ರವೀಂದ್ರ ಜಡೇಜಾ ಬೌಲಿಂಗ್’ನಲ್ಲಿ ಆಸಿಸ್ ಆರಂಭಿಕ ಬ್ಯಾಟ್ಸ್’ಮನ್ ಮಾರ್ಕಸ್ ಹ್ಯಾರಿಸ್ ಬೀಸಿ ಹೊಡೆಯುವ ಯತ್ನ ಮಾಡಿದರು. ಈ ವೇಳೆ ಮಿಡ್ ಆನ್’ನಲ್ಲಿ ಕ್ಷೇತ್ರರಕ್ಷಣೆ ಮಾಡುತ್ತಿದ್ದ ರಾಹುಲ್ ಕ್ಯಾಚ್ ಹಿಡಿಯುವ ಯತ್ನ ನಡೆಸಿದರು. ಮೇಲ್ನೋಟಕ್ಕೆ ಎಲ್ಲರೂ ರಾಹುಲ್ ಕ್ಯಾಚ್ ಹಿಡಿದರು ಎಂದೇ ಭಾವಿಸಿದರು.
ಬೆಂಗಳೂರು[ಜ.05]: ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಬ್ಯಾಟಿಂಗ್’ನಲ್ಲಿ ಪದೇ ಪದೇ ನಿರಾಸೆ ಅನುಭವಿಸುತ್ತಿರುವ ಕನ್ನಡಿಗ ಕೆ.ಎಲ್ ರಾಹುಲ್ ಸಿಡ್ನಿ ಟೆಸ್ಟ್’ನ ಮೂರನೇ ದಿನ ಕ್ರೀಡಾಸ್ಫೂರ್ತಿ ಮೆರೆಯುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ರವೀಂದ್ರ ಜಡೇಜಾ ಬೌಲಿಂಗ್’ನಲ್ಲಿ ಆಸಿಸ್ ಆರಂಭಿಕ ಬ್ಯಾಟ್ಸ್’ಮನ್ ಮಾರ್ಕಸ್ ಹ್ಯಾರಿಸ್ ಬೀಸಿ ಹೊಡೆಯುವ ಯತ್ನ ಮಾಡಿದರು. ಈ ವೇಳೆ ಮಿಡ್ ಆನ್’ನಲ್ಲಿ ಕ್ಷೇತ್ರರಕ್ಷಣೆ ಮಾಡುತ್ತಿದ್ದ ರಾಹುಲ್ ಕ್ಯಾಚ್ ಹಿಡಿಯುವ ಯತ್ನ ನಡೆಸಿದರು. ಮೇಲ್ನೋಟಕ್ಕೆ ಎಲ್ಲರೂ ರಾಹುಲ್ ಕ್ಯಾಚ್ ಹಿಡಿದರು ಎಂದೇ ಭಾವಿಸಿದರು. ಆದರೆ ಕೆ.ಎಲ್ ರಾಹುಲ್ ಸ್ವತಃ ಕ್ಯಾಚ್ ನೆಲಕ್ಕೆ ತಾಗಿದೆ ಎಂದು ಪ್ರಾಮಾಣಿಕವಾಗಿ ಹೇಳುವ ಮೂಲಕ ಕ್ರೀಡಾಸ್ಫೂರ್ತಿ ಮೆರೆದರು. ರಾಹುಲ್ ಅವರ ಈ ನಡೆ ಅಂಪೈರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಇಯಾನ್ ಗೋಲ್ಡ್ ಅವರ ಮೆಚ್ಚುಗೆಗೂ ಪಾತ್ರವಾಯಿತು.
ಹೀಗಿತ್ತು ನೋಡಿ ಆ ಕ್ಷಣ..
A good effort from Rahul and he immediately says it bounced. Great stuff. Umpire Gould a big fan of it | pic.twitter.com/7nA0H5Lsc7
— cricket.com.au (@cricketcomau)ಈ ಸಂದರ್ಭದಲ್ಲಿ ಮಾರ್ಕಸ್ ಹ್ಯಾರಿಸ್ 24 ರನ್ ಬಾರಿಸಿದ್ದರು. ಸಿಕ್ಕ ಜೀವದಾನವನ್ನು ಸರಿಯಾಗಿಯೇ ಉಪಯೋಗಿಸಿಕೊಂಡ ಹ್ಯಾರಿಸ್ 120 ಎಸೆತಗಳನ್ನು ಎದುರಿಸಿ 79 ರನ್ ಸಿಡಿಸಿದರು. ತಂಡದ ಮೊತ್ತ 122 ರನ್’ಗಳಾಗಿದ್ದಾಗ ರವೀಂದ್ರ ಜಡೇಜಾ, ಆಸಿಸ್ ಆರಂಭಿಕ ಬ್ಯಾಟ್ಸ್’ಮನ್ ಹ್ಯಾರಿಸ್ ಬಲಿ ಪಡೆಯುವಲ್ಲಿ ಯಶಸ್ವಿಯಾದರು. ಸಿಡ್ನಿ ಟೆಸ್ಟ್’ನ ಮೂರನೇ ದಿನದಂತ್ಯಕ್ಕೆ ಆಸ್ಟ್ರೇಲಿಯಾ 6 ವಿಕೆಟ್ ಕಳೆದುಕೊಂಡು 236 ರನ್ ಬಾರಿಸಿದ್ದು, ಇನ್ನೂ 386 ರನ್’ಗಳ ಹಿನ್ನಡೆಯಲ್ಲಿದೆ.