ರಣಜಿ ಟ್ರೋಫಿ: ಕರ್ನಾಟಕ ತಂಡಕ್ಕೆ ಶುಭಾಂಗ್ ಆಯ್ಕೆ

By Web Desk  |  First Published Jan 5, 2019, 3:17 PM IST

ಕರ್ನಾಟಕ 7 ಪಂದ್ಯಗಳಲ್ಲಿ 3 ಗೆಲುವು, 3 ಡ್ರಾ, 1 ಸೋಲಿನೊಂದಿಗೆ ಒಟ್ಟು 27 ಅಂಕ ಪಡೆದಿದ್ದು, ‘ಎ’ ಹಾಗೂ ‘ಬಿ’ ಗುಂಪಿನ ಒಟ್ಟಾರೆ ಅಂಕಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದೆ.


ಬೆಂಗಳೂರು: ಜ. 7 ರಿಂದ ವಡೋದರಲ್ಲಿ ರಣಜಿ ಟ್ರೋಫಿ ಎಲೈಟ್ ‘ಎ’ ಗುಂಪಿನಲ್ಲಿ ಬರೋಡ ವಿರುದ್ಧ ನಡೆಯುವ ಪಂದ್ಯಕ್ಕೆ ಯುವ ಎಡಗೈ ಸ್ಪಿನ್ನರ್ ಶುಭಾಂಗ್ ಹೆಗ್ಡೆ ಸ್ಥಾನ ಪಡೆಯುವಲ್ಲಿ ಸಫಲರಾಗಿದ್ದಾರೆ. 
ಕಿರಿಯರ ಕ್ರಿಕೆಟ್ ಟೂರ್ನಿಯಲ್ಲಿ ತೋರಿದ ಅದ್ಭುತ ಪ್ರದರ್ಶನದಿಂದಾಗಿ ಶುಭಾಂಗ್ ರಣಜಿ ತಂಡದಲ್ಲಿ ಮೊದಲ ಬಾರಿಗೆ ಸ್ಥಾನ ಗಿಟ್ಟಿಸುವಲ್ಲಿ ಯಶಸ್ವಿಯಾಗಿದ್ದಾರೆ.

ರಣಜಿ ಟ್ರೋಫಿ: ಕ್ವಾರ್ಟರ್‌ ಫೈನಲ್‌ ಹೊಸ್ತಿಲಲ್ಲಿ ಕರ್ನಾಟಕ

ಅನುಭವಿ ಬ್ಯಾಟ್ಸ್‌ಮನ್‌ಗಳಾದ ಕರುಣ್ ನಾಯರ್ ಮತ್ತು ರವಿಕುಮಾರ್ ಸಮರ್ಥ್ ತಂಡಕ್ಕೆ ಮರಳಿದ್ದು, ಲಿಯಾನ್ ಖಾನ್ ಹಾಗೂ ದೇವದತ್ ಪಡಿಕ್ಕಲ್‌ರನ್ನು ಕೈ ಬಿಡಲಾಗಿದೆ. ಇನ್ನು ಕೈ ಬೆರಳಿನ ಗಾಯಕ್ಕೆ ತುತ್ತಾಗಿರುವ ಕೆ. ಗೌತಮ್ ಕೂಡ ತಂಡದಿಂದ ಹೊರಗುಳಿದಿದ್ದಾರೆ.

Tap to resize

Latest Videos

ಕರ್ನಾಟಕ 7 ಪಂದ್ಯಗಳಲ್ಲಿ 3 ಗೆಲುವು, 3 ಡ್ರಾ, 1 ಸೋಲಿನೊಂದಿಗೆ ಒಟ್ಟು 27 ಅಂಕ ಪಡೆದಿದ್ದು, ‘ಎ’ ಹಾಗೂ ‘ಬಿ’ ಗುಂಪಿನ ಒಟ್ಟಾರೆ ಅಂಕಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದೆ. ಅಗ್ರಸ್ಥಾನದಲ್ಲಿರುವ ವಿದರ್ಭಕ್ಕಿಂತ ಕೇವಲ 1 ಅಂಕ ಹಿಂದಿರುವ ಕರ್ನಾಟಕ ಬರೋಡ ವಿರುದ್ಧ ಗೆಲುವು ಇಲ್ಲವೇ ಡ್ರಾ ಮಾಡಿಕೊಂಡರೂ ಅನಾಯಾಸವಾಗಿ ಕ್ವಾರ್ಟರ್ ಫೈನಲ್ ಪ್ರವೇಶಿಸಲಿದೆ. 
 

click me!