2017ರ ಮಹಿಳಾ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡವನ್ನು ಫೈನಲ್’ಗೇರಲು ಪ್ರಮುಖ ಪಾತ್ರ ವಹಿಸಿದ್ದ ಹರ್ಮನ್’ಪ್ರೀತ್ ಕೌರ್ ಅವರಿಗೆ ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರೀಂದರ್ ಸಿಂಗ್ ಸರ್ಕಾರ ಗೌರವ ಡಿಎಸ್ಪಿ ಹುದ್ದೆ ನೀಡಿ ಗೌರವಿಸಿತ್ತು.
ಚಂಢೀಗಡ[ಜು.10]: ನಕಲಿ ಪದವಿ ಪ್ರಮಾಣ ಪತ್ರ ನೀಡಿದ ಹಿನ್ನಲೆಯಲ್ಲಿ ಭಾರತ ಮಹಿಳಾ ಟಿ20 ಕ್ರಿಕೆಟ್ ತಂಡದ ನಾಯಕಿ ಹರ್ಮನ್’ಪ್ರೀತ್ ಕೌರ್ ಅವರಿಗೆ ಪಂಜಾಬ್ ಸರ್ಕಾರ ನೀಡಲಾಗಿದ್ದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ[ಡಿಎಸ್ಪಿ] ಹುದ್ದೆಯನ್ನು ಹಿಂಪಡೆದಿದೆ.
ಹರ್ಮನ್’ಪ್ರೀತ್ ಕೌರ್ ಒದಗಿಸಿರುವ ಪದವಿ ಪ್ರಮಾಣ ಪತ್ರಗಳು ನಕಲಿ ಎಂದು ದೃಢಪಟ್ಟಿರುವ ಹಿನ್ನಲೆಯಲ್ಲಿ ಪಂಜಾಬ್ ಗೃಹ ಸಚಿವಾಲಯ ಈ ನಿರ್ಧಾರಕ್ಕೆ ಬಂದಿದೆ. ಹೀಗಾಗಿ ಹರ್ಮನ್’ಪ್ರೀತ್ ಶಿಕ್ಷಣ ದ್ವಿತಿಯ ಪಿಯುಸಿ ಎಂದು ಪರಿಗಣಿಸಿ ಕಾನ್’ಸ್ಟೆಬಲ್ ದರ್ಜೆಯ ಹುದ್ದೆ ನೀಡುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.
2011ರಲ್ಲಿ ಮೀರತ್’ನ ಚೌಧರಿ ಚರಣ್’ಸಿಂಗ್ ವಿವಿಯಲ್ಲಿ ಡಿಗ್ರಿ ಪಡೆದಿರುವುದಾಗಿ ಹರ್ಮನ್’ಪ್ರೀತ್ ಪ್ರಮಾಣ ಪತ್ರ ಸಲ್ಲಿಸಿದ್ದರು. ಇದೀಗ ಚರಣ್’ಸಿಂಗ್ ವಿವಿಯು ತಮ್ಮಲ್ಲಿ ಕೌರ್ ವ್ಯಾಸಂಗ ಮಾಡಿಲ್ಲ ಎಂದು ಸ್ಪಷ್ಟ ಪಡಿಸಿದ ಹಿನ್ನಲೆಯಲ್ಲಿ ಪಂಜಾಬ್ ಸರ್ಕಾರ ಗೌರವಾನ್ವಿತವಾಗಿ ನೀಡಿದ್ದ ಹುದ್ದೆಯನ್ನು ಹಿಂಪಡೆದಿದೆ. ಅರ್ಜುನ ಪ್ರಶಸ್ತಿ ವಿಜೇತೆ ಹರ್ಮನ್’ಪ್ರೀತ್ ಕೌರ್ ಈ ಮೊದಲು ಭಾರತೀಯ ರೈಲ್ವೆ ಇಲಾಖೆಯಲ್ಲಿ ಉದ್ಯೋಗಿಯಾಗಿದ್ದರು. ಆ ಬಳಿಕ ರೈಲ್ವೆ ಇಲಾಖೆಯ ಹುದ್ದೆಗೆ ರಾಜಿನಾಮೆ ನೀಡಿ ಡಿಎಸ್ಪಿ ಹುದ್ದೆ ಅಲಂಕರಿಸಿದ್ದರು.
ಇದನ್ನು ಓದಿ: ಇಂಗ್ಲೆಂಡ್ ಟಿ20 ಲೀಗ್ ಟೂರ್ನಿ ಆಡಲಿದ್ದಾರೆ ಹರ್ಮನ್‌ಪ್ರೀತ್
ಇದೇ ರೀತಿಯ ಪ್ರಕರಣ ಫೆಬ್ರವರಿಯಲ್ಲೂ ನಡೆದಿತ್ತು. ಕಾಮನ್’ವೆಲ್ತ್ ಗೇಮ್ಸ್’ನಲ್ಲಿ ಚಿನ್ನದ ಪದಕ ಗೆದ್ದಿದ್ದ ಮನ್ದೀಪ್ ಕೌರ್ ಅವರಿಗೂ ಡಿಎಸ್ಪಿ ಹುದ್ದೆ ನೀಡಲಾಗಿತ್ತು. ಆ ಬಳಿಕ ಅವರ ಪದವಿ ಪ್ರಮಾಣ ಪತ್ರ ನಕಲಿ ಎಂದು ಸಾಭೀತಾದ ಹಿನ್ನಲೆಯಲ್ಲಿ ಡಿಎಸ್ಪಿ ಹುದ್ದೆಯನ್ನು ಅವರಿಂದ ಹಿಂಪಡೆಯಲಾಗಿತ್ತು.
2017ರ ಮಹಿಳಾ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡವನ್ನು ಫೈನಲ್’ಗೇರಲು ಪ್ರಮುಖ ಪಾತ್ರ ವಹಿಸಿದ್ದ ಹರ್ಮನ್’ಪ್ರೀತ್ ಕೌರ್ ಅವರಿಗೆ ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರೀಂದರ್ ಸಿಂಗ್ ಸರ್ಕಾರ ಗೌರವ ಡಿಎಸ್ಪಿ ಹುದ್ದೆ ನೀಡಿ ಗೌರವಿಸಿತ್ತು.
ಇದನ್ನು ಓದಿ: ಪೊಲೀಸ್ ಹುದ್ದೆ ಕಳೆದುಕೊಳ್ತಾರ ಮಹಿಳಾ ಕ್ರಿಕೆಟ್ ಆಟಗಾರ್ತಿ ಹರ್ಮನ್‌ಪ್ರೀತ್?