿಂಟನ್ ಕಪ್ ಟೂರ್ನಿ ಯಶಸ್ವಿಯಾಗಿ ನಡೆದಿದೆ.
ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ನಿರ್ದೇಶಕ ಶ್ರೇಯಸ್ ಕುಮಾರ್, ವಿಜಯನಗರ ವಿಧಾನ ಸಭಾ ಕ್ಷೇತ್ರದ ಶಾಸಕ ಎಂ.ಕೃಷ್ಣಪ್ಪ ಅವರಿಂದ ಉದ್ಘಾಟನೆಗೊಂಡ ಟೂರ್ನಿಯಲ್ಲಿ ಬೆಂಗಳೂರಿನಲ್ಲಿ ನೆಲೆಸಿರುವ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಮಹಿಳೆಯರು, ಪುರುಷರು ಹಾಗೂ ಮಕ್ಕಳು ಸೇರಿದಂತೆ 136 ಸ್ಪರ್ಧಿಗಳು ಪಾಲ್ಗೊಂಡಿದ್ದರು.
ಇದನ್ನೂ ಓದಿ: ಹರಾಜಿನ ಬಳಿಕ RCB ಕಂಪ್ಲೀಟ್ ತಂಡ ಹೀಗಿದೆ ನೋಡಿ!
ಪುರುಷರು, ಮಹಿಳೆಯರು ಹಾಗೂ ಮಕ್ಕಳ ವಿಭಾಗದಲ್ಲಿ ನಡೆದ ಬ್ಯಾಡ್ಮಿಂಟನ್ ಹಾಗೂ ಕೇರಂ ಟೂರ್ನಿಯಲ್ಲಿ ವಿಜೇತರಾದ 18 ಸ್ಪರ್ಧಿಗಳಿಗೆ ಖ್ಯಾತ ಸಾಹಿತಿ ಡಾ.ಕಮಲಾ ಹಂಪನಾ ಹಾಗೂ ಕರ್ನಾಟಕ ಬಾರ್ ಕೌನ್ಸಿಲ್ ಅಧ್ಯಕ್ಷ ಪದ್ಮ ಪ್ರಸಾದ್ ಹೆಗ್ಡೆ ಪ್ರಶಸ್ತಿ ವಿತರಿಸಿದರು.
ಇದನ್ನೂ ಓದಿ: ಮೈದಾನದಲ್ಲೇ ಕಿತ್ತಾಡಿಕೊಂಡ ಜಡೇಜಾ-ಇಶಾಂತ್..! ವಿಡಿಯೋ ವೈರಲ್
ಜೈನ್ ಸಹಾಕಾರ್ ಪ್ರಧಾನ ಕಾರ್ಯದರ್ಶಿ ಹರ್ಷೇಂದ್ರ ಜೈನ್ ನೇತೃತ್ವದಲ್ಲಿ ಆಯೋಜಿಸಲಾದ ಬ್ಯಾಡ್ಮಿಂಟನ್ ಕಪ್ ಕ್ರೀಡಾಹಬ್ಬದಲ್ಲಿ 1000ಕ್ಕೂ ಹೆಚ್ಚು ಜನ ಪಾಲ್ಗೊಂಡಿದ್ದರು.
ಇದನ್ನೂ ಓದಿ: ಐಪಿಎಲ್ ಹರಾಜಿನಲ್ಲಿ ಅನ್‌ಸೋಲ್ಡ್-ಗರಂ ಆದ ಟೀಂ ಇಂಡಿಯಾ ಕ್ರಿಕೆಟಿಗ!
ಮಂಗಳೂರಿನ ವಿಶೇಷ ತಿನಿಸುಗಳು, ಊಟ ಈ ಟೂರ್ನಿಯ ಪ್ರಮುಖ ಆಕರ್ಣೆಯಾಗಿತ್ತು. ಕ್ರೀಡಾಹಬ್ಬದಲ್ಲಿ ಐಪಿಎಸ್ ಅಧಿಕಾರಿ ಜಿನೇಂದ್ರ ಖನಗಾವಿ, ವಕೀಲರಾದ ಕೆ.ಬಿ ಯುವರಾಜ್ ಬಳ್ಳಾಲ್, ಲೇಖಕರಾದ ನಿಹಾಲ್ ಜೈನ್, ರೇಡಿಯೋ ಜಾಕಿ ರಜಸ್ ಜೈನ್, ಜೈನ್ ಸಹಕಾರ್ ಸಂಘದ ಶ್ರೀಕಾಂತ್ ಜೈನ್, ಯಶೋಧರ್ ಅಧಿಕಾರಿ ಸೇರಿದಂತೆ ಪ್ರಮುಖ ಗಣ್ಯರು ಉಪಸ್ಥಿತರಿದ್ದರು.
ಕಳೆದ 8 ವರ್ಷಗಳಿಂದ ಸಮುದಾದ ಏಳಿಗೆಗಾಗಿ ಶ್ರಮಿಸುತ್ತಿರುವ ಭಗವಾನ್ ಶ್ರಿ ಮಹಾವೀರ ಜೈನ್ ಸಂಘ, ಶೈಕ್ಷಣಿಕ, ಧಾರ್ಮಿಕ ಸೇರಿದಂತೆ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದು, ಕರ್ನಾಟಕದಲ್ಲಿ ಪ್ರಶಂಸೆಗೆ ಪಾತ್ರವಾಗಿದೆ.