ನಾಯಿ ಪ್ರೇಮಿ ಐಎಎಸ್ ದಂಪತಿಗಳು ಲಡಾಕ್, ಅರುಣಾಚಲ ಪ್ರದೇಶಕ್ಕೆ ವರ್ಗಾವಣೆ!

Published : May 27, 2022, 09:39 AM ISTUpdated : May 27, 2022, 09:49 AM IST
ನಾಯಿ ಪ್ರೇಮಿ ಐಎಎಸ್ ದಂಪತಿಗಳು ಲಡಾಕ್, ಅರುಣಾಚಲ ಪ್ರದೇಶಕ್ಕೆ ವರ್ಗಾವಣೆ!

ಸಾರಾಂಶ

ದೆಹಲಿಯ ಪ್ರಧಾನ ಕಾರ್ಯದರ್ಶಿ (ಕಂದಾಯ) ಸಂಜೀವ್ ಖಿರ್ವಾರ್ ಮತ್ತು ಅವರ ಪತ್ನಿ ರಿಂಕು ದುಗ್ಗಾ ಅವರು ತ್ಯಾಗರಾಜ್ ಕ್ರೀಡಾಂಗಣವನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಮಾಧ್ಯಮ ವರದಿಗಳು ಬಹಿರಂಗಪಡಿಸಿದ ಗಂಟೆಗಳ ನಂತರ, ಇಬ್ಬರು ಐಎಎಸ್ ಅಧಿಕಾರಿಗಳನ್ನು ದೆಹಲಿಯಿಂದ ಕ್ರಮವಾಗಿ ಲಡಾಖ್ ಮತ್ತು ಅರುಣಾಚಲ ಪ್ರದೇಶಕ್ಕೆ ವರ್ಗಾಯಿಸಲಾಯಿತು.  

ನವದೆಹಲಿ (ಮೇ. 27): ತನ್ನ ನಾಯಿಯ ಜೊತೆ ವಾಕಿಂಗ್ ಮಾಡುವ ಸಲುವಾಗಿ ದೆಹಲಿಯ ಕ್ರೀಡಾಂಗಣದಲ್ಲಿ(Delhi Stadium)  ತರಬೇತಿ ನಡೆಸುತ್ತಿದ್ದ ಅಥ್ಲೀಟ್ ಗಳನ್ನು ತೆರವು ಮಾಡಿದ್ದ ಐಎಎಸ್ ಅಧಿಕಾರಿ ಸಂಜೀವ್ ಖಿರ್ವಾರ್ (IAS officer Sanjeev Khirwar) ವಿರುದ್ಧ ಸರ್ಕಾರ ಕ್ರಮ ಕೈಗೊಂಡಿದ್ದು ಅವರನ್ನು ಲಡಾಖ್ ಗೆ (Ladakh ) ವರ್ಗಾವಣೆ ಮಾಡಿದೆ. ಅವರ ಪತ್ನಿ ರಿಂಕು ದುಗ್ಗಾ ಅವರನ್ನು ಅರುಣಾಚಲ ಪ್ರದೇಶಕ್ಕೆ (Arunachal Pradesh) ವರ್ಗಾವಣೆ ಮಾಡಲಾಗಿದೆ.

ಭಾರತೀಯ ಆಡಳಿತ ಸೇವೆಗಳ ಅಧಿಕಾರಿಯು ದೆಹಲಿಯ ತ್ಯಾಗರಾಜ್ ಸ್ಟೇಡಿಯಂನಲ್ಲಿ ನಾಯಿಯ ಜೊತೆ ವಾಕಿಂಗ್ ಮಾಡುವ ಸಲುವಾಗಿ ಬಳಸಿಕೊಂಡಿದ್ದರು. ಇದರಿಂದಾಗಿ ಸಂಜೆ ನಿಗದಿತ ಅವಧಿಗೂ ಮುನ್ನವೇ ತರಬೇತಿ ನಡೆಸುತ್ತಿದ್ದ ಅಥ್ಲೀಟ್ ಗಳನ್ನು ಸ್ಟೇಡಿಯಂನಿಂದ ಖಾಲಿ ಮಾಡುವಂತೆ ಸೂಚಿಸಲಾಗಿತ್ತು ಎಂದು ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿತ್ತು. ಕಳೆದ ಕೆಲವು ತಿಂಗಳುಗಳಿಂದ ಇದು ನಡೆಯುತ್ತಿತ್ತಾದರೂ, ಮಾಧ್ಯಮ ವರದಿ ಪ್ರಕಟವಾದ ಕೆಲ ಹೊತ್ತಿನಲ್ಲಿಯೇ ಗೃಹ ವ್ಯವಹಾರಗಳ ಸಚಿವಾಲಯ (MHA) ಇಬ್ಬರೂ ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡುವ ಮೂಲಕ ಕ್ರಮ ಕೈಗೊಂಡಿದೆ.

ಸಂಜೀವ್ ಖಿರ್ವಾರ್ ಮತ್ತು ಅವರ ಪತ್ನಿ ರಿಂಕು ದುಗ್ಗಾ ಅವರು ತ್ಯಾಗರಾಜ್ ಕ್ರೀಡಾಂಗಣದಲ್ಲಿ ಸೌಲಭ್ಯಗಳನ್ನು ದುರುಪಯೋಗಪಡಿಸಿಕೊಂಡ ಬಗ್ಗೆ ಸುದ್ದಿ ವರದಿಯ ಕುರಿತು MHA ದೆಹಲಿಯ ಮುಖ್ಯ ಕಾರ್ಯದರ್ಶಿಯಿಂದ ವರದಿಯನ್ನು ಕೇಳಿತ್ತು. ಮುಖ್ಯ ಕಾರ್ಯದರ್ಶಿಯವರು ಸಂಜೆಯ ನಂತರ ಗೃಹ ಇಲಾಖೆಗೆ ಈ ಕುರಿತಾದ ಸವಿಸ್ತಾರ ವರದಿಯನ್ನು ಸಲ್ಲಿಕೆ ಮಾಡಿದ್ದರು. "ಈ ನಡುವೆ ಸಂಜೀವ್ ಖಿರ್ವಾರ್ ಅವರನ್ನು ಲಡಾಖ್‌ಗೆ ಮತ್ತು ರಿಂಕು ಧುಗ್ಗಾ ಅವರನ್ನು ಅರುಣಾಚಲ ಪ್ರದೇಶಕ್ಕೆ ಗೃಹ ಇಲಾಖೆ  ವರ್ಗಾವಣೆ ಮಾಡಿದ. ವರದಿಯ ಆಧಾರದ ಮೇಲೆ ಅಗತ್ಯ ಕ್ರಮವನ್ನು ಪ್ರಾರಂಭಿಸಲಾಗುತ್ತದೆ' ಎಂದು ಗೃಹ ಇಲಾಖೆ ತಿಳಿಸಿದೆ.

“ನಾವು ಮೊದಲು ಫ್ಲಡ್ ಲೈಟ್ಸ್ ಅಡಿಯಲ್ಲಿ ರಾತ್ರಿ 8-8.30 ರವರೆಗೆ ತರಬೇತಿಯಲ್ಲಿ ನಿರತರಾಗುತ್ತಿದ್ದೆವು. ಆದರೆ ಈಗ, ಅಧಿಕಾರಿಯು ತನ್ನ ನಾಯಿಯ ಜೊತೆ ಟರ್ಫ್ ಮೇಲೆ ವಾಕಿಂಗ್ ಮಾಡುವ ಸಲುವಾಗಿ, ನಮಗೆ ಸಂಜೆ 7 ಗಂಟೆಗೆ ಮೈದಾನದಿಂದ ಹೊರಡಲು ಹೇಳಲಾಗುತ್ತಿ. ನಮ್ಮ ತರಬೇತಿ ಮತ್ತು ಅಭ್ಯಾಸದ ದಿನಚರಿ ಇದರಿಂದಾಗಿ ಅಸ್ತವ್ಯಸ್ತಗೊಂಡಿದೆ' ಎಂದು ತರಬೇತುದಾರರೊಬ್ಬರು ಹೇಳಿದರು.

ಈ ಕುರಿತಂತೆ 1994 ಬ್ಯಾಚ್ ನ ಐಎಎಸ್ ಅಧಿಕಾರಿ ಖಿರ್ವಾರ್ ಅವರನ್ನು ಪ್ರಶ್ನೆ ಮಾಡಿದಾಗ, ನನ್ನ ಮೇಲೆ ಹೊರಿಸಿರುವ ಆರೋಪ ಶುದ್ಧ ಸುಳ್ಳು ಎಂದು ಹೇಳಿದಳು. ತೀರಾ ಅಪರೂಪಕ್ಕೆ ನಾನು ನಾಯಿಯನ್ನು ಕರೆದುಕೊಂಡು ಸ್ಟೇಡಿಯಂಗೆ ಹೋಗುತ್ತಿದ್ದೆ ಎನ್ನುವುದನ್ನು ಒಪ್ಪಿಕೊಂಡ ಖಿರ್ವಾರ್, ಇದರಿಂದಾಗಿ ಅಥ್ಲೀಟ್ ಗಳ ಅಭ್ಯಾಸಕ್ಕೆ ಅಡ್ಡಿಯಾಗಿದೆ ಎನ್ನುವುದು ಸಂಪೂರ್ಣವಾಗಿ ಸುಳ್ಳು ಎಂದರು. ಇನ್ನು ಕಳೆದ ಮೂರು ದಿನಗಳಿಂದ ಸ್ಟೇಡಿಯಂನ ಬಳಿ ಗಮನಿಸಿದಾಗ, ಸಂಜೆ 6.30ರ ವೇಳೆಗೆ ಸ್ಟೇಡಿಯಂನ ಗಾರ್ಡ್ಸ್ ಗಳು ಸೀಟಿ ಊದುತ್ತಾ 7 ಗಂಟೆಯ ಒಳಗಾಗಿ ಸ್ಟೇಡಿಯಂಅನ್‌ನು ಖಾಲಿ ಮಾಡುವಂತೆ ಸೂಚನೆ ನೀಡುತ್ತಿರುವುದು ಕಂಡಿದೆ. 

1994ರ ಬ್ಯಾಚ್ ನ ಐಎಎಸ್ ಅಧಿಕಾರಿಯಾಗಿರುವ  ಸಂಜೀವ್ ಖಿರ್ವಾರ್, ದೆಹಲಿಯ ಕಂದಾಯ ಕಮೀಷನರ್ ಆಗಿ ಸೇವೆ ಸಲ್ಲಿಸುತ್ತಿದ್ದರು. ದೆಹಲಿಯ ಎಲ್ಲಾ ಜಿಲ್ಲಾಧಿಕಾರಿಗಳು ಇವರ ಅಡಿಯಲ್ಲಿ ಕೆಲಸ ಮಾಡುತ್ತಿದ್ದರು. ಇದರಿಂದಿಗೆ ದೆಹಲಿಯ ಪರಿಸರ ಇಲಾಖೆಯ ಕಾರ್ಯದರ್ಶಿಯಾಗಿಯೂ ಸಂಜೀವ್ ಖಿರ್ವಾರ್ ಸೇವೆ ಸಲ್ಲಿಕೆ ಮಾಡುತ್ತಿದ್ದರು. ಸಂಜೀವ್ ದೆಹಲಿಯ ಐಐಟಿಯಲ್ಲಿ ಕಂಪ್ಯೂಟರ್ ಇಂಜಿನಿಯರಿಂಗ್‌ನಲ್ಲಿ ಬಿ-ಟೆಕ್ ಹಾಗೂ ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದವರಾಗಿದ್ದಾರೆ.

ನಾಯಿ ಜೊತೆ ಐಎಎಸ್ ಅಧಿಕಾರಿಯ ವಾಕಿಂಗ್, ಅದಕ್ಕಾಗಿ ಅಥ್ಲೀಟ್ಸ್ ಗಳನ್ನು ಸ್ಟೇಡಿಯಂನಿಂದ ಹೊರಹಾಕಿದರು!

ಖಿರ್ವಾರ್ ಚಂಡೀಗಢದಲ್ಲಿ ಎಸ್ ಡಿಎಂ ಆಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ್ದರು. ದೆಹಲಿ, ಗೋವಾ, ಅಂಡಮಾನ್ ಮತ್ತು ನಿಕೋಬಾರ್, ಅರುಣಾಚಲ ಪ್ರದೇಶದಲ್ಲಿ ಸೇವೆ ಸಲ್ಲಿಸಿದ್ದಾರೆ. ಇದರೊಂದಿಗೆ ಭಾರತ ಸರ್ಕಾರದಲ್ಲಿ ಹಲವು ಪ್ರಮುಖ ಹುದ್ದೆಗಳನ್ನೂ ಅಲಂಕರಿಸಿದ್ದಾರೆ. ಈ ಹಿಂದೆ ಅವರು ದೆಹಲಿಯಲ್ಲಿ ವ್ಯಾಪಾರ ಮತ್ತು ತೆರಿಗೆ ಆಯುಕ್ತರಾಗಿಯೂ ಕೆಲಸ ಮಾಡಿದ್ದರು.

ಪ್ರವಾಹಪೀಡಿತ ಅಸ್ಸಾಂನಲ್ಲಿ ತಾವೇ ದೋಣಿ ಏರಿ ಜನರ ರಕ್ಷಣೆಗೆ ಬಂದ ಮಹಿಳಾ ಐಎಎಸ್‌ ಅಧಿಕಾರಿ!

ಸಹ ಐಎಎಸ್ ಅಧಿಕಾರಿಯಾಗಿದ್ದ ರಿಂಕು ದುಗ್ಗಾರನ್ನು ಪ್ರೀತಿಸಿ ಸಂಜೀವ್ ಖಿರ್ವಾರ್ ಮದುವೆಯಾಗಿದ್ದರು. ರಿಂಕು ದುಗ್ಗಾ ಕೂಡ 1994ರ ಬ್ಯಾಚ್ ನ ಐಎಎಸ್ ಅಧಿಕಾರಿಯಾಗಿದ್ದಾರೆ. ಐಎಎಸ್ ಓದುವ ವೇಳೆ ಇವರಿಬ್ಬರ ನಡುವೆ ಸ್ನೇಹ ಬೆಳೆದಿತ್ತು, ನಂತರ ಅದು ಪ್ರೀತಿಗೆ ತಿರುಗಿ ಇಬ್ಬರೂ ಮನೆಯವರ ಒಪ್ಪಿಗೆಯೊಂದಿಗೆ ಮದುವೆಯಾಗಿದ್ದರು. ಸಂಜೀವ್ ಖಿರ್ವಾರ್ ದೆಹಲಿಯವರಾಗಿದ್ದರೆ, ರಿಂಕು ಹರ್ಯಾಣದವರು. 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಅಂಧರ ವಿಶ್ವಕಪ್ ಹೀರೋಯಿನ್ಸ್‌ಗಳಿಗೆ ದೊಡ್ಮನೆಯಿಂದ ಗೌರವ: ರಾಜ್ ಕುಟುಂಬದ ಆತಿಥ್ಯಕ್ಕೆ ಮೈಮರೆತ ಚಾಂಪಿಯನ್ನರು!
ಜೈಸ್ವಾಲ್‌ ಸಖತ್‌ ಸೆಂಚುರಿ, ಟೆಸ್ಟ್‌ ಸರಣಿ ಸೋಲಿಗೆ ಏಕದಿನದಲ್ಲಿ ಸೇಡು ತೀರಿಸಿಕೊಂಡ ಭಾರತ!